ಬೆಳಗಾವಿ-ಸವದಿ ಮುಖ್ಯಮಂತ್ರಿ ಆಗ್ತಾರೆ.ಉಮೇಶ್ ಕತ್ತಿ ಮಂತ್ರಿಯಾಗ್ತಾರೆ.ಶಶಿಕಲಾ ಜೊಲ್ಲೆ ದೆಹಲಿಗೆ ಹೋಗಿದ್ದಾರೆ.ಎನ್ನುವ ಸುದ್ಧಿಗಳು ಬೆಳಗಾವಿ ಜಿಲ್ಲೆಯಲ್ಲಿ ಹರದಾಡುತ್ತಿರುವ ಬೆನ್ನಲ್ಲಿಯೇ, ಖಾನಾಪೂರ ಕ್ಷೇತ್ರದ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ತಮ್ಮ ಕ್ಷೇತ್ರದಲ್ಲಿ ಅರ್ಥಪೂರ್ಣವಾದ ಜನಜಾಗೃತಿ ಅಭಿಯಾನ ನಡೆಸಿದ್ದಾರೆ.
ಇಂದು ಸಂಜೆ ಹೊತ್ತಿಗೆ ಮನೆಯಿಂದ ವಾಕಿಂಗ್ ಗಾಗಿ ಹೊರಟ ಅಂಜಲಿತಾಯಿ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು,ಭೇಟಿಯಾಗಿ ಕೊರೋನಾ ಕುರಿತು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು,ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಕಡ್ಡಾಯವಾಗಿ ಮಾಸ್ಕ ಧರಿಸಬೇಕು.ಪದೇ ಪದೇ ಸೋಪಿನಿಂದ ಕೈ ತೊಳೆದುಕೊಳ್ಳಬೇಕು,ಮನೆಯಲ್ಲಿ ಎಲ್ಲರೂ ಬಿಸಿನೀರು ಕುಡಿಯಬೇಕು,ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಬೇಕು ಎಂದು ಅಂಜಲಿತಾಯಿ ರೈತರಲ್ಲಿ ಮನವಿ ಮಾಡಿಕೊಂಡರು.
ರುಮೇವಾಡಿ,ಅಶೋಕ ನಗರ ನೆರಸೆ,ಗ್ರಾಮಗಳ ಪ್ರದೇಶದಲ್ಲಿ ವಾಕಿಂಗ್ ಮಾಡುತ್ತ,ಪಾದಚಾರಿಗಳನ್ನು ತಡೆದು ಟಾಕಿಂಗ್ ಮಾಡುತ್ತಲೇ ಕ್ಷೇತ್ರದಲ್ಲಿ ಕೊರೋನಾ ಕುರಿತು ಜಾಗೃತಿ ಮೂಡಿಸುವ ಮೂಲಕ ಎಲ್ಲರ ಗಮನ ಸೆಳೆದರು.