Breaking News

ಬೆಳಗಾವಿ ಪಾಲಿಕೆ ಸಭೆಯಲ್ಲಿ ಮುಂದುವರೆದ ನಾಡಗೀತೆ ಸಂಪ್ರದಾಯ

 

ಬಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಸ್ಥಾಯಿ ಸಮೀತಿಗಳ ಚುನಾವಣೆಯ ಸಂಧರ್ಭದಲ್ಲಿ ಪಾಲಿಕೆಯ ಕೌನ್ಸೀಲ್ ಹಾಲ್ ನಲ್ಲಿ ಜಿಲ್ಲಾಧಿಕಾರಿ ಎನ್ ಜಯರಾಮ ಅವರು ಸಭೆಯ ಆರಂಭದಲ್ಲಿ ನಾಡಗೀತೆ ನುಡಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವ ಮೂಲಕ ಐತಿಹಾಸಿಕ ಸಂಪ್ರದಾಯಕ್ಕೆ ಚಾಲನೆ ನೀಡಿದ್ದರು

ಇಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯ ಆರಂಭದಲ್ಲಿ ಮೇಯರ್ ಸಂಜೋತಾ ಬಾಂಧೆಕರ ಮೊದಲು ಸ್ಥಾಯಿ ಸಮೀತಿಗಳ ನೂತನ ಅಧ್ಯಕ್ಷರಿಗೆ ಅಭಿನಂಧನೆ ಸಲ್ಲಿಸಿದ ಬಳಿಕ ನಾಡಗೀತೆಗೆ ಗೌರವಸಲ್ಲಿಸಲು ಎಲ್ಲ ನಗರ ಸೇವಕರು ಎದ್ದು ನಿಲ್ಲುವಂತೆ ಸೂಚಿಸಿದ ಬಳಿಕ ಟೇಪ್ ರಿಕಾರ್ಡ್ ನಲ್ಲಿ ನಾಡಗೀತೆ ಆರಂಭವಾಯಿತು ಎಲ್ಲ ನಗರ ಸೇವಕರು ನಾಡಗೀತೆಗೆ ಗೌರವ ಸಲ್ಲಿಸುವ ಮೂಲಕ ಪಾಲಿಕೆಯಲ್ಲಿ ನಾಡಗೀತೆ ನುಡಿಸುವ ಸಂಪ್ರದಾಯವನ್ನು ಮುಂದುವರೆಸಿದರು
ಸಭೆಯ ಆರಂಭದಲ್ಲಿ ಮಚಗಾಂವ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮಾಡಲು ಹೊಸ ಹೊಂಡ ನಿರ್ಮಿಸುವ ವಿಷಯ ಪ್ರಸ್ತಾಪವಾಯಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ನಗರ ಸೇವಕ ರತನ ಮಾಸೇಕರ ಮತ್ತು ಕಿರಣ ಸೈನಾಯಿಕ ಮಾತನಾಡಿ ಹೊಸ ಹೊಂಡ ನಿರ್ಮಿಸಲು ನಮ್ಮ ವಿರೋಧವಿಲ್ಲ ಆದರೆ ಗಣೇಶ ವಿಸರ್ಜನೆ ಮಾಡುವ ಹೊಂಡಗಳು ಕೇವಲ ವರ್ಷದಲ್ಲಿ ಒಂದು ದಿನ ಮಾತ್ರ ಬಳಕೆ ಆಗುತ್ತವೆ ಈ ಹೊಂಡಗಳು ವರ್ಷ ಪೂರ್ತಿ ಬಳಕೆ ಮಾಡುವ ಯೋಜನೆ ರೂಪಿಸಬೇಕು ಹೊಂಡದ ಸುತ್ತಲು ಯಾವುದೇ ರೀತಿಯ ಅವಘಡಗಳು ಸಂಭವಿಸಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು
ಹಿರಿಯ ನಗರ ಸೇವಕರ ರಮೇಶ ಸೊಂಟಕ್ಕಿ ಮಾತನಾಡಿ ಪಾಲಿಕೆ ಅಧಿಕಾರಿಗಳು ಗಣೇಶ ಹಬ್ಬ ಬಂದಾಗ ಹೊಸ ಹೊಂಡ ನಿರ್ಮಿಸುವ ಪ್ರಸ್ತಾವಣೆ ಮುಂದಿಡುವದು ಸರಿಯಲ್ಲ ಆರು ತಿಂಗಳ ಮೊದಲೇ ಹೊಸ ಹೊಂಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ತುರಾತುರಿಯಲ್ಲಿ ಹೊಂಡ ನಿರ್ಮಿಸುವದರಿಂದ ಗುಣಮಟ್ಟದ ಕಾಮಗಾರಿ ಆಗಲು ಸಾಧ್ಯವಿಲ್ಲ ನಗರದಲ್ಲಿ ಎಷ್ಟು ಹೊಂಡಗಳು ನಿರ್ಮಿಸಬೇಕು ಅನ್ನೋದರ ಬಗ್ಗೆ ಯೋಜನೆ ರೂಪಿಸುವಂತೆ ರಮೇಶ ಸೊಂಟಕ್ಕಿ ಒತ್ತಾಯ ಮಾಡಿದರು
ಮಾಜಿ ಮಹಾಪೌರ ಸರೀತಾ ಪಾಟೀಲ ಮಾತನಾಡಿ ಬೆಳಗಾವಿ ನಗರದ ದಕ್ಷಿಣ ಮತಕ್ಷೇತ್ರದಲ್ಲಿ ಮಾತ್ರ ಗಣೇಶ ವಿಸರ್ಜನೆ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ ಆದರೆ ಉತ್ತರ ಮತಕ್ಷೇತ್ರದ ಹನುಮಾನ ನಗರ ಕಂಗ್ರಾಳಿ ಸೇರಿದಂತೆ ಉತ್ತರ ಕ್ಷೇತ್ರದ ವಿವಿಧ ಭಾಗಗಳಲ್ಲಿ ಹೊಸ ಹೊಂಡಗಳನ್ಮು ನಿರ್ಮಿಸುವಂತೆ ಸಲಹೆ ನೀಡಿದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *