ಬೆಳಗಾವಿ-ಕೆರೆ ನೀರಿಗೆ ವಿಷಪೂರಿತ ರಾಸಾಯನಿಕ ಬೆರೆಸಿ ಲಕ್ಷಾಂತರ ಮೀನುಗಳ ಮಾರಣಹೋಮ ಮಾಡಿದ ಘಟನೆ ಕಡಸಗಟ್ಟಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ
ಕಡಸಗಟ್ಟಿ ಗ್ರಾಮದಲ್ಲಿ ಮೀನುಗಳ ಮಾರಣಹೋಮ ನಡೆಸಿದ ದುಷ್ಕರ್ಮಿಗಳು,ಕೆರೆಯಲ್ಲಿದ್ದ ಅಂದಾಜು 5 ಲಕ್ಷ ರೂಪಾಯಿ ಮೌಲ್ಯದ ಮೀನುಗಳು ಮೃತಪಟ್ಟಿವೆ.
ಕಡಸಗಟ್ಟಿ ಗ್ರಾಮದ ಚಿಕ್ಕನೀರಾಣಿ ಕೆರೆಗೆ ಕಿಡಗೇಡಿಗಳು ವಿಷ ಬೆರೆಸಿದ್ದಾರೆ ಎಂದು ಗೊತ್ತಾಗಿದೆ.ಬೈಲಹೊಂಗಲ ತಾಲೂಕಿನ
ಬುಡರಕಟ್ಟಿ ಗ್ರಾಮ ಸೇರಿ
5 ಗ್ರಾಮಗಳ ಗ್ರಾಮಸ್ಥರು ಉಪಯೋಗಿಸುವ ಕೆರೆ ಇದಾಗಿದ್ದು,ಕೆರೆಯಲ್ಲಿ ಮೀನುಗಾರಿಕೆ ಮಾಡಲು ಗ್ರಾಮಸ್ಥರ ಹಿರಿಯರ ಒಪ್ಪಿಗೆ ಮೇರೆಗೆ ಪ್ರತಿವರ್ಷ ಟೆಂಡರ್ ಕರೆಯಲಾಗುತ್ತಿತ್ತು.
ಮೀನುಗಾರಿಕೆ ಟೆಂಡರ್‌ನಿಂದ ಬಂದ ಲಾಭವನ್ನು ಗ್ರಾಮದ ದೇವಸ್ಥಾನ ಅಭಿವೃದ್ಧಿ ಸೇರಿ ಗಾಮದ ಅಭಿವೃದ್ಧಿಗೆ ಉಪಯೋಗಿಸಲಾಗುತ್ತಿತ್ತು,ಕೆರೆಯಲ್ಲಿ ಮೀನುಗಾರಿಕೆ ಮಾಡುವ ಟೆಂಡರ್ ವಿಚಾರಕ್ಕೆ ಸಂಬಂಧಿಸಿದಂತೆ ವೈಷಮ್ಯ ಹಿನ್ನೆಲೆ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಮಸ್ಥರ ಮನವಿ ಮಾಡಿದ್ದಾರೆ.ಸ್ಥಳಕ್ಕೆ ಬೈಲಹೊಂಗಲ ತಹಶಿಲ್ದಾರ್ ಬರುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.