ಮಾರಕಾಸ್ತ್ರಗಳಿಂದ ಹಲ್ಲೆ..ಗೆಳೆಯರಿಂದ ಗೆಳೆಯನ ಮೇಲೆ ಹಲ್ಲೆ

ಬೆಳಗಾವಿ

ಕಳೆದ ರಾತ್ರಿ ಹಳೆ ವೈಷಮ್ಯದ ಹಿನ್ನಲೆಯಲ್ಲಿ ಗೆಳೆಯರೇ ಸೇರಿಕೊಂಡು ಗೆಳೆಯನೊಬ್ಬನಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ಹೋಟೆಲ್ ಒಂದರ ಬಳಿ ನಡೆದಿದೆ.

ಬಾಳೆಕುಂದ್ರಿ ಗ್ರಾಮದ ನಿವಾಸಿ ಸಾಹಿಲ್ ಎಂಬಾತ ಊಟ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಐದು ಜನ ದುಷ್ಕರ್ಮಿಗಳು ಲಾಂಗು ಹಾಗೂ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ತಕ್ಷಣ ಸ್ಥಳೀಯರು ಸಾಹಿಲ್ ನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ತಲೆ ಬಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು ವೈದ್ಯರು ತಲೆಯ ಹಿಂಭಾಗದಲ್ಲಿ 15ಹೊಲಿಗೆಗಳನ್ನ ಹಾಕಿ ಚಿಕಿತ್ಸೆ ಮುಮದುವರೆಸಿದ್ದಾರೆ. ಬಾಳೆಕುಂದ್ರಿ ಗ್ರಾಮದ ಅಜಯ್, ಪವನ್, ಮುರುಳಿ ಸೇರಿ ಐದು ಜನ ಗೆಳೆಯರು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಇನ್ನೂ ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬಿಸಿದ್ದಾರೆ…

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *