Breaking News

ಪಕ್ಷಕ್ಕೆ ಯಾರ ಬೇಕಾದ್ರೂ ಅರ್ಜಿ ಕೊಡಬಹುದು- ಡಿಕೆಶಿ

ಪಾರ್ಟಿ ಫಸ್ಟ್…ವ್ಯೆಕ್ತಿ ನೆಕ್ಷ್ಟ – ಡಿಕೆ ಶಿವಕುಮಾರ್

ಬೆಳಗಾವಿ- ಬೆಳಗಾವಿ ಲೋಕಸಭಾ ಅಭ್ಯರ್ಥಿ ವಿಚಾರ ಬಗ್ಗೆ ನನಗೇನೂ ಗೊತ್ತಿಲ್ಲ, ಫಸ್ಟ್ ಪಾರ್ಟಿ ಕಟ್ಟುವ ಕೆಲಸ, ಪಕ್ಷ ಸಂಘಟನೆ ಮಾಡಲು ಒತ್ತು ಕೊಡುವೆ, ವ್ಯಕ್ತಿ ಮೇಲೆ ನೆಕ್ಸ್ಟ್ ವಿಚಾರ, ಪಾರ್ಟಿ ಫಸ್ಟ್ ಎಂದು ಕೆಪಿಸಿಸಿ ಅದ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ರು

ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಶಿರಾ ಮತ್ತು ಆರ್.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ನಾನು ಏನೂ ತೀರ್ಮಾನ ಮಾಡಲ್ಲ, ಒಂದು ಸಮಿತಿ ಮಾಡಿದ್ದೇನೆ, ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಒಂದು‌ ಸಮಿತಿ ರಚಿಸಿದ್ದೇನೆ, ಅವರು ಎಲ್ಲರ ಜೊತೆ ಸಭೆ ಮಾಡಿ ಶಿಫಾರಸು ಮಾಡ್ತಾರೆ, ನಾನು, ನನ್ನ ಶಾಸಕಾಂಗ ಪಕ್ಷದ ನಾಯಕರು, ವಿಪಕ್ಷ ನಾಯಕರು ಕುಳಿತು ಚರ್ಚೆ ಮಾಡ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ರು

ಆರ್.ಆರ್.ನಗರ ಕ್ಷೇತ್ರದಲ್ಲಿ ದಿ.ಡಿ.ಕೆ.ರವಿ ಪತ್ನಿಗೆ ಕಾಂಗ್ರೆಸ್ ಟಿಕೆಟ್ ಕೊಡುವ ವಿಚಾರ,ದಿ.ಡಿ.ಕೆ.ರವಿ ಪತ್ನಿಗೆ ಟಿಕೆಟ್ ನೀಡಲು ಕೆಲವರು ಶಿಫಾರಸು ಮಾಡ್ತಿದಾರೆ, ಕೆಲವು ಹಿರಿಯ ನಾಯಕರು ಟಿಕೆಟ್ ನೀಡುವಂತೆ ಶಿಫಾರಸ್ಸು ಮಾಡಿದ್ದಾರೆ, ಅವರ ತಂದೆಯವರು ಏನೋ ನಮ್ಮ ಪಕ್ಷ ಬಿಟ್ಟು ಹೋಗಿದ್ರು, ಮಗಳದ್ದು ಪಾಪ ಏನಿದೆ, ಕೆಲವರು ಸಲಹೆ ಕೊಡ್ತಿದಾರೆ, ನಾನು ಇನ್ನೂ ಈ ಬಗ್ಗೆ ಚರ್ಚೆ‌ ನಡೆಸಿಲ್ಲ, ಏಳೆಂಟು ಜನ ಆಕಾಂಕ್ಷಿಗಳು ಇದಾರೆ, ಬಾಲಕೃಷ್ಣ, ಎಂ.ಶ್ರೀನಿವಾಸ ಬಾಬು ಇದಾರೆ, ನಮ್ಮ ಡಿಸಿಸಿ ಪ್ರೆಸಿಡೆಂಟ್ ಸೇರಿ ಹಲವು ಜನರು ಇದಾರೆ ಎಂದರು.

ಮುನಿರತ್ನಗೆ ಬಿಜೆಪಿ ಟಿಕೆಟ್ ನೀಡದೇ ಇದ್ರೆ ಕಾಂಗ್ರೆಸ್ ಸೇರಿಸಿಕೊಳ್ತೀರಾ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ಪಾರ್ಟಿ ಗೆ ಯಾರ ಬೇಕಾದರೂ ಅರ್ಜಿ ಕೊಡಬಹುದು ಎಂದ ಡಿಕೆಶಿ ಅರ್ಜಿ ಗಳೆಲ್ಲವೂ ಬರಲಿ ಆಮೇಲೆ ಕುಳಿತುಕೊಂಡು ಮಾತನಾಡೋಣ, ಶಿರಾ ಕ್ಷೇತ್ರದಲ್ಲಿ ಎಲ್ಲರೂ ಸೇರಿ ಒಂದು ಅಭಿಪ್ರಾಯ ಕ್ಕೆ ಬಂದಿದಾರೆ,ಅವರು ಕಳಿಸಿದ ಅಭ್ಯರ್ಥಿಯನ್ನು ದೆಹಲಿಗೆ ಶಿಫಾರಸು ಮಾಡುವೆ, ಎಂದು ಹೇಳಿದ್ರು

ಡ್ರಗ್ಸ್‌ ಜಾಲದಲ್ಲಿ ಸಿಲುಕಿಕೊಂಡ ಅನುಶ್ರೀ ಸೇರಿ ಇತರರ ಜೊತೆ ಕೆಲವು ಪ್ರಭಾವಿಗಳ ನಂಟು ವಿಚಾರ,ನನಗೆ ಆ ಬಗ್ಗೆ ಗೊತ್ತಿಲ್ಲಪ್ಪಾಣ ನಶೆ, ಪಶೆ ಎಲ್ಲಾ ಗೊತ್ತಿಲ್ಲ, ನಟಿಯರನ್ನು ಬಿಟ್ಟು ಬೇರೆ ಯಾರೂ ಡ್ರಗ್ಸ್ ತಗೊಂಡಿಲ್ವಾ?, ಇವರೇನಾ ತಗೊಂಡಿರೋದು? ಟಿವಿಯಲ್ಲಿ ಬರೀ ಎಂಟರ್ನಮೆಂಟ್ ಇಂಡಸ್ಟ್ರಿಯವರಲ್ಲಿರೋರನ್ನ ನೋಡಿ ಆಶ್ಚರ್ಯ ಆಗ್ತಿದೆ, ಎಂದರು ಡಿಕೆಶಿ

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *