ಬೆಳಗಾವಿ:ಟ್ರಾಫಿಕ್ ಸುಧಾರಣೆಗೆ ವ್ಯಾಪಕ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರು ಹಾಗೂ ಎಸ್ಪಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶ ಆರ್. ಜೆ. ಸತೀಶಸಿಂಗ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು ಬೆಳಗಾವಿಯಲ್ಲಿ ಟ್ರಾಫಿಕ್ ಅಫೇನ್ಸಸ್ ತೀರಾ ಹೆಚ್ಚಿದೆ ಎಂದು ನ್ಯಾಯಾಧೀಶರು ಅಸಮಧಾನ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದಲ್ಲಿ ಟ್ರಾಫಿಕ್ ಸೆನ್ಸ್, ಕಾನೂನುಗಳ ಪರಿಪಾಲನೆ ಇಲ್ಲ. ಸುಪ್ರೀಂಕೋರ್ಟಗೆ ನಾನೇ ವಾಗ್ದಾಣ ನೀಡಿದಂತೆ ಟ್ರಾಫಿಕ್ ಸುಧಾರಣೆ ಮಾಡುವುದು ಪೊಲೀಸರಿಗೆ ಅನಿವಾರ್ಯ. ಇಂದಿನಿಂದಲೇ ಪೊಲೀಸ್ ಕಾರ್ಯಾಚರಣೆ ನಡೆಯಲಿದೆ. ಸರಕಾರಿ ನೌಕರರ ಮೇಲೆ ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಪೊಲೀಸ್ ಆಯುಕ್ತರು, ಎಸ್ ಪಿ, ಆರ್ ಟಿಓ ಹಾಗೂ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಟ್ರಾಫಿಕ್ ಮತ್ತು ಕಾನೂನುಗಳ ಪರಿಪಾಲನೆ ಮಾಡಿಸುವ ಜವಾಬ್ದಾರಿ ಹೊಂದಿದ್ದು, ನ್ಯಾಯಾಲಯ ಅವರ ಕಾರ್ಯವೈಖರಿ ಮೇಲೆ ನೇರ ಕಣ್ಣಿಡಲಿದೆ ಎಂದರು.
ಒಂದೇ ಅರ್ಜಿ ಕೊಡಿ, ಜಜ್ ಜನತೆಗೆ ಮನವಿ:
ಬೆಳಗಾವಿ: ಸರಕಾರಿ ಅಧಿಕಾರಿಗಳು ಮತ್ತು ನೌಕರರ ಉದಾಸೀನತೆ ಹಾಗೂ ನಗರದ ಅಕ್ರಮ ವ್ಯವಹಾರಗಳ ಬಗ್ಹೆ ಸಾರ್ವಜನಿಕರು ಜಿಲ್ಲಾ ಲೀಗಲ್ ಸರ್ವೀಸ್ ಸೆಲ್ ಗೆ ಒಂದೇ ಒಂದು ಅರ್ಜಿ ಕೊಡಿ ಎಂದು ಜಜ್ ಜನತೆಗೆ ಮನವಿ ಮಾಡಿದ್ದಾರೆ.
ಅಕ್ರಮ ಕಟ್ಟಡಗಳು, ಅಕ್ರಮ ಕಾಮಗಾರಿಗಳು, ಸರಕಾರಿ ವ್ಯವಸ್ಥೆಯಿಂದ ಕರ್ತವ್ಯ ವಿಮುಖತೆ, ಸಾರ್ವಜನಿಕ ಸಮಸ್ಯೆಗಳು ಏನೆ ಇರಲಿ ಒಂದು ಅರ್ಜಿ ನ್ಯಾಯಾಲಯಕ್ಕೆ ಸಲ್ಲಿಸಿದರೆ ಸಂಬಂಧಿಸಿದ ಕಚೇರಿಗಳಿಗೆ ಸೂಕ್ತ ನಿರ್ದೇಶನ ಕೊಟ್ಡು ಕೆಲಸ ಆಗದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು
.
ವಿಸಿ ಮೂಲಕ ಬನ್ನಂಜೆ ವಿಚಾರಣೆ:
ಬೆಳಗಾವಿ:ಬನ್ನಂಜೆ ರಾಜಾ ವಿಚಾರಣೆ ವಿಡಿಯೋ ಕಾನ್ಫರನ್ಸ್ ಮೂಲಕ ಮೊದಲ ಬಾರಿಗೆ ಫೆ. ೧೦ ರಂದು ನಡೆಸಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶ ಆರ್. ಜೆ. ಸತೀಶ ಸಿಂಗ್ ತಿಳಿಸಿದ್ದಾರೆ.
ಪ್ರಕರಣಗಳ ತ್ವರಿತ ವಿಲೇವಾರಿಗೆ ಆದ್ಯತೆ ನೀಡಲಾಗಿದ್ದು, ಸಾರ್ವಜನಿಕರಿಗೆ ನ್ಯಾಯ ವಿಳಂಬವಾಗಬಾರದು ಎಂಬುವುದು ನನ್ನ ಬಯಕೆ ಎಂದರು. ತ್ವರಿತ ನ್ಯಾಯದಾನ ಮತ್ತು ಸಮಯದ ಉಳಿತಾಯಕ್ಕಾಗಿ ಜೈಲಿನಲ್ಲೇ ಅಪರಾಧಿಗಳನ್ನಿರಿಸಿ ವಿಡಿಯೋ ಕಾನ್ಫರನ್ಸ್ ಮೂಲಕ ವಿಚಾರಣೆ ನಡೆಸಲಾಗುವುದು ಎಂದರು.