ಬೆಳಗಾವಿ- ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಗುಂಡಿಕ್ಕಿ ತಾಲೂಕು ಪಂಚಾಯತ್ ಮಾಜಿ ಸದಸ್ಯನ ಹತ್ಯೆ ಮಾಡಿದ ಘಟನೆ ನಡೆದಿದೆ.
ಜಮೀನಿನ ಸೀಮೆಗಾಗಿ ಸಹೋದರ ಸಂಬಂಧಿಗಳ ನಡುವೆ ಗಲಾಟೆ ನಡೆದು ತಾಲೂಕು ಪಂಚಾಯತ್ ಮಾಜಿ ಸದಸ್ಯನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.
ಚಿಂತಾಪ್ಪ ರಾಮಪ್ಪ ಮೇಟಿ (55) ಮೃತ ವ್ಯಕ್ತಿಯಾಗಿದ್ದು ಸಹೋದರ ಸಂಬಂಧಿ ಗೋಪಯ್ಯ ಮೇಟಿ ಎಂಬಾತನಿಂದ ಈ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ.
ಚಿಂತಪ್ಪಾ ಹಾಗೂ ಗೋಪಯ್ಯ ನಡುವೆ ಜಮೀನು ವ್ಯಾಜ್ಯವಿತ್ತು. ಹಲವು ದಿನಗಳಿಂದ ಜಮೀನು ಸೀಮೆ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಕೊಲೆ ಮಾಡಿ ಆರೋಪಿ ಗೋಪಯ್ಯ ಭೀಮಪ್ಪ ಮೇಟಿ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಘಟಪ್ರಭಾ ಪೊಲೀಸರ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ