ಬೆಳಗಾವಿ ಸುದ್ದಿ:-
ಬೆಳಗಾವಿ:- ಐಟಿ ಇಲಾಖೆ ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗುರಿಯಾಗಿಸಿಕೋಂಡು ಅಭ್ಯರ್ಥಿಗಳ ಉತ್ಸಾಹ ಕುಗ್ಗಿಸಲು ಕಾಂಗ್ರೆಸ್ ಅಭ್ಯರ್ಥಿಗಳ ಕಛೇರಿಗಳ ಮೇಲೆ ಮತ್ತು ಅಭ್ಯರ್ಥಿಗಳ ಬೆಂಬಲಿಗರ ಮನೆಗಳ ಮೇಲೆ ದಾಳಿ ಮಾಡುತ್ತಿದೆ.
ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದರು ಯಾವುದೇ ಕ್ರಮ ಕೈಗೋಳ್ಳುತ್ತಿಲ್ಲ ಸೋಲಿನ ಭೀತಿಯಿಂದಾಗಿ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷದ ಸಂಘಟನೆ ಬಲಿಷ್ಠವಾಗಿರುವ ರಾಜ್ಯಗಳಲ್ಲಿ ಐಟಿ ದಾಳಿ ನಡೆಯುತ್ತಿದೆ ಎಂದು ಕೆ ಪಿ ಸಿ ಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅಸಮಾಧಾನ ವಕ್ತಪಡಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಮಾಧ್ಯಮಗಳ ಜೋತೆ ಮಾತನಾಡಿದ ಅವರು ಬಿಜೆಪಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೋಳ್ಳುತ್ತಿದೆ.
ಈ ಕುರಿತು ಹಲವಾರು ಬಾರಿ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಸಹ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೋಳ್ಳುತ್ತಿಲ್ಲ.
ಐಟಿ ದಾಳಿಗಳು ಹೆಚ್ಚಾಗುತ್ತಲೇ ಹೋರಟಿವೆ ಎಂದು ಐಟಿ ಇಲಾಖೆಯ ವಿರುದ್ದ ಗುಂಡೂರಾವ್ ಗರಂ ಆದರು.
ಮಂಡ್ಯ ಹಾಸನ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳ ಮೈತ್ರಿ ಅಭ್ಯರ್ಥಿಗಳು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಹಾಗೂ ಎದುರಾಳಿಗಳಿಂದ ಎಷ್ಟೇ ಯಾವುದೇ ಮೈತ್ರಿ ಪಕ್ಷಗಳ ಮೇಲೆ ಯಾವದೇ ಪರಿಣಾಮ ಬೀರಲ್ಲ.
ಬಿಜೆಪಿ ಚುನಾವಣೆಯನ್ನು ಗೆಲ್ಲಲು ಹಲವು ಕ್ಷೇತ್ರಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ವೆಚ್ಚ ಮಾಡುತ್ತಿದ್ದರು ಆದಾಯ ತೆರಿಗೆ ಇಲಾಖೆ ಸೇರಿದಂತೆ ಸಂಬಂಧಿಸಿದ ಯಾವುದೇ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೋಳ್ಳುತ್ತಿಲ್ಲ ಎಂದು ಆರೋಪಿಸಿದರು.
ದೇಶದಲ್ಲಿ ಸಧ್ಯದ ಪರಿಸ್ಥಿತಿ ನೋಡಿದರೆ ಭಯಮುಕ್ತ ಚುನಾವಣೆ ನಡೆಯುತ್ತಿಲ್ಲ ಎಂಬ ಅನುಮಾನ ಮೂಡುತ್ತಿದೆ ಈ ರೀತಿಯ ಚುನಾವಣೆ ಒಳ್ಳೇಯದಲ್ಲ ಕೆಲವೋಂದು ಮಾಧ್ಯಮಗಳು ಕೇವಲ ಮೋದಿ ಮತ್ತು ಬಿಜೆಪಿಯನ್ನು ಹೋಗಳುವಲ್ಲಿ ನಿರತವಾಗಿವೆ ಎಂದ ಗುಂಡೂರಾವ್ ಮಾಧ್ಯಮಗಳ ನಡವಳಿಕೆ ಬಗ್ಗೆ ಅಸಮಾಧಾನ ವಕ್ತಪಡಿಸಿದ ಅವರು ಇದು ಒಳ್ಳೇಯ ಬೆಳವಣಿಗೆ ಅಲ್ಲ ಎಂದರು.
ರಮೇಶ್ ಜಾರಕಿಹೋಳಿ ಅವರ ನಡೆ ಬಗ್ಗೆ ಮಾದ್ಯಮಮಿತ್ರರು ಪ್ರಶ್ನಿಸಿದಾಗ ರಮೇಶ್ ಜಾರಕಿಹೋಳಿ ನಮ್ಮ ಸಂಪರ್ಕದಲ್ಲಿ ಇಲ್ಲ ಚುನಾವಣೆಯ ಬಳಿಕ ನೋಡೋಣ ಎಂದು ಗುಂಡೂರಾವ್ ಜಾರಿಕೋಂಡರು.