Breaking News

ಗಲೀಜು ಮಾಡುವ ಮಹನೀಯರ ಪತ್ತೆಗೆ ಕ್ಯಾಮರಾ ಕಣ್ಗಾವಲು..!

ಬೆಳಗಾವಿ – ಬೆಳಗಾವಿ ನಗರದಲ್ಲಿ ಸರಗಳ್ಳರನ್ನು ಕಿಡಗೇಡಿಗಳನ್ನು,ಸಮಾಜ ಘಾತುಕ ಶಕ್ತಿಗಳನ್ನು ಗುರುತಿಸಲು ಸಿಸಿ ಟಿವ್ಹಿ ಕ್ಯಾಮರಾ ಅಳವಡಿಸಿದ್ದನ್ನು ನೀವು ಕೇಳಿದ್ದಿರಾ ,ನೋಡಿದ್ದೀರಾ ಆದ್ರೆ ರಸ್ತೆಯ ಮೇಲೆ ಚರಂಡಿಗಳಲ್ಲಿ ಕಸ ಎಸೆದು ಗಲೀಜು ಮಾಡುವ ಮಹನೀಯರನ್ನು ಪತ್ತೆ ಮಾಡಲು ಸ್ಥಳೀಯ ನಗರ ಸೇವಕರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಸಿಸಿ ಟಿವ್ಹಿ ಕ್ಯಾಮರಾ ಅಳವಡಿಸಿ ಎಲ್ಲರ ಗಮನ ಸೆಳೆದಿದ್ದಾರೆ

ಚನ್ನಮ್ಮ ನಗರ ಪ್ರದೇಶದ ನಗರ ಸೇವಕ ಬೆಳಗಾವಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ದೀಪಕ ಜಮಖಂಡಿ ತಮ್ಮ ವಾರ್ಡಿನ ಸ್ವಚ್ಛತೆ ಗಾಗಿ ವಿನೂತನ ಪ್ರಯೋಗ ಮಾಡಿದ್ದಾರೆ ಸುಮಾರು ಒಂದು ಲಕ್ಷ ರೂ ಖರ್ಚು ಮಾಡಿ ತಮ್ಮ ವಾರ್ಡಿನ ಐದು ಬ್ಲಾಕ್ ಸ್ಪಾಟ್ ಗಳಲ್ಲಿ ಸಿಸಿ ಟಿವ್ಹಿ ಕ್ಯಾಮರಾ ಅಳವಡಿಸಿ ರಸ್ತೆಯ ಮೇಲೆ,ಚರಂಡಿಗಳಲ್ಲಿ ಖುಲ್ಲಾ ಜಾಗಗಳಲ್ಲಿ ಕಸ ಎಸೆದು ಸಾರ್ವಜನಿಕ ಪ್ರದೇಶಗಳನ್ನು ಗಲೀಜು ಮಾಡುವ ಮಹನೀಯರನ್ನುಪತ್ತೆ ಮಾಡಿ ಅವರಿಗೆ ದಂಡ ವಿಧಿಸಲು ನಗರ ಸೇವಕ ದೀಪಕ ಜಮಖಂಡಿ ಪ್ಲ್ಯಾನ್ ಮಾಡಿದ್ದಾರೆ

ಪಾರ್ವತಿ ನಗರ ,ಚನ್ನಮ್ಮ ನಗರ ಎರಡನೇಯ ಹಂತ ಗುರುಪ್ರಸಾದ ನಗರ ಮುಖ್ಯ ರಸ್ತೆ ಭವಾನಿ ನಗರದಲ್ಲಿ ಸಿಸಿ ಟಿವ್ಹಿ ಕ್ಯಾಮರಾ ಅಳವಡಿಸಿ ಈ ಪ್ರದೇಶದಲ್ಲಿ ಎಚ್ಚರಿಕೆ ನೀಡುವ ಫಲಕ ಸಹಿತ ಹಾಕಲಾಗಿದೆ

ಈ ಕುರಿತು ಮಾಹಿತಿ ನೀಡಿದ ದೀಪಕ ಜಮಖಂಡಿ ಬೆಳಗಾವಿಯ ಚನ್ನಮ್ಮ ನಗರ ಪ್ರದೇಶ ಪ್ರಶಾಂತ ಮತ್ತು ನಿರ್ಮಲವಾಗಿದೆ ಈ ಪ್ರದೇಶದಲ್ಲಿ ಪೌರ ಕಾರ್ಮಿಕರು ಮನೆನೆಗೆ ತೆರಳಿ ಕಸ ಸಂಗ್ರಹ ಮಾಡುತ್ತಿದ್ದರೂ ಸಹ ಕೆಲ ಮಹನೀಯರು ರಸ್ತೆಯ ಮೇಲೆ ಕಸ ಚೆಲ್ಲಿ ಗಲೀಜು ಮಾಡುತ್ತಿದ್ದಾರೆ ಸಿಸಿ ಟಿವ್ಹಿ ಕ್ಯಾಮರಾ ಮೂಲಕ ದೃಶ್ಯವಳಿಗಳನ್ನು ರಿಕಾರ್ಡ್ ಮಾಡಿ ಇದನ್ನು ಪಾಲಿಕೆ ಆಯುಕ್ತರ ಗಮನಕ್ಕೆ ತಂದು ದಂಡ ವಿಧಿದಲಾಗುವದು ಪದೇ ಪದೇ ಕಸ ಚೆಲ್ಲುವ ಮಹನೀಯರ ಭಾವ ಚಿತ್ರ ಹಾಕಿ ದೊಡ್ಡ ಬ್ಯಾನರ್ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲುವ ಮಹನೀಯರು ಎಂದು ಬಿಂಬಿಸಲಾಗುವದು ಎಂದು ದೀಪಕ ಜಮಖಂಡಿ ಎಚ್ಚರಿಕೆ ನೀಡಿದ್ದಾರೆ

ಇದೇ ರೀತಿ ಎಲ್ಲ ನಗರ ಸೇವಕರು ಜಾಗೃತರಾಗಿ ತಮ್ಮ ತಮ್ಮ ವಾರ್ಡಗಳಲ್ಲಿ ಸಿಸಿ ಟಿವ್ಹಿ ಕ್ಯಾಮರಾ ಅಳವಡಿಸಿ ಗಲೀಜುಖೋರರನ್ನು ಗುರುತಿಸಿ ಅವರಿಗೆ ದಂಡ ವಿಧಿಸಿ ದರೆ ಬೆಳಗಾವಿ ನಗರ ಸ್ವಚ್ಛ ಸುಂದರ ಆಗುವದರಲ್ಲಿ ಸಂದೇಹ ವಿಲ್ಲ

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *