ಬೆಳಗಾವಿ- ನೀ..ನಲ್ಲ ಕರೀಮಣಿ ಮಾಲೀಕ ನೀ..ನಲ್ಲ ಎಂಬ ಉಪೇಂದ್ರ ಚಿತ್ರದ ಹಾಡು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.ಈ ಹಾಡಿಗೆ ತಕ್ಕಂತೆ ಲವ್ ಮಾಡಿರುವ ವಿವಾಹಿತ ಜೋಡಿಯೊಂದು ಹಳೆಯ ಕರಿಮಣಿ ಮಾಲೀಕರನ್ನು ಬಿಟ್ಟು ಓಡಿ ಹೋದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನಲ್ಲಿ ನಡೆದಿದೆ.
ಮದುವೆಯಾಗಿ ಅವಳಿಗೆ ಹತ್ತು ವರ್ಷ ಆಗಿತ್ತು ಆದ್ರೆ ಪಕ್ಕದ ಮನೆಯ ವಿವಾಹಿತ ಪುರುಷನ ಜೊತೆ ಲವ್ ಆಗಿತ್ತು, ಅವಳು ಗಂಡನನ್ನು ಬಿಟ್ಟು,ಅವನು ಹೆಂಡತಿಯನ್ನು ಬಿಟ್ಟು ಇಬ್ಬರು ಓಡಿ ಹೋದ ಲವರ್ ಗಳು ಮದುವೆಯಾದ ಘಟನೆ ನಡೆದಿದೆ. ಈ ಘಟನೆಯಿಂದ ಆಕ್ರೋಶಗೊಂಡ ಹಳೆಯ ಗಂಡ ಹೊಸ ಗಂಡನ ಮನೆಯನ್ನು ದ್ವಂಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಹಳೆಯ ಕರಿಮಣಿ ಮಾಲೀಕರನ್ನು ಬಿಟ್ಟು ಓಡಿ ಹೋಗಿರುವ ಈ ಜೋಡಿ,ನೀನಲ್ಲ..ನಾನಲ್ಲ….ಕರಿಮಣಿ ಮಾಲೀಕ ಯಾರಿಲ್ಲ…!! ಎಂದು ಹೊಸ ಕರಿಮಣಿ ಮಾಡಿಸಿಕೊಂಡು ಬದುಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಯಮಕನಮರಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ