ಬೆಳಗಾವಿ- ಡಿಕೆ ಶಿವಕುಮಾರ್ ಪವರ್ ಫುಲ್ ಮಂತ್ರಿ ಈ ಮಂತ್ರಿಯ ಹೆಸರಿನಲ್ಲಿ ಅಭಿಮಾನಿಗಳ ಸಂಘ ಕಟ್ಟಿಕೊಂಡ ಅವರ ಅಭಿಮಾನಿಯೊಬ್ಬ ಪವರ್ ಇಲಾಖೆಯಲ್ಲಿ ನೋಕರಿ ಕೊಡಿಸುತ್ತೇನೆ ಎಂದು ಅಮಾಯಕರಿಗೆ ಕೋಟ್ಯಾಂತರ ರೂ ಮಕ್ಮಲ್ ಟೋಪಿ ಹಾಕಿ ಈಗ ಪೋಲೀಸರ ಅತಿಥಿಯಾದ ಘಟನೆ ನಡೆದಿದೆ
ವಿವಿಐಪಿ ಗಳ ಹೆಸರು ಬಳಸಿಕೊಂಡು ಅವರೊಟ್ಟಿಗೆ ಒಂದಿಷ್ಟು ಫೊಟೊಗಳನ್ನ ತೆಗೆಸಿಕೊಂಡು ಪಂಗನಾಮ ಹಾಕಿದವರನ್ನ,ಪಂಗನಾಮ ಹಾಕುತ್ತಿರುವವರನ್ನ ನೋಡಿದ್ದೇವೆ. ಈಗ ಇಂತಹುದೇ ಸಾಲಿಗೆ ಮತ್ತೊಂದು ಘಟನೆ ಸೇರಿದೆ. ರಾಜ್ಯದ ಪ್ರಭಾವಿ ಮಂತ್ರಿಗಳೊಬ್ಬರ ಹೆಸರೇಳಿಕೊಂಡು ಕೋಟ್ಯಂತರ ರೂಪಾಯಿ ಮಕ್ಮಲ್ ಟೋಪಿ ಹಾಕಿದ ಘಟನೆ ನಡೆದಿದೆ. ಅಂದಹಾಗೇ ಆ ಪ್ರಭಾವಿ ಮಂತ್ರಿಯಾರು? ಈ ಘಟನೆ ನಡೆದ್ದಾದ್ರು ಎಲ್ಲಿ ಅಂತಿರಾ? ಹಾಗಾದ್ರೆ ಈ ಸ್ಟೋರಿ ಓದಿ
ಡಿ.ಕೆ.ಶಿವಕುಮಾರ, ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕ, ಕರ್ನಾಟಕ ಸರಕಾರದ ಇಂಧನ ಸಚಿವರು. ಹೌದು.. ಇದೇ ಪ್ರಭಾವಿ ಸಚಿವರ ಹೆಸರು ದುರ್ಬಳಕೆ ಮಾಡಿಕೊಂಡು ಕೋಟ್ಯಂತರ ರೂಪಾಯಿ ಪಂಗನಾಮ ಹಾಕಲಾಗಿದೆ. ಸಚಿವ ಡಿಕೆಶಿ ಪಕ್ಕದಲ್ಲಿ ನಿಂತು ಹಿರೋ ಹಾಗೇ ಫೋಸ್ ಕೊಟ್ಟಿರುವ ಈ ಖತರ್ನಾಕ್ ಖದೀಮನ ಹೆಸರು ಅನ್ವರ ಜಮಾದಾರ್. ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದ ಈ ವಂಚಕ ಪವರ್ ಮಿನಿಸ್ಟರ್ ಡಿಕೆಶಿ ಹೆಸರಲ್ಲಿ ಅಖಿಲ್ ಕರ್ನಾಟಕ ಡಿ.ಕೆ.ಶಿವಕುಮಾರ ಅಭಿಮಾನಿಗಳ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷನಾಗಿ ಮಾಡಬಾರದ್ದನ್ನ ಮಾಡಿದ್ದಾನೆ. ನನಗೆ ಸಚಿವ ಡಿ.ಕೆ.ಶಿ ತುಂಬಾ ಕ್ಲೋಸ್, ನಾನು ಹೇಳಿದ ಕೆಲಸ ಎಲ್ಲವನ್ನ ಅವರು ಮಾಡ್ತಾರೆ ಅಂತಾ ಬುರುಡೆ ಬಿಟ್ಟು, ಸಚಿವರ ಜೊತೆಗೆ ತೆಗೆಸಿಕೊಂಡಿದ್ದ ಒಂದಿಷ್ಟು ಫೋಟೋಗಳನ್ನ ತೋರಿಸಿ ಮೂರು ನಾಮ ಹಾಕಿದ್ದಾನೆ
ಸರಕಾರಿ ಕೆಲಸ ದೇವರ ಕೆಲಸ ಅನ್ನೋ ಮಾತಿದೆ. ಹೀಗಾಗಿಯೇ ಸರಕಾರಿ ಕೆಲಸವೆಂದ ತಕ್ಷಣ ಜನ ಮುಗಿ ಬೀಳುವುದು ಕಾಮನ್. ಹೀಗಾಗಿ ಬೆಳಗಾವಿ, ಬಾಗಲಕೋಟೆ,ವಿಜಂಯಪುರದ ನಿರುದ್ಯೋಗ ಯುವಕರನ್ನ ಟಾರ್ಗೇಟ್ ಮಾಡಿದ ಈ ಖದೀಮ ಅನ್ವರ, ಹೆಸ್ಕಾಂ ನಲ್ಲಿ ಲೈನಮೆನ್ ಸೇರಿದಂತೆ ಅನೇಕ ಹುದ್ದೆಗಳು ಖಾಲಿ ಇದ್ದು, ಸಚಿವ ಡಿ.ಕೆ.ಶಿವಕುಮಾರಗೆ ಹೇಳಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 50ಕ್ಕೂ ಹೆಚ್ಚು ಯುವಕರಿಂದ ಲಕ್ಷಾಂತರ ರೂಪಾಯಿ ಪೀಕಿದ್ದಾನೆ.
ಯಾವಾಗ ಹಣ ನೀಡಿ ತಿಂಗಳುಗಳೇ ಕಳೆದ್ರು ಕೆಲಸ ಸಿಗ್ಲಿಲ್ವೋ.. ಈತನ ಬುರುಡೆ ಮಾತಿಗೆ ಮರಳಾಗಿ ಮೋಸ ಹೋದ ಯುವಕರೆಲ್ಲ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಸಚಿವ ಡಿ.ಕೆ.ಶಿವಕುಮಾರಗೆ ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಮಸ್ಯೆ ಕೇಳಿದ ಸಚಿವರು ಅನ್ವರ ವಿರುದ್ದ ಪೋಲಿಸ್ ಠಾಣೆಗೆ ದೂರು ನೀಡುವಂತೆ ತಿಳಿಸಿ, ಆತನನ್ನ ದೂರವಿಡುವಂತೆ ತಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಸಚಿವರ ಮಾರ್ಗದರ್ಶನದಂತೆ ಹನಮಂತ ಉಗಾರೇ ಎಂಬ ಯುವಕ ರಾಮದುರ್ಗ ಪೋಲಿಸರಿಗೆ ದೂರು ನೀಡಿದ್ದ, ದೂರು ಪಡೆದಿದ್ದ ರಾಮದುರ್ಗ ಪೋಲಿಸರು ವಂಚಕ ಅನ್ವರನನ್ನ ಖೆಡ್ಡಾಗೆ ಕೆಡವಿದ್ದಾರೆ.
ಒಟ್ನಲ್ಲಿ ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗೇ ದುಡ್ಡು ಕಳ್ಕೋಂಡವರೆಲ್ಲ ಈಗ ಪೋಲಿಸ ಠಾಣೆಗೆ ಬಂದು ತಮ್ಮ ಹಣವನ್ನ ಮರಳಿ ಕೊಡಿಸುವಂತೆ ಪೋಲಿಸರ ದುಂಬಾಲು ಬಿದ್ದಿದ್ದಾರೆ. ಇನ್ನಾದರೂಜನ ಸಾರ್ವಜನಿಕರು ಇಂತಹ ಖದೀಮರಿಂದ ಎಚ್ಚರವಾಗಿರೋದು ಒಳ್ಳೇಯದು ಅನ್ನೋದೆ ನಮ್ಮ ಕಳಕಳಿ