ಬೆಳಗಾವಿ- ನಾಳೆ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತಿ ಉತ್ಸವ ಅವರ ಅಭಿಮಾನಿಗಳು ಬಾಬಾ ಸಾಹೇಬರನ್ನು ತಮ್ಮ ನಾಯಕ ಅಂತ ತಿಳಿದುಕೊಂಡಿಲ್ಲ ಬಾಬಾ ಸಾಹೇಬರು ತಮ್ಮ ಪಾಲಿನ ದೇವರು ಎಂದು ತಿಳಿದುಕೊಂಡಿರುವ ಅವರ ಅಭಿಮಾನಿಗಳು ವಿವಿಧ ರೂಪದಲ್ಲಿ ತಮ್ಮ ಅಭಿಮಾನವನ್ನು ವ್ಯೆಕ್ತಪಡಿಸುತ್ತಿದ್ದಾರೆ
ಬೆಳಗಾವಿಯ ಕಾಕತಿವೇಸ್ ನಲ್ಲಿರುವ ಕಿರಣ ಮೇನ್ಸ ಪಾರ್ಲರ್ ನಲ್ಲಿ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ ತಮ್ಮ ತಲೆಯಲ್ಲಿ ಡಾ ಬಾಬಾ ಸಾಹೇಬರ ಚಿತ್ರವನ್ನು ಮೂಡಿಸಿ ತಮ್ಮ ಅಭಿಮಾನವನ್ನು ಹೊರ ಹಾಕುತ್ತಿದ್ದಾರೆ
ಕಿರಣ ಮೇನ್ಸ ಪಾರ್ಲರ್ ನ ಕಿರಣ ಅವರ ಕಲೆ ನೋಡಿದರೆ ನಿಜವಾಗಿಯೂ ಮೈ ಝುಂ ಎನ್ನುತ್ತದೆ ಕಿರಣ ಅವರ ಕೈಚಳಕ ಬಾಬಾಸಾಹೇಬರ ಅಭಿಮಾನಿಗಳ ತಲೆಯಲ್ಲಿ ಮೂಡುತ್ತಿದೆ
ಗುರುವಾರ ಒಂದೇ ದಿನ ನೂರಕ್ಕೂ ಹೆಚ್ಚು ಅಭಿಮಾನಿಗಳು ತಮ್ಮ ತಲೆಯಲ್ಲಿ ಬಾಬಾ ಸಾಹೇಬರ ಚಿತ್ರವನ್ನು ಮೂಡಿಸಿಕೊಂಡಿದ್ದಾರೆ ಈ ಕುರಿತು ಬೆಳಗಾವಿ ಸುದ್ಧಿ ಜೊತೆ ಮಾತನಾಡಿದ ಕಿರಣ ಬಾಬಾ ಸಾಹೇಬರ ಚಿತ್ರ ತೆಗೆಯಲು ಹಲವಾರು ತಿಂಗಳುಗಳಿಂದ ಪ್ರ್ಯಾಕ್ಟೀಸ್ ಮಾಡಿದ್ದೇನೆ ಬಾಬಾ ಸಾಹೇಬರ ಚಿತ್ರವನ್ನು ಅತ್ಯಂತ ಅಭಿಮಾನದಿಂದ ತೆಗೆಯುತ್ತಿದ್ದೇನೆ ಬಾಬಾ ಸಾಹೇಬರ ಬಗ್ಗೆ ನನಗೆ ಶ್ರದ್ಧೆ ಮತ್ತು ಅಭಿಮಾನವಿದೆ ಅಂತಾರೆ ಕಿರಣ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ