ಬೆಳಗಾವಿ- ಪೋಲೀಸರ ಮಕ್ಕಳು ಇಂಗ್ಲೀಷ್ ಕಾನ್ವೆಂಟ್ ಶಾಲೆಗಳಲ್ಲಿ ಪ್ರವೇಶ ಪಡೆಯಲು ಪರದಾಡುವ ಸ್ಥಿತಿ ಬರಬಾರದು ಅವರು ವಾಸವಾಗಿರುವ ಕಾಲೋನಿಯಲ್ಲಿ ಕನಿಷ್ಠ ನರ್ಸರಿ ಶಾಲೆಯ ಸವಲತ್ತು ದೊರಕಿಸಿ ಕೊಡಲು ಬೆಳಗಾವಿ ನಗರ ಪೋಲೀಸ್ ಆಯುಕ್ತ ಡಿಸಿ ರಾಜಪ್ಪ ಮುಂದಾಗಿದ್ದಾರೆ
ಬೆಳಗಾವಿಯ ಪೋಲೀಸ್ ಹೆಡ್ ಕ್ವಾಟರ್ಸ ಆವರಣದಲ್ಲಿ ವೀರಭದ್ರೇಶ್ವರ. ಮಂದಿರದ ಹತ್ತಿರವಿರುವ ಖಾಲಿ ಕ್ವಾಟರ್ಸನಲ್ಲಿ ಎಕಸ್ ಕಂಪನಿಯ ಮಾಡಿದ ಮೂರು ಲಕ್ಷ ರೂ ಧನ ಸಹಾಯದಲ್ಲಿ ಖಾಲಿ ಕ್ವಾಟರ್ಸನ್ನು ನವೀಕರಣ ಮಾಡಿ ಅಲ್ಲಿ ಪೋಲೀಸರ ಮಕ್ಕಳಿಗಾಗಿ ಇಂಗ್ಲೀಷ್ ನರ್ಸರಿ ಶಾಲೆಯನ್ನು ಆರಂಭಿಸಿದರು
ನರ್ಸರಿ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ನಗರ ಪೋಲೀಸ್ ಆಯುಕ್ತ ರಾಜಪ್ಪ ನಾನು ಬೆಳಗಾವಿಗೆ ಬಂದಾಗಿನಿಂದ ಪೋಲೀಸರು ಇಂಗ್ಲೀಷ್ ಕಾನವೆಂಟ್ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಪಡೆಯಲು ಶಿಫಾರಸ್ಸು ಪತ್ರ ಪಡೆಯಲು ನನ್ನ ಹತ್ತಿರ ಬರುತ್ತಿರುವುದನ್ನು ಕಂಡು ಸಧ್ಯಕ್ಕೆ ಇಂಗ್ಲೀಷ್ ನರ್ಸರಿ ಶಾಲೆಯನ್ಬು ಆರಂಭಿಸಲಾಗಿದೆ ಶಾಲೆ ನಿರ್ಮಿಸಲು ಹೆಡ್ ಕ್ವಾಟರ್ಸ ಆವರಣದಲ್ಲಿ ಸಾಕಷ್ಟು ಜಾಗೆ ಇದೆ ನರ್ಸರಿ ಶಾಲೆಗೆ ಉತ್ತಮ ಸ್ಪಂದನೆ ಸಿಕ್ಕರೆ ಮುಂದಿನ ತರಗತಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಡಿಸಿ ರಾಜಪ್ಪ ಹೇಳಿದರು
ಬೆಂಗಳೂರು, ಕುಂದಾನಗರಿ ಬೆಳಗಾವಿಯಂತಹ ನಗರ ಪ್ರದೇಶದಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿಯಂತಹ ನರ್ಸರಿ ಶಾಲೆಗಳಿಗೆ ಮಕ್ಕಳನ್ನ ಸೇರಿಸಬೇಕೆಂದ್ರೆ ಲಕ್ಷಾಂತರ ರುಪಾಯಿ ಹಣಬೇಕು…ಹೀಗೆ ಬಹಳಷ್ಟು ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸು ಆಸೆಯಿದ್ದರೂ, ಆರ್ಥಿಕ ಸಮಸ್ಯೆಯಿಂದ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಹೀಗೆ ಬೆಳಗಾವಿ ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಈ ಸ್ಕೂಲ್ ಆರಂಭಿಸಲಾಗಿದೆ. ಆರಂಭದಲ್ಲಿ 22 ಪೊಲೀಸ್ ಸಿಬ್ಬಂದಿ ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ.. ಇಲ್ಲಿ ದಾಖಲಾದ ಮಕ್ಕಳಿಗೆ ವರ್ಷಕ್ಕೆ 5 ರಿಂದ 7 ಸಾವಿರ ರುಪಾಯಿ ಮಾತ್ರ ಹಣವನ್ನ ಪಡೆಯಲಾಗುತ್ತದೆ.. ಮಕ್ಕಳಿಗೆ ಆಟದೊಂದಿಗೆ ಪಾಠ ಎಂಬ ಸೂತ್ರದೊಂದಿಗೆ ಶಿಕ್ಷಣ ಕೊಡಿಸಲಾಗುತ್ತಿದೆ.. ಪೊಲೀಸ್ ಸಿಬ್ಬಂದಿ ಕಲ್ಯಾಣ ನಿಧಿ ಮತ್ತು ಸಾರ್ವಜನಿಕರ ಸಹಭಾಗಿತ್ವದಡಿ ಯಾವುದೇ ಖಾಸಗಿ ಶಾಲೆಗೂ ಕಮ್ಮಿಯಿಲ್ಲದಂತೆ ಬೆಳಗಾವಿ ಪೊಲೀಸ್ ಮಾಂಟೆನ್ಸರಿ ಸ್ಕೂಲ್ ಕಾರ್ಯಾರಂಭ ಮಾಡಿದೆ.. ಸದ್ಯ 3 ರಿಂದ 5 ವರ್ಷದ ಮಕ್ಕಳಿಗೆ ಕಲಿಸಲಾಗುತ್ತಿದ್ದು, ಹಂತ ಹಂತವಾಗಿ ಮಕ್ಕಳ ಸಂಖ್ಯೆ ಹೆಚ್ಚಾದಂತೆ ಉಳಿದ ತರಗತಿಗಳನ್ನು ಆರಂಭಿಸಲು ಪೊಲೀಸ್ ಆಯುಕ್ತ ಡಾ. ಡಿ.ಸಿ. ರಾಜಪ್ಪ ಚಿಂತನೆ ನಡೆಸಿದ್ದಾರೆ.
ಒಟ್ಟ್ನಲ್ಲಿ ದುಬಾರಿ ದುನಿಯಾದಲ್ಲಿ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಡೋನೇಶನ್ ಕೊಟ್ಟು ಕಲಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಆರ್ಥಿಕ ಹೊರೆಯಾಗುತ್ತಿತ್ತು.. ಈಗ ಪೊಲೀಸ್ ಕಮಿಷ್ನರ್ ರಾಜಪ್ಪ ಅವರು ಪೊಲೀಸ್ ನರ್ಸರಿ ಶಾಲೆ ಆರಂಭಿಸಿರುವುದು ಪೊಲೀಸ್ ಸಿಬ್ಬಂದಿಯಲ್ಲಿ ನೆಮ್ಮದಿ ತಂದಿದೆ..ಜತೆಗೆ ಬೆಳಗಾವಿ ಪೊಲೀಸ್ ಆಯುಕ್ತರು ತಮ್ಮ ಸಿಬ್ಬಂದಿ ಮಕ್ಕಳ ಶಿಕ್ಷಣದ ಬಗ್ಗೆ ತೋರಿಸಿದ ಕಳಕಳಿಗೆ ಸಾರ್ವಜನಿಕರಿಂಗ ಮೆಚ್ಚುಗೆ ವ್ಯಕ್ತವಾಗಿದೆ.