ಬೆಳಗಾವಿ- ಕಿತ್ತೂರು ಕ್ಷೇತ್ರದ ಕೆರೆಗಳನ್ನು ತುಂಬಿಸುವ ಹಲವಾರು ದಶಕಗಳ ಕನಸು ನನಸಾಗಿದೆ ಕೆರೆ ತುಂಬಿಸ್ತೀನಿ .ತುಂಬೀಸ್ತೀನಿ ಅಂತಾ ಹೇಳುತ್ತಲೇ ನಾಲ್ಕು ದಶಕ ಕಳೆದ ಕಿತ್ತೂರ ಧಣಿ ಡಿ ಬಿ ಇನಾಮದಾರ ಕೊನೆಗೂ ಯೋಜನೆಗೆ ಮಂಜೂರಾತಿ ಪಡೆದು ರಾಜಕೀಯ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ
ಕಿತ್ತೂರ ಕ್ಷೇತ್ರದ ಪ್ರಮುಖ ಕೆರೆ ಎಂ ಕೆ ಹುಬ್ಬಳ್ಳಿ ಯ ಗೆದ್ದಿಕೆರೆ ಸೇರಿದಂತೆ ಕಿತ್ತೂರ ಕ್ಷೇತ್ರದ ಹಲವಾರು ಕೆರೆಗಳನ್ನು ತುಂಬಿಸುವ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದ್ದು 208 ಕೋಟಿ ರೂ ವೆಚ್ಚದ ಈ ಯೋಜನೆಗೆ ಕರ್ನಾಟಕ ನೀರಾವರಿ ನಿಗಮ ಟೆಂಡರ್ ಕರೆದು ಕಿತ್ತೂರು ಕ್ಷೇತ್ರದ ಜನರಿಗಿದ್ದ ಅನೇಕ ಅನುಮಾನ ಗಳಿಗೆ ಇತೀಶ್ರೀ ಹಾಡಿದೆ
ಕೆರೆ ತುಂಬಿಸುವ ಯೋಜನೆ ಮಂಜೂರಾಯ್ತು ಅಂತ ಹಲವಾರು ಬಾರಿ ಡಿ ಬಿ ಇನಾಮದಾರ ಪಟಾಕಿ ಸಿಡಿಸಿ ಸಿಹಿ ಹಂಚಿದ್ರು ಆದರೆ ಈ ಯೋಜನೆ ಅನುಷ್ಟಾನ ಗೊಂಡಿರಲಿಲ್ಲ ಹೀಗಾಗಿ ಡಿ ಬಿ ಇನಾಮದಾರ ಕೆರೆ ತುಂಬಿಸುವ ಯೋಜನೆ ಮಂಜೂರು ಮಾಡಿಸಿದ್ದಾರೆ ಅಂತ ಹೇಳಿದ್ರೆ ಅದನ್ನು ಜನ ನಂಬುವ ಸ್ಥಿತಿಯಲ್ಲಿ ಇರಲಿಲ್ಲ ಆದರೆ ಈ ಬಾರಿ ನಿಜವಾಗಿಯೂ ಕಿತ್ತೂರ ಶಾಸಕ ಡಿ ಬಿ ಇನಾಮದಾರ ಸಿಕ್ಸರ್ ಹೊಡೆದಿದ್ದಾರೆ
ಕರ್ನಾಟಕ ನೀರಾವರಿ ನಿಗಮ ಕಿತ್ತೂರ ಕ್ಷೇತ್ರದ ಮಹತ್ವದ ಯೋಜನೆಯಾಗಿರುವ ಕೆರೆ ತುಂಬಿಸುವ ಯೋಜನೆಗೆ ಟೆಂಡರ್ ಕರೆದು ಯೋನೆಯ ಅನುಷ್ಠಾನದ ಖಾತ್ರಿ ಪಡಿಸಿದ್ದು ಡಿಸೆಂಬರ್ 12 ,ರಿಂದ 27 ರವರೆಗೆ ಟೆಂಡರ್ ಫಾರ್ಮಗಳನ್ನು ಸಲ್ಲಿಸಲು ಸಮಯ ನಿಗದಿ ಮಾಡಿದೆ
ಈ ಯೋಜನೆಯ ಜೊತೆಗೆ ಕಿತ್ತೂರಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದೆ ಈ ಎರಡೂ ಕಾಮಗಾರಿಗಳಿಗೆ ಚಾಲನೆ ನೀಡಲು ಜನೇವರಿ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯ ಕಿತ್ತೂರ ಕ್ಷೇತ್ರಕ್ಜೆ ಬರಲಿದ್ದಾರೆ ಡೇಟ್ ಫಿಕ್ಸ ಮಾಡಲು ಕಿತ್ತೂರು ಧಣಿ ಡಿಬಿ ಇನಾಮದಾರ ಬೆಂಗಳೂರಿಗೆ ದೌಡಾಯಿಸಿದ್ದಾರೆ
ಅಂತೂ ಇಂತೂ ಕೆರೆ ತುಂಬಿಸುವ ಯೋಜನೆಗೆ ಟೆಂಡರ್ ಕರೆಯುವಲ್ಲಿ ಯಶಸ್ವಿಯಾಗಿರುವ ಕಿತ್ತೂರ ಧಣಿ ಡಿಬಿ ಇನಾಮದಾರ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ