ಬೆಳಗಾವಿ-ರಾಜ್ಯೋತ್ಸವದ ದಿನ ಕರಾಳ ದಿನಾಚರಣೆಗೆ ಅವಕಾಶ ನೀಡುವದಿಲ್ಲ ಎಂದು ಎಂಇಎಸ್ ಮುಖಂಡರಿಗೆ ಕಡ್ಡಿ ಮುರಿದಂತೆ ಹೇಳಿದ ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ನಾಡದ್ರೋಹಿಗಳಿಗೆ ಬುದ್ದಿವಾದ ಹೇಳುವ ಮೂಲಕ ಕನ್ನಡದ ಹಿತ ಕಾಪಾಡಿದ್ದಾರೆ.
ರಾಜ್ಯೋತ್ಸವದ ದಿನ ಕರಾಳ ದಿನಾಚರಣೆಗೆ ಅನುಮತಿ ಕೊಡಿ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರನ್ನು ಭೇಟಿಯಾದ ಎಂಇಎಸ್ ಮುಖಂಡರಿಗೆ
ಮುಖಭಂಗವಾಗಿದೆ.
ನವೆಂಬರ್ 1 ರಂದು ಎಂಇಎಸ ಕರಾಳ ದಿನಾಚರಣೆಗೆ ಅನುಮತಿ ಇಲ್ಲ ಎಂದು ಎಂಇಎಸ ಪುಂಡರಿಗೆ ಕಡ್ಡಿಮುರಿದಂತೆ ಹೇಳಿದ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಎಂಇಎಸ್ ಮುಖಂಡರಿಗೆ ನೀತಿ ಪಾಠ ಹೇಳಿದ್ದಾರೆ.
ಲರಾಜ್ಯೋತ್ಸವ ದಿನವೇ ಕರಾಳ ದಿನಕ್ಕೆ ಅನುಮತಿ ಕೊಡಲು ಎಂಇಎಸ್ ನಿಂದ ಡಿಸಿಗೆ ಮನವಿ ಕೊಡುವ ಸಂಧರ್ಭದಲ್ಲಿಡಿಸಿ ಮೊಹಮ್ಮದ್ ರೋಷನ್ ನಾಡದ್ರೋಹಿಗಳಿಗೆ ಬುದ್ಧಿವಾದ ಹೇಳಿದ್ದಾರೆ.ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸುವ ಹಕ್ಕಿದೆ, ಆದ್ರೆ,ನವೆಂಬರ್1 ರಂದು ಬಿಟ್ಟು ಪರ್ಯಾಯ ದಿನ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡಲು ಅವಕಾಶ ಕೊಡ್ತಿನಿ,ಆದ್ರೆ ಯಾವುದೇ ರೀತಿಯ ಕರ್ನಾಟಕದ ಐಕ್ಯತೆ ಧಕ್ಕೆ ತರುವ ಹೋರಾಟ, ಪ್ರತಿಭಟನೆಗೆ ಅವಕಾಶ ಕೊಡುವುದಿಲ್ಲ ಎಂದು ಬೆಳಗಾವಿ ಡಿಸಿ ಎಂಇಎಸ್ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.
ಗಣೇಶೋತ್ಸವ ಈದ್ ಮಿಲಾದ್ ಸಾಮರಸ್ಯದಿಂದ ಆಚರಣೆ ಮಾಡಿದ್ದೇವೆ.ಹಾಗೇ ನೀವೂ ರಾಜ್ಯೋತ್ಸವ ದಿನ ಬಿಟ್ಟು ಬೇರೆ ದಿನ ಹೋರಾಟ ಮಾಡಿ ಎಂದ ಡಿಸಿ ಮೊಹಮ್ಮದ್ ರೋಷನ್ ಎಂಇಎಸ್ ಮುಖಂಡರಿಗೆ ತಾಕೀತು ಮಾಡಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಂಇಎಸ ಮುಖಂಡರು,ಕನ್ನಡ ರಾಜ್ಯೋತ್ಸವ ಪೂರ್ವದಿಂದ ನಮ್ಮ ಹೋರಾಟವಿದೆ,ಹೀಗಾಗಿ ನವೆಂಬರ್1 ರಂದೇ ಕರಾಳ ದಿನಕ್ಕೆ ಅನುಮತಿ ಕೊಡಲು ಎಂಇಎಸ ಮುಖಂಡರ ಪಟ್ಟು ಹಿಡಿದಾಗಇದಕ್ಕೆ ಡಿಸಿ ಮೃದುವಾಗಿಯೇ ಖಡಕ್ ಸಂದೇಶ ಕೊಟ್ಟಿದ್ದಾರೆ.
ಲಭಾಷಾ ಸಾಮಾರಸ್ಯ ಕಾಪಾಡುವುದು ಮುಖ್ಯಮವಾಗಿದೆ.ಪ್ರತಿ ರಾಜ್ಯೋತ್ಸವ ದಿನ ಬೆಳಗಾವಿ ಜಿಲ್ಲೆಯಲ್ಲಿ 2 ಸಾವಿರ ಕೇಸ್ ದಾಖಲಾಗುತ್ತವೆ.ನನಗೆ ಜಿಲ್ಲಾಧಿಕಾರಿ ಆಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯಿದೆ.ನಿಮ್ಮ ಮನವಿ ಸ್ವೀಕಾರ ಮಾಡಿರುವೆ.ಆದ್ರೆ ಜಿಲ್ಲಾಧಿಕಾರಿ ಆಗಿ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ನೀವು ಬದ್ಧರಾಗಿ ಇರಲೇಬೇಕು ಎಂದ ಡಿಸಿ ಎಂಇಎಸ್ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.
ಗಡಿ ವಿವಾದ ಸುಪ್ರೀಂ ಕೋರ್ಟನಲ್ಲಿದೆ ಎಂದು ಎಂಇಎಸ ಪುಂಡರು ಡಿಸಿ ಮುಂದೆ ಹೇಳಿದಾಗ,ಕಾನೂನು ಸುವ್ಯವಸ್ಥೆ ಹಾಳಾದ್ರೆ ಸುಪ್ರೀಂ ಕೋರ್ಟ್ ನನ್ನನ್ನು ಕರೆಸುತ್ತೆ
ಎಂದ ಡಿಸಿ ಮೊಹಮ್ಮದ್ ರೋಷನ್ ಎಂಇಎಸ್ ಮುಖಂಡರಿಗೆ ಪ್ರತ್ತುತ್ತರ ಕೊಟ್ಟಿದ್ದಾರೆ.