ಮಹಾದಾಯಿ ಗೋವಾ ರಾಜ್ಯದ ಸಂಜೀವಿನಿ ಮಹಾರಾಷ್ಟ್ರ ಗೃಹ ಸಚಿವರ ಉವಾಚ..
ಬೆಳಗಾವಿ- ಗೋವಾ ಚಿಕ್ಕರಾಜ್ಯ ,ಮಹಾರಾಷ್ಟ್ರ ಮತ್ತು ಕರ್ನಾಟಕ ದೊಡ್ಡ ರಾಜ್ಯಗಳು ಗೋವಾ ಸಣ್ಣ ತಮ್ಮ ಇದ್ದ ಹಾಗೆ ,ಹಿರಿಯ ಸೋದರರಂತಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ಕಿರಿಯ ತಮ್ಮನ ಬಗ್ಗೆ ಕಾಳಜಿ ಮಾಡಬೇಕು ಮಹಾದಾಯಿ ಗೋವಾ ರಾಜ್ಯದ ಸಂಜೀವಿನಿ ಇದ್ದ ಹಾಗೆ ಎಂದು ಮಹಾರಾಷ್ಟ್ರ ಗೃಹ ಸಚಿವ ದೀಪಕ ಕೇಸರಕರ ಹೇಳುವ ಮೂಲಕ ಉರಿಯುವ ಬೆಂಕಿಯಲ್ಲಿ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ
ಬೆಳಗಾವಿಯಲ್ಲಿ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರದ ಕನ್ನಡಿಗರಿಗೆ ಅವರ ಮಾತೃಭಾಷೆ ಯಲ್ಲಿ ಶಿಕ್ಷಣ ಕೊಡುತ್ತಿದೆ ಅವರ ಭಾಷೆಯಲ್ಲಿಯೇ ಎಲ್ಲ ರೀತಿಯ ಸರ್ಕಾರಿ ಸವಲತ್ತುಗಳನ್ನು ಕೊಡುತ್ತಿದೆ ಆದ್ರೆ ಕರ್ನಾಟಕ ಸರ್ಕಾರ ಗಡಿಭಾಗದ ಮರಾಠಿಗರಿಗೆ ಅವರ ಮಾತೃಭಾಷೆಯಲ್ಲಿ ಸಾತ್ ಬಾರಾ ಉತಾರ ಕೊಡುತ್ತಿಲ್ಲ ಮರಾಠಿ ಭಾಷಿಕರು ವಾಸಿಸುವ ಗ್ರಾಮಗಳಲ್ಲಿ ಕನ್ನಡದಲ್ಲಿ ಕಾಗದ ಪತ್ರ ನೀಡಿದರೆ ಅವರಿಗೆ ತಿಳಿಯಲು ಸಾಧ್ಯವೇ ? ಎಂದು ಪ್ರಶ್ನಿಸಿದ ಅವರು ಕರ್ನಾಟಕ ಸರ್ಕಾರ ಮರಾಠಿ ಮಾತೃಭಾಷೆ ಗೆ ಅನ್ಯಾಯ ಮಾಡುತ್ತಿದೆ ಎಂದು ದೀಪಕ ಕೇಸರಕರ ಬೆಳಗಾವಿಯಲ್ಲಿ ಪುಂಡಾಟಿಕೆಯ ಹೇಳಿಕೆ ನೀಡಿದ್ದಾರೆ
ಕರ್ನಾಟಕ ಸರ್ಕಾರ ಮಹಾಜನ ವರದಿಯನ್ನು ಒಪ್ಪಿಕೊಂಡಿದೆ ಆದರೆ ಮಹಾರಾಷ್ಟ್ರ ವರದಿಯನ್ನು ತಿರಸ್ಕರಿಸಿದೆ ಮಹಾಜನ ವರದಿಯ ಪ್ರಕಾರ ಮಹಾದಾಯಿ ನದಿ ಹರಿಯುವ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಿದೆ ಕರ್ನಾಟಕ ಸರ್ಕಾರ ಮಹಾದಾಯಿ ನದಿ ತಿರುವು ಮಾಡಿದ್ದಲ್ಲಿ ಅದು ನ್ಯಾಯಾಂಗ ನಿಂದನೆ ಆಗುತ್ತದೆ ಗಡಿವಿವಾದ ಸುಪ್ರೀಂ ಕೋರ್ಟಿನಲ್ಲಿ ಇರುವಾಗ ನದಿ ತಿರುವು ಮಾಡುವದು ಎಷ್ಟರ ಮಟ್ಟಿಗೆ ಸರಿ ಎಂದು ಮಹಾರಾಷ್ಟ್ರ ಗೃಹ ಸಚಿವ ದೀಪಕ ಕೇಸರಕರ ವಿವಾದಾತ್ಮಕ ಹೇಳಿಕೆ ನೀಡಿ ಗೋವಾ ಮತ್ತು ಕರ್ನಾಟಕದ ನಡುವಿನ ಸಾಮರಸ್ಯ ಕ್ಕೆ ಬೆಂಕಿ ಇಡುವ ಪ್ರಯತ್ನ ಮಾಡಿದ್ದಾರೆ
ಗೋವಾ ಮತ್ತು ಮಹಾರಾಷ್ಟ್ರ ನಡುವೆ ಉತ್ತಮ ಸಮಂಧವಿದೆ ಮಹಾರಾಷ್ಟ್ರ ರಾಜ್ಯದ ಜಲಾಶಯವೊಂದರ ಶೇ 76 ರಷ್ಟು ನೀರನ್ನು ಗೋವಾ ರಾಜ್ಯ ಬಳಿಸಿಕೊಳ್ಳುತ್ತದೆ ಆದರೆ ಮಹಾರಾಷ್ಟ್ರ ಸರ್ಕಾರ ಅದಕ್ಕೆ ಎಂದಿಗೂ ಚಕಾರವೆತ್ತಿಲ್ಲ ಈ ಮಹಾದಾಯಿ ಗೋವಾ ರಾಜ್ಯದ ಸಂಜೀವಿನಿ ಆಗಿದ್ದು ಕರ್ನಾಟ ಸರ್ಕಾರ ಈಬಗ್ಗೆ ಗೋವಾ ಕುರಿತು ಮೃದು ಧೋರಣೆ ತಾಳಬೇಕು ಎಂದು ಮಹಾರಾಷ್ಟ್ರದ ಗೃಹ ಸಚಿವರು ಕರ್ನಾಟಕ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ
ಮಹಾಜನ ವರದಿಯನ್ನೇ ಒಪ್ಪದ ಮಹಾರಾಷ್ಟ್ರ ಮಹಾದಾಯಿ ಕುರಿತು ಕಿತಾಪತಿ ಮಾಡಿರುವದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ