ಬೆಳಗಾವಿ
ದೆಹಲಿಯಲ್ಲಿ ಇತ್ತೀಚೆಗೆ ಜಂತರಮಂತರ್ ಮೈದಾನದಲ್ಲಿ ದೇಶ ದ್ರೋಹಿಗಳು ಪವಿತ್ರವಾದ ಮೀಸಲಾತಿ ಹಾಗೂ ಎಸ್ಸಿ,ಎಸ್ಟಿ ಕಾಯ್ದೆಯನ್ನು ವಿರೋಧಿಸಿ ಸಂವಿಧಾನವನ್ನು ಸುಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ದಲಿತ ಯುವ ಬ್ರಿಗೇಡ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರಪಂಚದ ಯಾವ ರಾಷ್ಟ್ರದಲ್ಲೂ ಇರದ ಮೀಸಲಾತಿ ಭಾರಯದಲ್ಲಿ ಏಕೆ ಎಂದು ವಾದ ಮಾಡುವ ಮತ್ತು ಆರ್ಥಿಕ ಆಧಾರದ ಮೇಲೆ ಮೀಸಲಾತಿ ಕೊಡಬೇಕು ಎನ್ನುವ ಬಂಡವಾಳಶಾಯಿ ಭಂಡರಿಗೆ ಸಂವಿಧಾನದ ಅರಿವಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಡಾ.ಬಾಬಾದಾಹೇಬ ಅಂಬೇಯ ಅವರು ಎಸ್ಸಿ, ಎಸ್ಟಿ ಹಾಗೂ ಒಬಿಸಿ ಜನಾಂಗಕ್ಕೆ ಮೀಸಲಾತಿ ಕಲ್ಪಿಸಿಕೊಟ್ಟಿದ್ದಾರೆ ಅಂಥವರು ಬರೆದ ಸಂವಿಧಾನವನ್ನು ಸುಟ್ಟ ದೇಶ ದ್ರೋಹಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಯಲ್ಲೇಶ ಬಚ್ಚಲಪುರಿ, ವಿಜಯ ಸಾಕೆ, ಯಶವಂತ ಅನಂತಪುರ, ಮುನಿಸ್ವಾಮಿ ಭಂಡಾರಿ, ಸದಾಶಿವ, ಸುರೇಶ ಸೇರಿದಂತೆ ಇನ್ನಿತರರು ಹಾಜರಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ