- ಬೆಳಗಾವಿ- ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು ಇಂದು ಕೆಎಟಿ ಕಚೇರಿ ಕಟ್ಟಡ ನಿರ್ಮಾಣಕ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಶೀಲಿಸಿ ತಿಂಗಳಲ್ಲಿ ಕಾಮಗಾರಿಯನ್ಬು ಪೂರ್ಣಗೊಳಿಸುವಂತೆ ಖಡಕ್ ಸೂಚನೆ ನೀಡಿದರು
ಕರ್ನಾಟಕ ಅಡಳಿತಾತ್ಮಕ ನ್ಯಾಯ ಮಂಡಳಿಯ ಚೇರಮನ್ ಅವರ ಜೊತೆ ಬೆಳಗಾವಿಯ ಕೆಎಟಿ ಕಚೇರಿ ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಅವರು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು ಕೆಎಟಿ ಕಚೇರಿ ಕಟ್ಟಡದ ವಿಷಯದಲ್ಲಿ ವಿಳಂಬ ಆಗಬಾರದು ತಿಂಗಳ ನಂತರ ಕೆಎಟಿ ಕಚೇರಿಯನ್ನು ಉದ್ಘಾಟಿಸಲು ನಿರ್ಧರಿಸಲಾಗಿದೆ ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ ಎಂದು ಸಂಭಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ
ಬೆಳಗಾವಿಯಲ್ಲಿ ಕೆಎಟಿ ಕಚೇರಿ ಬೇಕಂತಾ ಬೆಳಗಾವಿಯ ವಕೀಲರು ನಿರಂತರವಾಗಿ ಹೋರಾಟ ಮಾಡಿದ ಪರಿಣಾಮ ಬೆಳಗಾವಿಗೆ ಕೆಎಟಿ ಮಂಜೂರಾಗಿದ್ದು ಭೀಮ್ಸ ಆಸ್ಪತ್ರೆಯ ಎದುರು ಇರುವ ಪ್ಯಾಂಟಾಲುಮ್ಸ ಶೋ ರೂಮ್ ಮೇಲ್ಗಡೆ ಬಾಡಿಗೆ ಕಟ್ಟಡದಲ್ಲಿ ಕೆಎಟಿ ಕಚೇರಿ ಕಟ್ಟಡ ಆರಂಭವಾಗಲಿದೆ
ಜಿಲ್ಲಾಧಿಕಾರಿ ಜಿಯಾವುಲ್ಲಾ ಕೆಎಟಿ ಕಚೇರಿ ಕಟ್ಟಡ ಆರಂಭಕ್ಕೆ ವಿಶೇಷ ಕಾಳಜಿ ವಹಿಸಿರುವದು ಸ್ವಾಗತಾರ್ಹ