ಬೆಳಗಾವಿ-ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ ಭೇಟಿ ನೀಡಿದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಡಾ. ಸಿದ್ಧರಾಮ ಸ್ವಾಮಿಗಳ ಆಶೀರ್ವಾದ ಪಡೆದುಕೊಂಡರು. ಜ್ಞಾನ ದಾಸೋಹದೊಂದಿಗೆ ಅನ್ನ ದಾಸೋಹವನ್ನೂ ಮಾಡುತ್ತಿರುವ ಮಠದ ಸೇವೆಯನ್ನು ಡಿ ಕೆ ಶಿವಕುಮಾರ್ ಮೆಚ್ಚಿಕೊಂಡರು.
ಮಠಕ್ಕೆ ಭೇಟಿ ನೀಡಿದ ನಂತರ ಶ್ರೀಗಳ ಆಶೀರ್ವಾದ ಪಡೆದ ಡಿ.ಕೆ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸ್ವಾತಂತ್ರ್ಯಾನಂತರದಿಂದ ಗಡಿ ಭಾಗದಲ್ಲಿ ಕನ್ನಡ ಹೋರಾಟವನ್ನು ಬೆಳೆಸಿದ ಕೀರ್ತಿ ಬೆಳಗಾವಿಯ ರುದ್ರಾಕ್ಷಿ ಮಠಕ್ಕೆ ಸಲ್ಲಬೇಕು. ನಾಗನೂರು ರುದ್ರಾಕ್ಷಿ ಮಠದ ದಿವಂಗತ ಶಿವಬಸವ ಸ್ವಾಮಿಗಳು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ಶ್ರಮಿಸಿದರು. ಅವರ ಶ್ರಮದಿಂದಲೇ ಸಾವಿರಾರು ಮ್ಕಕಳು ವಿದ್ಯಾವಂತರಾಗಿದ್ದಾರೆ. ಅವರದೇ ಹಾದಿಯಲ್ಲಿ ಈಗಲೂ ನಡೆಯುತ್ತಿರುವ ರುದ್ರಾಕ್ಷಿ ಮಠ ಸಮಾಜಕ್ಕೆ ಆದರ್ಶಪ್ರಾಯವಾಗಿದೆ. ಮಠದ ಸಾಮಾಜಿಕ ಹಾಗೂ ಶೈಕ್ಷಣಿಕ ಕೊಡುಗೆ ಮರೆಯಲು ಸಾಧ್ಯವಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಮಠದ ಸಾಮಾಜಿಕ ಸೇವೆ, ಶೈಕ್ಷಣಿಕ ಸೇವೆ ಹಜಾಗು ಧಾರ್ಮಿಕ ಸೇವೆಯನ್ನು ನಾನು ಎಂದಿಗೂ ಮರೆಯುವದಿಲ್ಲ ಈ ಮಠಕ್ಕೆ ಭೇಟಿ ನೀಡಬೇಕು ಶ್ರೀಗಳ ಆಶಿರ್ವಾದ ಪಡೆಯಬೇಕು ಎಮದು ಬಯಸಿದ್ದೆ ಇಂದು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದು ಪುಣೀತನಾಗಿದ್ದೇನೆ ಎಂದು ಸಚಿವ ಡಿಕೆಶಿ ಮಠದ ಸೇವೆಯನ್ನು ಕೊಂಡಾಡಿದರು
ಚನ್ನರಾಜ್ ಹಟ್ಟಹೊಳಿ ಸೇರಿದಂತೆ ಇತರ ಕಾಂಗ್ರೆಸ್ ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …