ಬೆಳಗಾವಿ ಪಾಲಿಕೆ ಸಭೆಯಲ್ಲಿ ಮೊಳಗಿದ ನಾಡಗೀತೆ,ಡಿಸಿ ಜಯರಾಂ ಜಿಂದಾಬಾದ್…
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯಲ್ಲಿ ಇತಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಾಡಗೀತೆ ಮೊಳಗಿತು ಚುನಾವಣಾ ಅಧಿಕಾರಿಯಾಗಿದ್ದ ಡಿಸಿ ಜಯರಾಂ ಪಾಲಿಕೆಯಲ್ಲಿ ನಾಡಗೀತೆ ನುಡಿಸಲು ಸೂಚಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ
ಶನಿವಾರ ಪಾಲಿಕೆಯಲ್ಲಿ ಸ್ಥಾಯಿ ಸಮೀತಿಗಳ ಚುನಾವಣೆ ನಡೆಯಿತು ಚುನಾವಣಾ ಅಧಿಕಾರಿಗಳಾಗಿ ಡಿಸಿ ಜಯರಾಂ ಭಾಗವಹಿಸಿ ಚುನಾವಣಾ ಪ್ರಕ್ರಿಯೆ ಆರಂಭಿಸಿದರು ಆರಂಭದಲ್ಲಿ ಕೋರಂ ಭರ್ತಿ ಆಗಿದೆ ಐದು ನಿಮಿಷದೊಳಗಾಗಿ ಹೊರಗಿರುವ ಪಾಲಿಕೆ ಸದಸ್ಯರು ಸಭಾಂಗಣ ಪ್ರವೇಶ ಮಾಡದಿದ್ದರೆ ಬಾಗಿಲು ಬಂದ್ ಮಾಡುವದಾಗಿ ಮುನ್ಸೂಚನೆ ನೀಡಿದರು
ಸದಸ್ಯರೆಲ್ಲರೂ ಸಭೆಯಲ್ಲಿ ಭಾಗವಹಿಸಿದ ಬಳಿಕ ಚುನಾವಣೆ ಪ್ರಕ್ರಿಯೆ ಆರಂಭವಾಯಿತು
ಡಿಸಿ ಜಯರಾಂ ಅವರು ಈಗ ನಾಡಗೀತೆ ಆರಂಭವಾಗುತ್ತದೆ ಸರ್ಕಾರದ ಯಾವುದೇ ಕಾರ್ಯಕ್ರಮ ಆರಂಭವಾದಾಗ ನಾಡಗೀತೆಯಿಂದ ಸಭೆ ಆರಂಭವಾಗಿ ರಾಷ್ಟ್ರ ಗೀತೆಯೊಂದಿಗೆ ಮುಕ್ತಾಯ ಆಗುತ್ತದೆ ಎಂದು ಹೇಳಿ ಎಲ್ಲರೂ ಎದ್ದು ನಿಲ್ಲಬೇಕು ಎಂದು ಸೂಚಿಸಿದರು
ಪಾಲಿಕೆ ಸಭಾಂಗಣದಲ್ಲಿ ಬೆಳಗಾವಿ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಾಡಗೀತೆ ಮೊಳಗಿತು ಎಲ್ಲ ಸದಸ್ಯರು ಎದ್ದು ನಿಂತು ನಾಡಗೀತೆಗೆ ಗೌರವ ನೀಡಿದರು
ಪಾಲಿಕೆ ಸಭೆಯಲ್ಲಿ ಹಾಜರಿದ್ದ ಎಂಈಎಸ ಸದಸ್ಯರು ಎದ್ದು ನಿಂತು ನಾಡಗೀತೆಗೆ ಗೌರವ ಸಲ್ಲಿಸಿದರು
ಪಾಲಿಕೆ ಸಭಾಂಗಣದಲ್ಲಿ ನಾಡಗೀತೆ ನುಡಿಸಿ ಕನ್ನಡದ ಕಹಳೆ ಊದಿದ ಡಿಸಿ ಜಯರಾಂ ಜಿಂದಾಬಾದ್