ಬೆಳಗಾವಿ-ಜಿಲ್ಲಾಧಿಕಾರಿ ಎನ್ ಜೈರಾಮ್ ಅವರು ಸೋಮವಾರ ಜಿಲ್ಲೆಯ ಚಿಕ್ಕೋಡಿ,ಹಾಗು ರಾಯಬಾಗ ತಾಲೂಕುಗಳ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಶೀಲನೆ ನಡೆಸಿದರು.
ಚಿಕ್ಕೊಡಿ ತಾಲೂಕಿನ ಮಾಂಜರಿ sಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು ನದಿ ನೀರು ಗದ್ದೆಗಳಿಗೆ ನುಗ್ಗಿರುವದನ್ನು ಪರಶೀಲಿಸಿದ ಬಳಿಕ ನೀರು ಕಡಿಮೆಯಾದ ನಂತರ ಬೆಳೆಹಾನಿ ಸಮೀಕ್ಷೆ ನಡೆಸುವಂತೆ ಡಿಸಿ ಸೂಚನೆ ನೀಡಿದರು.ನಂತರ ಯಡೂರ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಪರಶೀಲಿಸಿದರು
ಈ ಸಂಧರ್ಬದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಜಿಲ್ಲ;ಆಧಿಕಾರಿ ಜೈರಾಮ್ ಈಗ ಮಳೆ ಪ್ರಮಾಣ ಕಡಿಮೆಯಾಗಿದೆ ಆದರೆ ಕೃಷ್ಣಾ ನದಿ ಪ್ರವಾಹ ಹೆಚ್ಚಾಗಿರುವದರಿಂದ ಸುಮಾರು ಐದು ಸಾವಿರ ಹೆಕ್ಟೆರ್ ಕೃಷಿ ಪ್ರದೇಶ ಮುಳುಗಡೆಯಾಗಿದ್ದು ಈಗ ಸದ್ಯಕ್ಕೆ ಯಾವುದೇ ರೀತಿಯ ಆತಂಕವಿಲ್ಲ ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿಯನ್ನ ಎದುರಿಸಲು ಎಲ್ಲ ರೀತಿಯ ಸಿದ್ಧತೆಗಲನ್ನು ಮಾಡಿಕೊಂಡಿದೆ ಎಂದರು
ಚಂದೂರಿನಲ್ಲಿ 100 ಎಕರೆ ಪ್ರದೇಶದಲ್ಲಿ ನಿಂತ ಮಳೆ ನೀರು. ಪೈಪ್ ಲೈನ್ ಮೂಲಕ ನೀರು ನದಿಗೆ ಹರಿಸಲು 12 ಲಕ್ಷ ರೂ. ಸಂಸದರ ಅನುದಾನದಿಂದ ಮಂಜೂರು. ಮಾಡಲಾಗಿದೆ ಎಂದು ಡಿಸಿ ಹೇಳಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ