ಬೆಳಗಾವಿ-ರಾಜ್ಯ ಪೋಲೀಸ್ ಮಹಾ ನಿರ್ದೇಶಕ ರೂಪಕುಮಾರ ದತ್ತಾ ಅವರು ಇಂದು ಬೆಳಗಾವಿಯ ಪೋಲೀಸ್ ಭವನ ಕ್ಕೆ ಆಗಮಿಸಿದರು ಬೆಳಗಾವಿ ಪೋಲೀಸರು ಮಹಾನರ್ದೇಶಕರಿಗೆ ಗೌರವ ವಂದನೆ ಸಲ್ಲಿಸಿ ಬರಮಾಡಿಕೊಂಡರು
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಪೋಲೀಸ್ ಇಲಾಖೆಯಲ್ಲಿ ಶೇ ೯೦ ರಷ್ಟು ಪೋಲೀಸ್ ಕಾನ್ಸ್ಟೇಬಲ್ ಹೆಡ್ ಕಾನ್ಸಸ್ಟೇಬಲ್ ಗಳಿದ್ದಾರೆ ಅವರಿ ಇಲಾಖೆಯಲ್ಲಿ ಅರ್ಥಪೂರ್ಣ ಜವಾಬ್ದಾರಿ ನೀಡಲು ನಿರ್ಧರಿಸಿದ್ದೇವೆ ಒಬ್ಬೊಬ್ಬ ಪೋಲೀಸ್ ಪೋಲಿಸನಿಗೆ ಒಂದು ಏರಿಯಾ ಕೊಟ್ಟು ಆ ಪ್ರದೇಶದ ಇನ್ ಚಾರ್ಜ ಮಾಡುವ ಬೀಟ್ ವ್ಯೆವಸ್ಥೆ ನೀಡಲು ನಿರ್ಧರಿಸಿದ್ದೇವೆ ಎಂದು ರೂಪ ಕುಮಾರ್ ದತ್ತಾ ಹೇಳಿದರು
ಈ ವಿನೂತನ ವ್ಯೆವಸ್ಥೆಯಿಂದ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಸೇವೆ ನೀಡಲು ಸಾಧ್ಯವಾಗುತ್ತದೆ ಬೀಟ್ ಮೇಲೆ ಇರುವ ಪೋಲೀಸರಿಗೆ ಮೋಬೈಲ್ ಫೋನ್ ಗಳನ್ನು ನೀಡುವ ಪ್ರಸ್ತಾವಣೆಯನ್ನು ಗೃಹ ಸಚಿವರಿಗೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು
ಬೆಳಗಾವಿಯಲ್ಲಿ ಕನ್ನಡದಲ್ಲಿ ಕಮಾಂಡ್ ಮಾಡುವ ವ್ಯೆವಸ್ಥೆ ಉತ್ತಮವಾಗಿದೆ ಈ ವ್ಯೆವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೆ ತರುವ ಪ್ರಸ್ತಾವನೆ ಇದೆ ಎಂದು ದತ್ತಾ ಹೇಳಿದರು
ಪೋಲೀಸ್ ಕ್ವಾಟರ್ಸಗಳಲ್ಕಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ 65 ಕೋಟಿ ಅನುದಾನ ಬಿಡುಗಡೆ ಮಾಡಿದೆ ಇದನ್ನು ಜಿಲ್ಲೆಗಳಿಗೆ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವದು ಎಂದರು
ಬೆಳಗಾವಿ ನಗರದಲ್ಲಿ ಪೋಲೀಸ್ ಆಯುಕ್ತರ ಕಚೇರಿ ಕಟ್ಟಡ ನಿರ್ಮಾಣಕ್ಕೆ 13.55 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿತ್ತು ಸರ್ಕಾರ ಅದಕ್ಕೆ ಅನುಮೋದನೆ ನೀಡಿದೆ ಕಟ್ಟಡ ನಿರ್ಮಿಸಲು ಸ್ಥಳ ಕೂಡ ಗುರುತಿಸಲಾಗಿದೆ ಎಂದು ಪೋಲೀಸ್ ಮಹಾ ನಿರ್ದೇಶಕ ರೂಪಕುಮಾರ ದತ್ತಾ ಹೇಳಿದರು