ಬೆಳಗಾವಿ: ಆಸ್ತಿಯ ಮೇಲಿನ ಭೋಜಾ ಹಾಕಿಸಿಕೊಡಲು ಲಂಚ ಪಡೆದುಕೊಂಡಿದ್ದ ಖಾನಾಪೂರ ತಾಲ್ಲೂಕಿನ ಕೊಡಚವಾಡ ಗ್ರಾಮ ಪಂಚಾಯತಿಯ ಪ್ರಭಾರಿ ಪಿ.ಡಿ.ಒ ಮಹಾಬಳೇಶ್ವರ ಇಟಗೇಕರ ಅವರಿಗೆ ನ್ಯಾಯಾಲಯವು ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಫಿರ್ಯಾದಿದಾರರಾದ ಖಾನಾಪುರ ತಾಲ್ಲೂಕಿನ ಅವರೊಳ್ಳಿ ಗ್ರಾಮದ ವೀರಭದ್ರ ಯಲ್ಲಪ್ಪ ಕೋಲಕಾರ ಅವರ ಆಸ್ತಿಯ ಮೇಲಿನ ಭೋಜಾ ಹಾಕಿಸಿ ಕೊಡಲು ಆರೋಪಿ ಪಿ.ಡಿ.ಒ ಅವರು ೧೪೦೦ ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಲಂಚ
ಪಡೆದುಕೊಳ್ಳುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಆರೋಪಿತನನ್ನು ಬಂಧಿಸಿ, ಲಂಚದ ಹಣವನ್ನು ವಶಪಡಿಸಿಕೊಂಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ೪ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯ ವಿ. ಅವರು, ತಪ್ಪಿತಸ್ಥನಿಗೆ ಲಂಚಪ್ರತಿಬAಧಕ ಕಾಯ್ದೆ ೧೯೮೮ರ ಕಲಂ ೭ ಅಡಿಯಲ್ಲಿ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ೫ ಸಾವಿರ ರೂಪಾಯಿ ದಂಡ ವಿಧಿಸಿ ಬುಧವಾರ(ಮಾ.೧೧) ಆದೇಶ ಹೊರಡಿಸಿದ್ದಾರೆ.
ಅದೇ ರೀತಿ ಕಲಂ ೧೩(೧)(ಡಿ) ಸಹ ಕಲಂ ೧೩(೨) ಕೂಡ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ.
ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ಗೋಪಾಲ ಡಿ.ಜೋಗಿನ ಅವರು ಪ್ರಕರಣದ ತನಿಖೆ ಕೈಗೊಂಡು ನ್ಯಾಯಲಯಕ್ಕೆ ದೋಷಾರೊಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ಪ್ರವೀಣ ಅಗಸಗಿ ಅವರು ನ್ಯಾಯಾಲಯದಲ್ಲಿ ಪ್ರಕರಣವನ್ನು ನಡೆಸಿ, ವಾದ ಮಂಡಿಸಿದ್ದರು.
ಸರ್ಕಾರಿ ಅಭಿಯೋಜಕರಾಗಿರು ಪ್ರವೀಣ ಅಗಸಗಿ ಅವರ ವಾದ ಮಂಡನೆ ಹಲವಾರು ಜನ ಲಂಚಕೋರರಿಗೆ ಶಿಕ್ಷೆಗೆ ಗುರಿ ಪಡಿಸಿದೆ