ವಾಸ್ಕೋ ಡಿಗಾಮಾ ರೈಲು
ಬೆಳಗಾವಿ-ಕರ್ನಾಟಕ ಗೋವಾ ರಾಜ್ಯಗಳ ಸಂಪರ್ಕದ ಕೊಂಡಿಯಂತಿರುವ ರಮಣೀಯ ದೂದ್ ಸಾಗರ ಜಲಪಾತದ ಸೌಂಧರ್ಯ ನೋಡಲು ಹುಬ್ಬಳ್ಳಿಯಿಂದ -ವಾಸ್ಕೋವರೆಗೆ ವಿಶೇಷ ರೈಲು ಬಿಡಲು ನೈರುತ್ಯ ರೇಲ್ವೆ ವಲಯ ನಿರ್ಧರಿಸಿದೆ.
ಜುಲೈ 16 ರಿಂದ ಹುಬ್ಬಳ್ಳಿಯಿಂದ ವಾಸ್ಕೋವರೆಗೆ ಸಂಚರಿಸಲಿರುವ ಈ ವಿಶೇಷ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರು ರೈಲಿನಲ್ಲಿ ಕುಳಿತುಕೊಂಡು ನಿಸರ್ಗದ ಸೌಂಧರ್ಯ ಸವಿಯುವ ವಿಶೇಷವಾದ ವ್ಯವಸ್ಥೆ ಈ ರೈಲಿನಲ್ಲಿದೆ.
ಪಶ್ಚಿಮ ಘಟ್ಟ ಹಾಗೂ ದೂದ್ ಸಾಗರ್ ಜಲಪಾತಗಳ ಮೂಲಕ ಹಾದು ಹೋಗುವ ರೈಲುಗಳಿಗೆ ವಿಸ್ಟಾಡೋಮ್ ಕೋಚ್ ಗಳನ್ನು ಅಳವಡಿಸಲು ನೈಋತ್ಯ ರೈಲ್ವೆ (ಎಸ್ ಡಬ್ಲ್ಯುಆರ್) ಯೋಜನೆ ರೂಪಿಸಿತ್ತು,ಈ ಯೋಜನೆ ಜುಲೈ 16 ರಿಂದ ಜಾರಿಗೆ ಬರಲಿದೆ.
ಪ್ರಯಾಣಿಕರು ದೂದ್ ಸಾಗರ್ ನಲ್ಲಿ ವಿಸ್ಟಾಡೋಮ್ ಮೂಲಕ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ದೂದ್ ಸಾಗರ್ ಕ್ಯಾಸ್ಕೇಡ್ ಮೂಲಕ ಹಾದು ಹೋಗುವ ರೈಲು ಮಾರ್ಗದಲ್ಲಿ ವಿಸ್ತಾಡೋಮ್ ಕೋಚ್ ಗಳ ಅಳವಡಿಕೆ ಈ ಪ್ರದೇಶದ ದೀರ್ಘಾವಧಿ ಬೇಡಿಕೆಯಾಗಿತ್ತು. ಪರಿಣಾಮವಾಗಿ ಈಗ ನೈಋತ್ಯ ರೈಲ್ವೆ ಇಲಾಖೆ ಈ ಮಾರ್ಗದಲ್ಲಿ ಸಂಚರಿಸುವ ರೈಲಿಗೆ ವಿಸ್ಟಾಡೋಮ್ ಕೋಚ್ ಅಳವಡಿಸಲಾಗುತ್ತಿದೆ.
ಇದು ಹುಬ್ಬಳ್ಳಿಯಿಂದ ವಾಸ್ಕೋ ನಡುವೆ ಸಂಚರಿಸಲಿದೆ.ಬೆಳಗಾವಿ ಜಿಲ್ಲೆಯಿಂದಲೂ ದೂದ್ ಸಾಗರ ನೋಡಲು ದಿನನಿತ್ಯ ಸಾವಿರಾರು ಜನ ದೂದ್ ಸಾಗರ್ ನೋಡಲು ಹೋಗುತ್ತಾರೆ,ಈ ರೀತಿಯ ವಿಶೇಷ ರೈಲು ಬೆಳಗಾಯಿಂದಲೂ ಹೊರಡುವ ವ್ಯವಸ್ಥೆ ಮಾಡುವ ಜವಾಬ್ದಾರಿ ಬೆಳಗಾವಿ ಸಂಸದರ ಮೇಲಿದೆ.