ಬೆಳಗಾವಿ- ರಮೇಶ್ ಜಾರಕಿಹೊಳಿ ದೊಡ್ಡವರು ಅವರ ಬಗ್ಗೆ ನಾನು ಮಾತನಾಡುವದಿಲ್ಲ ಅವರು ಪ್ರಾಮಾಣಿಕರಿದ್ದು ರೈತರ ಬಿಲ್ ಕೊಡುತ್ತಾರೆ ಬೆಳಗಾವಿ ಜಿಲ್ಲಾ ಮಂತ್ರಿಗಳು ಆಗಿರುವ ಅವರು ಮುಖ್ಯಮಂತ್ರಿಗಳ ಜತೆ ಸೇರಿ ರೈತರ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುತ್ತಾರೆ ಎಂದು ಬೆಳಗಾವಿಯಲ್ಲಿ ಜಲಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಉತ್ತಮ ವಾತಾವರಣ ಇದೆ ಪಕ್ಷದ ಹೈಕಮಾಂಡ್ ನನಗೆ ಕೆಲವು ಜವಾಬ್ದಾರಿ ನೀಡಿದೆ ಕೆಲವು ರೆಬಲ್ ಸ್ಪರ್ದಿಗಳನ್ನು ಮನವೊಲಿಸಿದ್ದೇನೆ ಇಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತೆಲಂಗಾಣಕ್ಕೆ ಬರುತ್ತಿದ್ದಾರೆ ನಾನೂ ಅಲ್ಲಿಗೆ ಹೋಗುತ್ತೇನೆ ಎಂದು ಡಿಕೆಶಿ ತಿಳಿಸಿದ್ದಾರೆ
ಅಶೋಕ ಅವರ ಫೋನ್ ಕದ್ದಾಲಿಕೆ ಆರೋಪದ ಕುರಿತು ಮಾದ್ಯಮ ಮಿತ್ರರು ಪ್ರಶ್ನಿಸಿದಾಗ ಕೇಂದ್ರದಲ್ಲಿ ಅವರ ಸರ್ಕಾರವೇ ಇದೆ ತನಿಖೆ ಮಾಡಿಸಲಿ ಎಂದು ಡಿಕೆಶಿ ಆರ್ ಅಶೋಕ ಗೆ ಟಾಂಗ್ ಕೊಟ್ಟಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ