ಕರೋನಾ ಶಂಕೆ ಜಿಲ್ಲಾ ಆಸ್ಪತ್ರೆಯಲ್ಲಿ ವೃದ್ಧ ದಾಖಲು
ಬೆಳಗಾವಿ – ಕೇರಳ ರಾಜ್ಯದ ಪ್ರವಾಸ ಮಾಡಿ ಬೆಳಗಾವಿ ತಾಲ್ಲೂಕಿನ ತನ್ನ ಗ್ರಾಮಕ್ಕೆ ವಾಪಸ್ಸಾಗಿ ನೆಗಡಿ,ಕೆಮ್ಮು ಜ್ವರದಿಂದ ಬಳಲುತ್ತಿದ್ದ ವೃದ್ದನೊಬ್ಬನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ .
ಬೆಳಗಾವಿ ತಾಲ್ಲೂಕಿನ ಗ್ರಾಮವೊಂದರ ನಿವಾಸಿಯಾಗಿರುವ ಈ ವೃದ್ಧನಿಗೆ ಕೇರಳದಿಂದ ವಾಪಸ್ ಬಂದ ಬಳಿಕ ಜ್ವರ ಕಾಣಿಸಿದೆ ,ಆತ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕೆತ್ಸೆ ಪಡೆಯಲು ಹೋದಾಗ ಅಲ್ಲಿಯ ವೈದ್ಯರು ಆತನನ್ನು ಜಿಲ್ಲಾ ಆಸ್ಪತ್ರೆಯ ಕರೋನಾ ವಿಶೇಷ ಘಟಕಕ್ಕೆ ರವಾನಿಸಿದ್ದಾರೆ
ಜಿಲ್ಲಾ ಆಸ್ಪತ್ರೆಯಲ್ಲಿ 60 ವರ್ಷದ ವೃದ್ಧನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಿದ್ದು ಈತನ ರಕ್ತದ ಸ್ಯಾಂಪಲ್ ಪರೀಕ್ಷೆಗಾಗಿ ಪೂನಾ ಲ್ಯಾಬ್ ಗೆ ಕಳುಹಿಸಲು ವೈದ್ಯರು ಸಿದ್ಧತೆ ಮಾಡಿಕೊಂಡಿದ್ದಾರೆ
ನೆಗಡಿ,ಕೆಮ್ಮು ಜ್ವರ ಎಲ್ಲರಿಗೂ ಬರುವ ಸಾಮಾನ್ಯ ಕಾಯಿಲೆ ಆದ್ರೆ ಈ ವೃದ್ಧ ಕೇರಳಕ್ಕೆ ಹೋಗಿ ಬೆಳಗಾವಿಗೆ ವಾಪಸ್ ಬಂದಿರುವ ಕಾರಣ ಬೆಳಗಾವಿಯ ವೈದ್ಯರು ಈ ವೃದ್ಧನ ಮೇಲೆ ವಿಶೇಷ ನಿಗಾ ಇಟ್ಟಿದ್ದಾರೆ
ಈ ವೃದ್ಧನ ರಕ್ತದ ಸ್ಯಾಂಪಲ್ ಪೂನಾದ ಲ್ಯಾಬ್ ನಲ್ಲಿ ಪರೀಕ್ಷೆಗೆ ಒಳಪಟ್ಟ ನಂತರ ರಿಪೋರ್ಟ್ ಬಂದ ಬಳಿಕ ಕರೋನಾ ಬಗ್ಗೆ ಗೊತ್ತಾಗಲಿದೆ.
ಈ ವೃದ್ಧನಿಗೆ ಜಿಲ್ಲಾ ಆಸ್ಪತ್ರೆಯ ವೈದ್ಯರು ಅಡ್ಮಿಟ್ ಆಗುವಂತೆ ಮನವೊಲಿಸುತ್ತಿದ್ದರು ಆದ್ರೆ ಈ ವೈದ್ಯ ನನಗೆ ಗುಳಗಿ ಔಷಧಿ ಕೊಟ್ಟು ಮನೆಗೆ ಕಳುಹಿಸಿ ಎಂದು ವೈದ್ಯರ ಎದುರು ಅಂಗಲಾಚುತ್ತಿದ್ದ