ಬೆಳಗಾವಿ 28: ಸಮಾಜದಿಂದ ಬಂದ ನಾವು ಸಮಾಜದ ಋಣವನ್ನು ತಿರಿಸಬೇಕು. ಪೊಲೀಸ್ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳೆಂದರೆ ಸಾರ್ವಜನಿಕರು ಹೆದರಬಾರದು. ಪೊಲೀಸ್ ಸಿಬ್ಬಂದಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಡಿಜಿ ಮತ್ತು ಐಜಿಪಿ ಓ ಪ್ರಕಾಶ ಸಿಬ್ಬಂದಿಗಳಿಗೆ ಕರೆ ನೀಡಿದರು.
ಅವರು ಶನಿವಾರ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಉತ್ತರ ವಲಯದ ಎಲ್ಲಾ ಜಿಲ್ಲೆಗಳು ಮತ್ತು ಪೊಲೀಸ್ ಕಮೀಷನರೇಟ್, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ದೇವರ ಕೃಪೆ, ತಂದೆ-ತಾಯಿಯ ಆರ್ಶಿವಾದದಿಂದ ಸರಕಾರಿ ಕೆಲಸಕ್ಕೆ ಬಂದಿರುವ ನಾವು ನಮ್ಮ ಕುಟುಂಬಕ್ಕೆ ಮಾತ್ರ ಸಿಮಿತವಾದರೆ ನಮ್ಮಗೆ ಸಂತೋಷ ದೊರೆಯುವುದಿಲ್ಲ. ಸಾರ್ವಜನಿಕವಾಗಿ ಉತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸಿದರೆ ಸಂತೋಷ ನೀಡುತ್ತದೆ ಎಂದರು.
ಪೊಲೀಸ್ ಕೆಲಸ ಕಷ್ಟದ ಕೆಲಸವಾದರು, ನ್ಯಾಯಕ್ಕಾಗಿ ಪೊಲೀಸ್ ಠಾಣೆಗಳಿಗೆ ಬರುವ ನೋಂದವರಿಗೆ ಸಹಾಯ ಮಾಡಬೇಕು. ಸಮಾಜದಲ್ಲಿ ಒಳ್ಳೆಯವರು ಇರುತ್ತಾರೆ.ಸರಿಯಾಗಿ ಪ್ರಕರಣಗಳನ್ನು ದಾಖಲಿಸಿಕೊಂಡು ನ್ಯಾಯ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ತಾವು ಪೊಲೀಸ್ ಇಲಾಖೆಗೆ ಸೇರಿ ಪ್ರೋಬೆಷನರಿಯಾಗಿ ಸೇವೆ ಸಲ್ಲಿಸಲು ಬಂದಾಗ ಡಿಐಜಿಯಾಗಿದ್ದ ರೇವಣ್ಣಸಿದ್ದಯ್ಯಾ ಅವರು ನೀಡಿರುವ ತರಬೇತಿ,ಮಾರ್ಗದರ್ಶನ ಇವತ್ತು ಸಮಾಜದ ಎಲ್ಲ ವರ್ಗದ ನೋಂದವರ ಸೇವೆ ಸಲ್ಲಿಸುವ ಅವಕಾಶ ತಮ್ಮಗೆ ದೊರೆಯಿತ್ತು. ಸಿಬ್ಬಂದಿ, ಸಾರ್ವಜನಿಕರ ಸಹಕಾರದಿಂದ ನೋಂದವರಿಗೆ ನ್ಯಾಯ ದೊರಕಿಸಿ ಕೊಡುವ ಶಕ್ತಿ ಮೀರಿ ಪ್ರಯತ್ನ ಮಾಡಿದೆ ಎಂದು ತಿಳಿಸಿದರು.
ತಮ್ಮ 35 ವರ್ಷದ ಸೇವೆಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆಗೆ ಇಷ್ಟೋಂದು ಸೌಲಭ್ಯಗಳು ದೊರಕಿರುವುದು ಕಳೆದ 2 ವರ್ಷದಲ್ಲಿ. ಸರಕಾರ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಅನೇಕ ಬೇಡಿಕೆಗಳ ಈಡೇರಿಕೆಗೆ ಭರವಸೆ ನೀಡಿದೆ ಮುಂದಿನ ದಿನಮಾನಗಳಲ್ಲಿ ಸಿಬ್ಬಂದಿಗಳಿಗೆ ಸಹಕಾರಿಯಾಗಲ್ಲಿದೆ ಎಂದು ಓಂ ಪ್ರಕಾಶ ಹೇಳಿದರು.
ಬೆಳಗಾವಿ ಉತ್ತರ ವಲಯ ಐ.ಜಿ.ಪಿ ಡಾ. ಕೆ. ರಾಮಚಂದ್ರರಾವ್ ಮಾತನಾಡಿ, ಕಳೆದ 2 ವರ್ಷಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ನಡೆದಿರುವ ಅನೇಕ ಕಾರ್ಯಕ್ರಮಗಳು ತಾವು ಬಂದು 22 ವರ್ಷದಲ್ಲಿ ನಡೆದಿಲ್ಲ. ಮುಂದೆ ನಡೆಯುತ್ತವೆ ಇಲ್ಲವೋ ಗೋತ್ತಿಲ್ಲ. ಇಲಾಖೆಯಲ್ಲಿ ಸುಮಾರು 25 ಸಾವಿರ ಸಿಬ್ಬಂದಿಗಳ ಕೊರತೆಯಲ್ಲಿತ್ತು, ಸುಮಾರು 6ರಿಂದ 7 ಸಾವಿರ ಸಿಬ್ಬಂದಿಗಳ ನೇಮಕಾತಿ ಮುಗದಿದೆ ಆದೇಶ ನೀಡಲಾಗುತ್ತಿದೆ. ಸುಮಾರು 18 ಸಾವಿರ ಸಿಬ್ಬಂದಿಗಳ ನೇಮಕಾತಿ ಪ್ರಕ್ರೀಯೇ ನಡೆಯುತ್ತಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನಗರದ ಪೊಲೀಸ್ ಆಯುಕ್ತ ಪಾಡುರಂಗ ರಾಣೆ ಮಾತನಾಡಿ, ಅವಕಾಶವನ್ನು ಯಾರು ಸರಿಯಾಗಿ ಉಪಯೋಗ ಮಾಡಿಕೊಳ್ಳುತ್ತಾರೆ ಅಂತವರು ನಿಜವಾದ ಸಾಧಕರಾಗುತ್ತಾರೆಂದರು.
ಉತ್ತರ ವಲಯದ ವಿವಿಧ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಸ್.ಎನ್. ಸಿದ್ರಾಮಪ್ಪ, ಕೆ.ಸಂತೋಷ್ ಬಾಬು, ಧರ್ಮೇಂದ್ರ ಕುಮಾರ ಮೀನಾ, ಸಿ.ಬಿ.ರಿಷ್ಯಂತ್, ಡಿಸಿಪಿಗಳಾದ ಜೆ.ರಾಧಿಕಾ, ಅಮರನಾಥ ರೆಡ್ಡಿ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬೆಳಗಾವಿ ನಗರ ಪೊಲೀಸ್ ಆಯುಕ್ತ ಟಿ.ಜಿ.ಕೃಷ್ಣಭಟ್ಟ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣವೇಣಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ವಂದಿಸಿದರು.
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …