ಬೆಳಗಾವಿ- ಬೆಳಗಾವಿ ಕನ್ನಡಿಗರು ಗಡಿನಾಡು ಗುಡಿಯಲ್ಲಿ ಕನ್ನಡದ ಹಬ್ಬ ಆಚರಣೆ ಮಾಡುವ ಸಂಧರ್ಭದಲ್ಲಿ ನಾಡವಿರೋಧಿ ಎಂಈಎಸ್ ಗೆ ಕರಾಳ ದಿನಾಚರಣೆ ಆಚರಿಸಲು ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು ಎಂದು ಆಗ್ರಹಿಸಿ ಕರವೇ ಜಿಲ್ಲಾ ಘಟಕ ದೀಪಕ ಗುಡಗನಟ್ಟಿ ಅವರ ನೇತ್ರತ್ವದಲ್ಲಿ ಪಂಜಿನ ಮೆರವಣಿಗೆ ನಡೆಸಿದರು
ಬೆಳಗಾವಿಯ ಚನ್ನಮ್ಮ ವೃತ್ತದಿಂದ ಪಂಜಿನ ಮೆರವಣಿಗೆ ಆರಂಭಿಸಿದ ಕರವೇ ಕಾರ್ಯಕರ್ತರು ಎಂಈಎಸ್ ವಿರುದ್ಧ ಕರಾಳ ದಿನಾಚರಣೆಗೆ ಅನುಮತಿ ನೀಡುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು
ಚನ್ನಮ್ಮ ವೃತ್ತದಿಂದ ಆರಂಭವಾದ ಪಂಜಿನ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ತೆರಳಿ ನಂತರ ಪುನಹ ಚನ್ನಮ್ಮ ವೃತ್ತದಲ್ಲಿ ಒಂದು ಘಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿಸಿ ಬೇಡ ಬೇಡ ಕರಾಳ ದಿನಾಚರಣೆಗೆ ಅನುಮತಿ ಬೇಡ ಎಂದು ಕರವೇ ಕಾರ್ಯಕರ್ತರು ಕನ್ನಡಿಗರ ಪರವಾಗಿ ತಮ್ಮ ಹಕ್ಕೊತ್ತಾಯ ಮಾಡಿದರು
ಈಸಂಧರ್ಭದಲ್ಲಿ ಮಾತನಾಡಿದ ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಸರ್ಕಾರ ಕನ್ನಡದ ನೆಲ,ಜಲ ಭಾಷೆ ಸಂಸ್ಕೃತಿ ರಕ್ಷಣೆಯ ವಿಷಯದಲ್ಲಿ ರಾಜೀಯಾಗದೇ ಕನ್ನಡದ ಹಿತ ಕಾಯಬೇಕು ಯಾವುದೇ ಮುಲಾಜಿಲ್ಲದೇ ನಾಡದ್ರೋಹಿ ಎಂಈಎಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಕನ್ನಡ ರಾಜ್ಯೋತ್ಸವದ ದಿನ ಕನ್ನಡಿಗರು ಕನ್ನಡದ ಹಬ್ಬ ಆಚರಿಸುವ ಸಂಧರ್ಭದಲ್ಲಿ ಕರಾಳ ದಿನಾಚರಣೆಗೆ ಅವಕಾಶ ಕೊಡದೇ ಕನ್ನಡದ ಹಿತ ಕಾಯಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು
ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಮತ್ತು ನಗರ ಪೋಲೀಸ್ ಆಯುಕ್ತ ಡಿಸಿ ರಾಜಪ್ಪ ಕೂಡಲೇ ಸಭೆ ಕರೆದು ಕರಾಳ ದಿನಾಚರಣೆಯನ್ನು ನಿಷೇಧಿಸಿ ಆದೇಶ ಹೊರಡಿಸಬೇಕು ಕರಾಳ ದಿನಾಚರಣೆಗೆ ಅವಕಾಶ ನೀಡಿದರೆ ರಾಜ್ಯದ ಎಲ್ಲ ಜಿಲ್ಲೆಗಳ ಕರವೇ ಕಾರ್ಯಕರ್ತರು ಬೆಳಗಾವಿಗೆ ಮುತ್ತಿಗೆ ಹಾಕಿ ಕರಾಳ ದಿನಾಚರಣೆಯನ್ನು ತಡೆಯುತ್ತಾರೆ ಎಂದು ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದರು
ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ಗಣೇಶ ರೋಕಡೆ ಸೇರಿದಂತೆ ನೂರಾರು ಕರವೇ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು