Breaking News

ಬರದ ಬವಣೆಗೆ ಸ್ಪಂದಿಸಿದ ಅಂಜಲಿ ನಿಂಬಾಳ್ಕರ್

ಬೆಳಗಾವಿ-

ಬೆಳಗಾವಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಮಲೆನಾಡಿನ ಸೆರಗು ಖಾನಾಪೂರ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಸಮರ್ಪಕ ಮಳೆಯಾಗದ ಕಾರಣ ಬರ ಕಾಣಿಸಿಕೊಂಡಿದೆ. ನದಿ,ಕೆರೆ, ಭಾವಿಗಳು ಬತ್ತಿ ನಿಂತಿರುವುದರಿಂದ ತಾಲೂಕಿನ ಪೂರ್ವಭಾಗದ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ಇದನ್ನ ಅರಿತ ಸರ್ಕಾರದ ಬಾಲಭವನ ಸಂಸ್ಥೆ ಅಧ್ಯಕ್ಷೆ ಡಾ. ಅಂಜಲಿ ನಿಂಬಾಳ್ಕರ್ ತಾಲೂಕಿನ 6 ಕೆರೆಗಳಿಗೆ ನೀರು ತುಂಬಿಸುವಂತೆ ಜಲಸಂಪನ್ಮೂಲ ಸಚಿವರಿಗೆ ಮನವಿ ಮಾಡಿದ್ದರು.ಇದಕ್ಕೆ ಸ್ಪಂದಿಸಿದ ಸಚಿವರು,ಇವತ್ತು ತಾಲೂಕಿನ 6ಕೆರೆಗಳ ನೀರು ತುಂಬುವ ಯೋಜನೆಯ ಸರ್ವೇ ಕಾರ್ಯ ನಡೆಸಿದ್ರು.

ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕು ಮಲೆನಾಡಿನ ಸೆರಗಿನಲ್ಲಿ ಬರುವ ತಾಲೂಕು.ಇಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಳೆಯಾಗುತ್ತದೆ. ಆದ್ರೆ ಕಳೆದ ಎರಡು ವರ್ಷಗಳಿಂದ ಇಲ್ಲಿ ಸಮರ್ಪಕ ಮಳೆಯಾಗದ ಕಾರಣ ತಾಲೂಕಿನ ಮಲಪ್ರಭಾ ನದಿ,ಕೆರೆ ಕಟ್ಟೆಗಳು, ಭಾವಿಗಳು ಬತ್ತಿ ನಿಂತಿವೆ. ಅಂತರ್ ಜಲಮಟ್ಟ ಸಹ ಕುಸಿದಿದೆ. ಜನ ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿವೆ.ಇದನ್ನ ಸರ್ಕಾರದ ಬಾಲಭವನ ಸಂಸ್ಥೆಯ ಅಧ್ಯಕ್ಷೆ ಡಾ.ಅಂಜಲಿ ನಿಂಬಾಳ್ಕರ್ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ಗಮನಕ್ಕೆ ತಂದಿದ್ದರು.

ಮಲಪ್ರಭಾ ನದಿಯಿಂದ ಜನರ ಕುಡಿಯುವ ನೀರಿಗಾಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ಮನವಿ ಮಾಡಿದ್ದರು.ಇದಕ್ಕೆ ಸ್ಪಂದಿಸಿದ ಸಚಿವ ಎಂ.ಬಿ.ಪಾಟೀಲ್ , ಪ್ರಥಮ ಹಂತದಲ್ಲಿ ತಾಲೂಕಿನ ಪೂರ್ವ ಭಾಗದಲ್ಲಿನ ಗ್ರಾಮಗಳಲ್ಲಿ ಒಣಗಿ ನಿಂತಿರುವ 6ಪ್ರಮುಖ ಕೆರೆಗಳನ್ನ ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲು ಪೂರ್ವಭಾವಿಯಾಗಿ ಸರ್ವೇ ಕಾರ್ಯಕ್ಕೆ ಅಧಿಕಾರಿಗಳನ್ನ ಕಳುಹಿಸಿಕೊಟ್ಟಿದ್ದರು. ಇವತ್ತಿನಿಂದ ನೀರಾವರಿ ನಿಗಮದ ಅಧಿಕಾರಿಗಳ ತಂಡ ಸರ್ವೇ ಕಾರ್ಯಕ್ಕೆ ಚಾಲನೆ ನೀಡಿದೆ.

ಮೊದಲ ಹಂತದಲ್ಲಿ ತಾಲೂಕಿನ 39ಚಿಕ್ಕ ನೀರಾವರಿ ಕೆರೆಗಳ ಪೈಕಿ 6ಕೆರೆಗಳಿಗೆ ನೀರು ತುಂಬಿವ ಪ್ಲ್ಯಾನ್ ನ್ನ ಸರ್ಕಾರ ಹಾಕಿಕೊಂಡಿದೆ. ಅದರಲ್ಲಿ ತಾಲೂಕಿನ ಗಂಧಿಗವಾಡ, ತೋಲಗಿ, ಬೀಡಿ, ಇಟಗಿ, ಪಾರಿಶ್ವಾಡ ಹಾಗೂ ಹಿಂಡಲಗಾ ಗ್ರಾಮಗಳ ಕೆರೆಗಳನ್ನ ತುಂಬಲು ಇವತ್ತಿನಿಂದ ನೀರಾವರಿ ನಿಗಮದ ಅಧಿಕಾರಿಗಳು ಸರ್ವೇ ಕಾರ್ಯ ಆರಂಭಿಸಿದ್ದಾರೆ. ಯೋಜನೆಯ ಕಾರ್ಯಸಾದ್ಯತೆ ಕುರಿತು ಸಮಗ್ರ ವರದಿಯನ್ನ ಅಧಿಕಾರಿಗಳು ನೀಡಲಿದ್ದಾರೆ. ಇದಾದ ನಂತ್ರ ಟೆಂಡರ್ ಕರೆದು ಬರುವ ಮೇ ಅಥವಾ ಜೂನ್ ತಿಂಗಳಲ್ಲಿ ಈ ಯೋಜನೆಯ ಅನುಷ್ಠಾನಗೊಳ್ಳುವ ವಿಶ್ವಾಸವಿದೆ. ಈ ಕೆರೆಗಳಿಗೆ ನೀರು ತುಂಬುವುದರಿಂದ ಅಂತರ್ ಜಲಮಟ್ಟ ಹೆಚ್ಚಾಗುವುದರ ಜೊತೆಗೆ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಸಾಧ್ಯವಿದೆ.

ತೀವ್ರ ಕುಡಿಯುವ ನೀರಿನ ಹಾಹಾಕಾರ ಎದುರಿಸುತ್ತಿರುವ ಖಾನಾಪೂರ ತಾಲೂಕಿನ ಪೂರ್ವ ಭಾಗದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ಡಾ.ಅಂಜಲಿ ನಿಂಬಾಳ್ಕರ್ ಕೆರೆಗೆ ನೀರು ತುಂಬಿದ್ರೆ ನಾವೆಲ್ಲಾ ಅವರಿಗೆ ಕೃತಜ್ಷತೆ ಸಲ್ಲಿಸುವುದಾಗಿ ತಿಳಿಸುತ್ತಿದ್ದಾರೆ. ಒಟ್ಟಾರೆ ಕ್ಷೇತ್ರದ ಎಂಇಎಸ್ ಶಾಸಕರು ಮಾಡದ ಕೆಲಸವನ್ನ ಸರ್ಕಾರದ ಬಾಲಭವನದ ಅಧ್ಯಕ್ಷೆ ಮಾಡುತ್ತಿರುವುದಕ್ಕೆ ತಾಲೂಕಿನ ಜನರು ತೀವ್ರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *