ಬೆಳಗಾವಿ-ನಗರದ ಪಕ್ಕದಲ್ಲಿರುವ  ಗಣೇಶಪುರದ ಜ್ಯೋತಿ ನಗರದ ಪುಟ್ಟ ಬಾಲೆಯೊಬ್ಬಳು ಡೆಂಗ್ಯು ಜ್ವರಕ್ಕೆ ಬಲಿಯಾದ ಘಟನೆ ನಡೆದಿದೆ
ಜ್ಯೋತಿ ನಗರದ ನಿವಾಸಿ ಆರು  ವರ್ಷದ ಬಾಲೆ ಅನುಷಾ ಅಶೋಕ ಕರಾಡೆ ಡೆಂಗ್ಯು ಜ್ವರದಿಂದ ಬಳಲುತ್ತಿರುವಾಗ ಖಡೇಬಝಾರ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಇಲ್ಲಿ ಚಿಕಿತ್ಸೆ ಫಲಕಾರಿಯಾಗದ ಕಾರಣ ಬಾಲಕಿಯನ್ನು ಕೆಎಲ್‍ಇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದ ಕಾರಣ ಬಾಲಕಿ ಮೃತಪಟ್ಟಿದ್ದಾಳೆ
ಬೆಳಗಾವಿ ನಗರದ ಗಣೇಶಪುರದಲ್ಲಿ ಕಾಲರಾ ಡೆಂಗ್ಯು ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಆದರೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಗಮನಹರಿಸದೇ ಇರುವದರಿಂದ ಅಲ್ಲಿಯ ಮುಗ್ದ ಜನ ಬಲಿಯಾಗುತ್ತಿದ್ದಾರೆ ಈ ಕುರಿತು ಸ್ಥಳಿಯ ಜನಪ್ರತಿನಿಧಿಗಳು ಮೇಲಾಧಿಕಾರಿಗಳು ಗಮನ ಹರಿಸಬೇಕಾಗಿದೆ
		
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ