Breaking News

ಈ ಗುಲಾಬಿ ಹೂ …ನಿಮಗಾಗಿ…ಅಖಂಡ ಕರ್ನಾಟಕ ನಮಗೆಲ್ಲರಿಗಾಗಿ…!!!!

ಬೆಳಗಾವಿ- ಕೆಲವು ಸಂಘಟನೆಗಳು ಇಂದು ಉತ್ತರ ಕರ್ನಾಟಕ ಬಂದ್ ಕರೆ ನೀಡಿರುವದನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಬಂದ್ ಗೆ ಬೆಂಬಲ ಬೇಡ ಎಂದು ಗುಲಾಬಿ ಹೂ ಕೊಟ್ಟು ಅಖಂಡ ಕರ್ನಾಟಕದ ಮಂತ್ರ ಜಪಿಸಿದ್ದು ಎಲ್ಲರ ಗಮನ ಸೆಳೆಯಿತು

ಸಮಗ್ರ ಕರ್ನಾಟಕ ಅಭಿವೃದ್ದಿಗಾಗಿ ಡಾ. ಡಿ.ಎಂ.ನಂಜುಡಪ್ಪ ವರದಿಯನ್ನು ಕೇಂದ್ರ, ರಾಜ್ಯ ಸರಕಾರಗಳು ಜಂಟಿಯಾಗಿ ಜಾರಿಗೊಳಿಸಿ ಅಖಂಡ ಕರ್ನಾಟಕ ಉಳಿಸುವಂತೆ ಆಗ್ರಹಿಸಿ ಗುರುವಾರ ಕರವೇ ಕಾರ್ಯಕರ್ತರು ಚನ್ನಮ್ಮ ವೃತ್ತದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕದ ಸೌರ್ವಭೌಮತೆಯನ್ನು ಕಾಪಾಡಲು ಕಳೆದ 18 ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಮಾಡುತ್ತ ಬಂದಿದೆ. ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಚನೆಯಾಗಿರುವ ರಾಜ್ಯಗಳ ಒಕ್ಕೂಟವಾದ ಭಾರತದಲ್ಲಿ ಕರ್ನಾಟಕ ಕೇಂದ್ರ ಸರಕಾರಕ್ಕೆ ಹೆಚ್ಚಿನ ಅನುದಾನ ನೀಡುವ ಬಹು ದೊಡ್ಡ ರಾಜ್ಯವಾಗಿದೆ. ನಾಡಿನ ಎಲ್ಲ ಜನರ ತ್ಯಾಗ ಬಲಿದಾನಗಳಿಂದ ಅಖಂಡ ಕರ್ನಾಟಕವನ್ನು ಪ್ರಾದೇಶಿಕ ಅಸಮತೋಲನವನ್ನು ನಿವಾರಣೆ ಮಾಡಲು ಮಾಜಿ ಸಿಎಂ ಎಸ್.ಎಂ.ಕೃಷ್ಣವರ ಸರಕಾರದ ಅವಧಿಯಲ್ಲಿ ನೀಡಲಾದ ನಾಡಿನ ಹಿರಿಯ ಆರ್ಥಿಕ ತಜ್ಞರಾದ ನಂಜುಡಪ್ಪ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಸೇರಿಕೊಂಡು ಜಾರಿಗೆ ತರಬೇಕೆಂದು ಆಗ್ರಹಿಸಿದರು.

ನಂಜುಡಪ್ಪ ವರದಿಯಲ್ಲಿ ರಾಜ್ಯದ 119 ತಾಲೂಕುಗಳು ಹಿಂದುಳಿದಿದ್ದು ಅದರಲ್ಲಿ ಕೆಲವು ತಾಲೂಕುಗಳು ಶಿಕ್ಷಣ, ಉದ್ಯೀಗ, ಉದ್ಯಮ, ಆರೋಗ್ಯ ಸೇವೆ, ಮೂಲಭೂತ ಸೌಕರ್ಯ, ಹಣಕಾಸು ಸಂಸ್ಥೆಗಳ ಸ್ಥಾಪನೆ ಕೃಷಿ ನೀರಾವರಿ ಸೌಲಭ್ಯಗಳ ಕುರಿತು ಸರಿಯಾದ ಅನುದಾನ ನೀಡುವುದನ್ನು ಹಾಗೂ ಬಿಡುಗಡೆಯಾದ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಕೆಯಾಗುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡಬೇಕು. ಅಖಂಡ ಕರ್ನಾಟಕ ಎಂದೂ ಒಡೆಯಬಾರದು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಮಹಾದೇವ  ತಳವಾರ, ದೀಪಕ ಗುಡಗನಟ್ಟಿ, ಟಿ.ಶಾಂತಮ್ಮ, ಗಣೇಶ ರೋಕಡೆ, ಬಸವರಾಜ ನಾಶಿಪುಡಿ, ನಿಂಗರಾಜ ಗುಂಡ್ಯಾಗೋಳ. ಬಾಳು ಜಡಗಿ, ಫರೀದಾ ದೇವಲಾಪೂರೆ, ರಮೇಶ ತಳವಾರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಗುಲಾಬಿ ಹೂ ನೀಡಿದ ಕರವೇ ಕಾರ್ಯಕರ್ತರು

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *