ಬೆಳಗಾವಿ- ಹಾಯವೇ ಪಕ್ಕ ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಬೆಳಗಾವಿ ನಗರದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾಕತಿ ಗ್ರಾಮದ ಸಮೀಪದಲ್ಲಿರುವ ಬರ್ಡೆ ಧಾಭಾ ಬಳಿ ನಡೆದಿದೆ.
ನಿನ್ನೆ ರಾತ್ರಿ ಬರ್ಡೆ ಧಾಭಾ ಬಳಿ, ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಬೆಳಗಾವಿಯ ಚವ್ಹಾಟ ಗಲ್ಲಿಯ ಯುವಕ ಶ್ರೀನಾಥ ಡಿ.ಪವಾರ,ಸದಾಶಿವ ನಗರದ ಯುವಕ, ರುಚಿತ.ಆರ್ .ಧುಮಾವತ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಇಬ್ಬರೂ ಯುವಕರು ಸೇಂಟ್ ಫಾಲ್ಸ್ ಶಾಲೆಯ ವಿಧ್ಯಾರ್ಥಿಗಳಾಗಿದ್ದರು ಎಂದು ತಿಳಿದು ಬಂದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ