ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಠಾತ್ತ ರಾಜಕೀಯ ಬೆಳವಣಿಗೆಯಲ್ಲಿ ಪಾಲಿಕೆಯ ವಿರೋಧ ಪಕ್ಷದ ನಾಯಕ ರವಿ ಧೋತ್ರೆ ಅವರನ್ನು ಪದಚ್ಯುತಿಗೊಳಿಸಿ ಅವರ ಸ್ಥಾನಕ್ಕೆ ದೀಪಕ ಜಮಖಂಡಿ ಯವರನ್ನು ವಿರೋಧ ಪಕ್ಷದ ನಾಯಕನನ್ನಾ ನಿಯೋಜನೆ ಮಾಡಲಾಗಿದೆ
ಪಾಲಿಕೆಯ ಸಾಮಾನ್ಯ ಸಭೆ ನಡೆಯುವ ಮುನ್ನ ಪಾಲಿಕೆಯಲ್ಲಿ ನಡೆದ ರಾಜಕೀಯ ಪ್ರಹಸನದಲ್ಲಿ ರವಿ ಧೋತ್ರೆ ಬಲಿಪಶುವಾಗಿದ್ದಾರೆ
ಕಳೆದ ಆರು ತಿಂಗಳಿನಿಂದ ನಡೆಯುತ್ತಿದ್ದ ಕಲಹ ಈಗ ಮತ್ತೆ ಗರಿಗೆದರಿದ್ದು ಪಾಲಿಕೆಯಲ್ಲಿ ಗುಂಪುಗಾರಿಕೆ ಶುರುವಾಗಿದೆ
ರವಿ ಧೋತ್ರೆ ಅವರು ಲಖನ್ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ಅವರ ಜೊತೆ ಗುರುತಿಸಿಕೊಂಡಿದ್ದೆ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ
ಸುಮಾರು 16 ಜನ ನಗರ ಸೇವಕರು ದೀಪಕ ಜಮಖಂಡಿ ವಿರೋಧ ಪಕ್ಷದ ನಾಯಕ ಎಂದು ಸಹಿ ಮಾಡಿದ ಪ್ರಮಾಣ ಪತ್ರವನ್ನು ಮೇಯರ್ ಗೆ ಸಲ್ಲಿಸಿದ ಹಿನ್ನಲೆಯಲ್ಲಿ ಮೇಯರ್ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ದೀಪಕ ಜಮಖಂಡಿ ವಿರೋಧ ಪಕ್ಷದ ನಾಯಕ ಎಂದು ಘೋಷಿಸಿದ್ದಾರೆ
ಈ ಕುರಿತು ಬೆಳಗಾವಿ ಸುದ್ಧಿ ಜೊತೆ ಮಾತಾಡಿದ ರವಿಧೋತ್ರೆ ಯಾರು ಸಹಿ ಮಾಡಿದ್ದಾರೆ ಅನ್ನೋದು ನನ್ನ ಗಮನಕ್ಕೆ ಬಂದಿಲ್ಲ ದೀಪಕ ಜಮಖಂಡಿ ವಿರೋಧ ಪಕ್ಷದ ನಾಯಕ ಆಗಿರುವದಕ್ಕೆ ನನ್ನ ವಿರೋಧ ಇಲ್ಲ ಆದ್ರೆ ಪಾಲಿಕೆಯಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಗಮನಕ್ಕೆ ತಂದಿದ್ದೇನೆ ಅವರು ದೆಹಲಿಯಿಂದ ಮರಳಿದ ಬಳಿಕ ಚರ್ಚೆ ಮಾಡುವದಾಗಿ ಹೇಳಿದ್ದಾರೆ ಎಂದು ರವಿ ಧೋತ್ರೆ ತಿಳಿಸಿದರು
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …