ಬೆಳಗಾವಿ :ಮಾಜಿ ಸಚಿವ ಡಿ.ಬಿ. ಇನಾಮದಾರ ಅವರ ಅಂತ್ಯಕ್ರಿಯೆ ಏಪ್ರಿಲ್ 26 ರಂದು ಮಧ್ಯಾಹ್ನ 12 ಗಂಟೆಗೆ ನೇಗಿನಾಳ ಗ್ರಾಮದ ಅವರ ತೋಟದ ಮನೆ ಬಳಿ ನಡೆಯಲಿದೆ.
ಡಿ.ಬಿ.ಇನಾಮದಾರ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಬೆಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಪ್ರಾರ್ಥಿವ ಶರೀರ ಇಂದು ಮಧ್ಯರಾತ್ರಿ ಬರಲಿದೆ. ಏಪ್ರಿಲ್ 26 ರಂದು ಬೆಳಗ್ಗೆ 8 ಗಂಟೆಯಿಂದ 11 ಗಂಟೆವರೆಗೆ ನೇಗಿನಾಳ ಬಿ.ಡಿ. ಇನಾಮದಾರ ಹೈಸ್ಕೂಲ್ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಲಿದೆ. ನಂತರ ಬೃಹತ್ ಮೆರವಣಿಗೆ ಮೂಲಕ ಮಧ್ಯಾಹ್ನ 12ಕ್ಕೆ ನೇಗಿನಾಳ ತೋಟದ ಮನೆ ಬಳಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ