ಇವರು ನೀಡಿದ ಚಿಕಿತ್ಸೆ ಅದ್ಭುತ , ಬೆಳಗಾವಿಯ ವ್ಯಕ್ತಿ ಇವರ ಔಷಧಿಯಿಂದ ಬದುಕಿದ್ದು ಪವಾಡ…!!

ನಾಟಿ ವೈದ್ಯ ಲೋಕೇಶ್ ಟೇಕಲ್ ಅವರು ನೀಡಿದ ಚಿಕಿತ್ಸೆ ನೋಡಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ನಾಟಿ ವೈದ್ಯ ನೀಡಿದ ಚಿಕಿತ್ಸೆಯ ಕುರಿತು ಸದನದಲ್ಲೂ ಮಾತಾಡಿದ್ದಾರೆ. ಇವರ ಚಿಕತ್ಸೆಯ ಚಮತ್ಕಾರ ನೋಡಿ ಕೇಂದ್ರ ಸರ್ಕಾರವೂ ಈ ನಾಟಿ ವೈದ್ಯರಿಂದ ಚಿಕಿತ್ಸಾ ವಿಧಾನದ ಬಗ್ಗೆ ICMR ಮೂಲಕ ವರದಿ ಪಡೆದಿದೆ. ಅನೇಕ ರೋಗಗಳಿಗೆ ಈ ನಾಟಿ ವೈದ್ಯರ ಬಳಿ ಔಷಧಿ ಇದೆ. ಇವರಿಂದ ಔಷಧಿ ಪಡೆದ ಸಾವಿರಾರು ರೋಗಿಗಳು ಗುಣಮುಖರಾಗಿದ್ದಾರೆ. ಸಾವಿನ ಅಂಚಿನಲ್ಲಿದ್ದ ಬೆಳಗಾವಿ ಜಿಲ್ಲೆಯ ವ್ಯಕ್ತಿಯೊಬ್ಬ ಇವರಿಂದ ಚಿಕಿತ್ಸೆ ಪಡೆದು ಗುಣಮುಖನಾಗಿದ್ದು ಈ ನಾಟಿ ವೈದ್ಯನ ಪವಾಡವೇ ಸರಿ

ವಿಶ್ವದಲ್ಲಿಯೇ ಭಾರತ ಆಯುರ್ವೇದದಲ್ಲಿ ಹೆಸರು ಮಾಡಿದ ದೇಶ. ಋಷಿಮುನಿಗಳ ಕಾಲದಿಂದಲೂ ಬಂದಿರುವ ಆಯುರ್ವೇದ ಪದ್ಧತಿ ಜೊತೆ ಗಿಡಮೂಲಿಕೆಯಿಂದ ತಯಾರಿಸಲಾದ ಔಷಧಿಗಳಿಂದ ವೈದ್ಯಕೀಯ ಲೋಕಕ್ಕೆ ಸವಾಲಾದ ಅದೆಷ್ಟೋ ರೋಗಗಳಿಗೆ ಚಮತ್ಕಾರಿಕ ಚಿಕಿತ್ಸೆಯಿಂದ ಲಕ್ಷಾಂತರ ಜನ ಗುಣಮುಖರಾದ ಉಧಾಹರಣೆಗಳು ಸಾಕಷ್ಟಿವೆ.

ಋಷಿಮುನಿಗಳ ಕಾಲದಿಂದಲೂ ಬಂದಿರುವ ಗಿಡಮೂಲಿಕೆಗಳನ್ನು ಬಳಸಿ ಲಕ್ಷಾಂತರ ಜನ ರೋಗಿಗಳಿಗೆ ಗದಗ ಜಿಲ್ಲೆಯ ಮುಂಡರಗಿಯಲ್ಲಿ ವಾಸವಿರುವ ನಾಟಿ ವೈಧ್ಯರನ್ನು ಇವತ್ತು ನಿಮಗೆ ಪರಿಚಯಿಸುತ್ತಿದ್ದೇವೆ.

ರಾಜ ವೈಧ್ಯ ಲೋಕೇಶ ಟೇಕಲ್, ಇವರು ವೈಧ್ಯಕೀಯ ಲೋಕಕ್ಕೆ ಸವಾಲಾದ ವಿವಿಧ ರೋಗಗಳನ್ನು ವಾಸಿ ಮಾಡಿ ಹೆಸರು ಮಾಡಿದ್ದಾರೆ. ಇವರು ತಮ್ಮ ಅಜ್ಜ ಮುತ್ತಜ್ಜರಿಂದ ಪರಂಪರಾಗತವಾಗಿ ಬಂದ ನಾಟಿ ವೈಧ್ಯಕೀಯ ಚಿಕಿತ್ಸೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಆಯುರ್ವೇದದಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ಲೋಕೇಶ್ ಟೇಕಲ್ ರ ಸಾಧನೆ ಕಂಡು ಕೇಂದ್ರದ ಆಯುಷ್ ಇಲಾಖೆ ಸಚಿವ ಪ್ರತಾಪ ಜಾದವ ಇವರನ್ನು ದೆಹಲಿಗೆ ಕರೆಸಿಕೊಂಡು ಚಿಕಿತ್ಸಾ ಪದ್ಧತಿ ಬಗ್ಗೆ ತಿಳಿದುಕೊಂಡಿದ್ದಾರೆ. ಲೋಕೇಶ್ ಟೇಕಲ್ ಅವರ ಚಿಕಿತ್ಸಾ ಪದ್ಧತಿ ಬಗ್ಗೆ ಸುಧೀರ್ಘವಾದ ವರದಿ ತಯಾರು ಮಾಡಿ ಕಳಿಸುವಂತೆ ICMR ಗೆ ಹೇಳಿದ್ದರ ಪರಿಣಾಮ, ICMR ಅಧಿಕಾರಿಗಳು ಮುಂಡರಗಿಗೆ ಬಂದು ವಿವರವಾದ ಮಾಹಿತಿ ಪಡೆದು ಕೇಂದ್ರದ ಆಯುಷ್ ಇಲಾಖೆಗೆ ವರದಿ ಕಳಿಸಿದ್ದಾರೆ.

ಮಂತ್ರ ಮಣಿಬದ್ದ ಔಷಧ ಪದ್ಧತಿಯಿಂದ ಇದುವರೆಗೆ ಲೋಕೇಶ್ ಟೇಕಲ್ ಅವರು ಸುಮಾರು 6 ಲಕ್ಷ ಜನರಿಗೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದ್ದಾರೆ. ಇತ್ತೀಚಿಗಷ್ಟೇ ಲೋಕೇಶ್ ಟೇಕಲ್ ಅವರು ಕೊಪ್ಪಳದಲ್ಲಿ ಅಗಸ್ತ್ಯ ಆಯುರ್ವೇದ ಆಸ್ಪತ್ರೆ ಆರಂಭಿಸಿ ನಾಟಿ ವೈಧ್ಯಕೀಯ ಚಿಕೆತ್ಸೆ ವಿಸ್ತರಿಸಿದ್ದಾರೆ.

ವೈಧ್ಯಕೀಯ ಲೋಕ ಬೆಚ್ಚಿ ಬಿದ್ದ ಸಮಯದಲ್ಲಿ ಬ್ಲಾಕ್ ಫಂಗಸ ರೋಗಿಗೆ ಚಿಕೆತ್ಸೆ ನೀಡಿ ಗುಣಮುಖ ಮಾಡಿದ್ದನ್ನು ಗಮನಿಸಿ, ಬೆಳಗಾವಿ ಸುವರ್ಣ ಸೌಧದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸರ್ಕಾರದ ಗಮನಕ್ಕೆ ತಂದಿದ್ದು ಇವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

ಕೊರೋನಾ ಎರಡನೇ ಅಲೆ ಜಗತ್ತನ್ನೇ ಬೆಚ್ಚು ಬೀಳುವಂತೆ ಮಾಡಿದ ಭಯಾನಕ ವೈರಸ್ ಆಗಿತ್ತು. ಕೊರೋನಾ ಹೊಡೆತಕ್ಕೆ ಅದೆಷ್ಟೋ ಲಕ್ಷ ಜನ ಸಾವಿನ ಕದ ತಟ್ಟಿದ್ದರು.

ವೈದ್ಯಕೀಯ ಲೋಕಕ್ಕೆ ಸವಾಲಾದಂತಾ ಈ ವೈರಸ್ ಕಟ್ಟಿಹಾಕಲು ವಿಶ್ವ ಆರೋಗ್ಯ ಸಂಸ್ಥೆ ಪಟ್ಟ ಹೆಣಗಾಟ ಅಷ್ಟಿಷ್ಟಲ್ಲ.

ಭಾರತಕ್ಕೆ ಭಯಾನಕ ಕೊರೋನಾ ವೈರಸ್ ಕಾಲಿಡುತ್ತಿದ್ದಂತೆ, ಕೊರೋನಾ ನಿಯಂತ್ರಣಕ್ಕೆ ಸರ್ಕಾರಗಳು ಯುದ್ದೋಪಾದಿಯಲ್ಲಿ ಕ್ರಮ ಕೈಗೊಂಡವು. ನೋಡು ನೋಡುತ್ತಿದ್ದಂತೆ ಆಸ್ಪತ್ರೆಗಳು ಭರ್ತಿಯಾದವು. ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ವೈದ್ಯರು ಹರಸಾಹಸಪಡಬೇಕಾಯಿತು.

ನಿರೀಕ್ಷಿತ ಪ್ರಮಾಣದಲ್ಲಿ ಆಕ್ಸಿಜನ್ ಸಿಗದೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ವಿದೇಶದಿಂದ ಆಕ್ಸಿಜೆನ್ ಪೂರೈಕೆ ಮಾಡಿದರು ಸಹ, ಕೊರೋನಾ ತನ್ನ ರುದ್ರತಾಂಡವ ಮುಂದುವರೆಸಿದ್ದು ತಮಗೆ ಗೊತ್ತಿದ್ದ ವಿಷಯ.

ಇದಾದ ಬಳಿಕ ಮತ್ತೊಂದು ಘನ ಘೋರ ರೋಗಕ್ಕೆ ಕೊರೋನಾ ಪೀಡಿತರು ತುತ್ತಗಬೇಕಾಯಿತು. ಅದೇ ಬ್ಲಾಕ್ ಫಂಗಸ.

ಕಪ್ಪು ಶಿಲಿಂದ್ರ ಎಂದು ಕರೆಯುವ ಬ್ಲಾಕ್ ಫಂಗಸ ವಿಶ್ವವನ್ನು ಅಲ್ಲಾಡಿಸಿತು. ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದ ಬ್ಲಾಕ್ ಫಂಗಸಗೆ ಹೇಗೆ ಚಿಕಿತ್ಸೆ ನೀಡಬೇಕು ಅನ್ನೋದರ ಕುರಿತು ವೈದ್ಯಕೀಯ ಲೋಕ ಸಂಶೋದನೆಗೆ ಇಳಿಯಿತು.

ಅಷ್ಟರಲ್ಲಿ ಕೊರೋನಾ ಪೀಡಿತರಾಗಿ ಮುಂದೆ ಬ್ಲಾಕ್ ಫಂಗಸಗೆ ಒಳಗಾದ ಬಹುತೇಕ ರೋಗಿಗಳು ಸಾವಿನ ಕದ ತಟ್ಟಬೇಕಾಯಿತು.

ಆಸ್ಪತ್ರೆಗಳಲ್ಲಿ ಬ್ಲಾಕ್ ಫಂಗಸ ಚಿಕಿತ್ಸೆಗೆಂದೆ ಪ್ರತ್ತೈಕ ವಾರ್ಡಗಳನ್ನು ತೆರೆಯಲಾಯಿತು. ಕೊರೋನಾ ಹೊಡೆತದಿಂದ ತತ್ತರಿಸಿದ್ದ ಜನ ಬ್ಲಾಕ್ ಫಂಗಸನಿಂದ ಬೆಚ್ಚಿ ಬಿದ್ದರು. ಆಲೋಪಥಿಕ ಚಿಕಿತ್ಸಾ ಪದ್ಧತಿಯಲ್ಲಿ ಚಿಕಿತ್ಸೆ ಕೊಡಲು ವಿಶ್ವ ಆರೋಗ್ಯ ಸಂಸ್ಥೆ ಕೆಲ ಔಷಧಿ ಪ್ರಚುರಪಡಿಸಿತು.

ಬ್ಲಾಕ್ ಫಂಗಸ ಗುಣಮುಖ ಮಾಡಿದ ಲೋಕೇಶ್ ಟೇಕಲ್

ಜಗತ್ತಿನಾಧ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಕೊರೋನಾ ವೈರಸಗೆ ಗಿಡಮೂಲಿಕೆ ಔಷಧಿ ಕಂಡು ಹಿಡಿದಿದ್ದ ಪ್ರಖ್ಯಾತ ನಾಟಿ ವೈದ್ಯ ಲೋಕೇಶ ಟೇಕಲ್, ಅಂದು ಉಪ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿಯವರ ಹತ್ತಿರ ತಮ್ಮ ಸಂಶೋಧನೆ ಬಗ್ಗೆ ಹೇಳಲು ಹೋಗಿದ್ದರು. ಲಕ್ಷ್ಮಣ ಸವದಿಯವರನ್ನು ಭೇಟಿ ಮಾಡಲು ಹೋಗಿದ್ದ ನಾಟಿ ವೈದ್ಯ ಲೋಕೇಶ ಟೇಕಲ್ ಅಷ್ಟೊತ್ತಿಗಾಗಲೇ ಅವರಿಗೆ ಆಂಟಿಕೊಂಡಿದ್ದ ಚರ್ಮ ಕಾಯಿಲೆಗೆ ಔಷಧಿ ನೀಡಿ ಗುಣಮುಖರನ್ನಾಗಿ ಮಾಡಿದ್ದರು.

ನಾಟಿ ವೈದ್ಯ ಲೋಕೇಶ ಟೇಕಲ್ ತಮ್ಮನ್ನು ಭೇಟಿಯಾಗುತ್ತಿದ್ದಂತೆ, ನನ್ನ ಕ್ಷೇತ್ರದ ಯುವಕನೊಬ್ಬನಿಗೆ ಬ್ಲಾಕ್ ಫಂಗಸ ಆಗಿದೆ. ನಿನ್ನಲ್ಲಿ ಚಿಕಿತ್ಸೆ ಇದ್ದರೆ ಅವನಿಗೆ ಚಿಕಿತ್ಸೆ ಕೊಡಿ ಅಂದಿದ್ದಾರೆ. ಬ್ಲಾಕ್ ಫಂಗಸ ರೋಗಿ ಆನಂದ ಕುಲಾಲಿ ಅಥಣಿಯಲ್ಲಿರುವ ಸುದ್ದಿ ಗೊತ್ತಾಗುತ್ತಿದ್ದಂತೆ ಅಲ್ಲಿಗೆ ತೆರಳಿದ ಡಾ. ಲೋಕೇಶ ಟೇಕಲ್, ಬ್ಲಾಕ್ ಫಂಗಸ ರೋಗಿಯನ್ನು ಭೇಟಿಯಾಗಿದ್ದಾರೆ. ಅವನ ಆರೋಗ್ಯ ಸ್ಥಿತಿಯನ್ನು ಗಮನಿಸಿದ ಲೋಕೇಶ ಟೇಕಲ್, ಅಂದಿನ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರಿಗೆ ದೂರವಾಣಿ ಕರೆ ಮಾಡಿ, ಇದಕ್ಕೆ ನನ್ನಲ್ಲಿ ಚಿಕಿತ್ಸೆ ಇದೆ ಎಂದು ಹೇಳಿದ್ದಾರೆ.

ಅಷ್ಟೊತ್ತಿಗಾಗಲೇ ಮಹಾರಾಷ್ಟ್ರ, ಕರ್ನಾಟಕದ ಎಲ್ಲ ಆಸ್ಪತ್ರೆಗಳಿಗೆ ಅಲೆದಾಡಿ ಬಂದಿದ್ದ ಬ್ಲಾಕ್ ಫಂಗಸ ರೋಗಿ ಆನಂದ ಕುಲಾಲಿಗೆ ಚಿಕಿತ್ಸೆ ಫಲಕಾರಿಯಾಗದೆ, ಆತ ಬದುಕುಳಿಯುವದು ಸಾಧ್ಯವಿಲ್ಲ ಎಂದು ಹೇಳಿ ಬೆಂಗಳೂರಿನ ವೈದ್ಯರು 48 ಘಂಟೆ ಸಮಯ ನೀಡಿದ್ದರು. ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ. ಕುಟುಂಬದವರು ಒಪ್ಪಿಗೆ ನೀಡಿದರೆ, ಕಣ್ಣುಗಳನ್ನು ತೆಗೆಯಬೇಕಾಗುತ್ತದೆ ಎಂದು ಹೇಳಿದ್ದರು.

ಈ ವಿಷಯವನ್ನು ಅಲ್ಲಿನ ವೈದ್ಯರು ಲಕ್ಷಣ ಸವದಿಯವರಿಗೆ ತಿಳಿಸಿದ ಪರಿಣಾಮ, ಆನಂದನ ಕುಟುಂಬದವರು, ಬೇರೆ ದಾರಿ ಕಾಣದೆ, ಮಗ ಸತ್ತರೆ ತಾಯಿಯ ಮಡಲಲ್ಲಿ ಸಾಯಲಿ ಎಂದು ಮನೆಗೆ ಕರೆತಂದು ಆಗಿತ್ತು.

ಯಾವಾಗ ಲೋಕೇಶ ಟೇಕಲ್, ಗಿಡಮೂಲಿಕೆಯ ಔಷದಿ ಆರಂಭ ಮಾಡಿದರೋ, 48 ಘಂಟೆಯಲ್ಲಿ ಸಾಯುತ್ತಾನೆ ಅಂದಿದ್ದ ಆನಂದ, ನಾಟಿ ವೈದ್ಯ ಲೋಕೇಶ ಟೇಕಲ್ ನೀಡಿದ ಚಿಕಿತ್ಸೆಗೆ 48 ಘಂಟೆಯಲ್ಲಿ ಸುಧಾರಿಸಿಕೊಳ್ಳಲು ಆರಂಬಿಸಿದ.

ಪ್ರಖ್ಯಾತ ನಾಟಿ ವೈದ್ಯ ಲೋಕೇಶ ಟೇಕಲ್ ನೀಡಿದ ಔಷಧಿ ಇಂದ ಸಂಪೂರ್ಣ ಗುಣಮುಖನಾಗಿರುವ ಆನಂದ ಈಗ ಮೊದಲಿನಂತೆ ದೈನಂದಿನ ಕೆಲಸ ಮಾಡುತ್ತಿದ್ದಾನೆ. ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದ ಬ್ಲಾಕ್ ಫಂಗಸಗೆ ಚಿಕಿತ್ಸೆ ನೀಡಿದ ಲೋಕೇಶ ಟೇಕಲ್ ಬಗ್ಗೆ ಲಕ್ಷ್ಮಣ ಸವದಿ ಆಶ್ಚರ್ಯಗೊಂಡರು.

ಆಯುರ್ವೇದದಲ್ಲಿ ಎಷ್ಟು ಶಕ್ತಿ ಇದೆ ಅನ್ನೋದು ಜಗಜ್ಜಾಹಿರವಾಗಿದೆ, ಕೂಡಲೇ ಸರ್ಕಾರ ಆಯುರ್ವೇದ ಚಿಕಿತ್ಸೆಗೆ ಸರ್ಕಾರ ಅನುಮತಿ ನೀಡಬೇಕು ಮತ್ತು ಅವರ ಅನುಭವವನ್ನು ವೈದ್ಯಕೀಯ ಇಲಾಖೆ ಪಡೆಯಬೇಕು ಎಂದು ಖುದ್ದು ಲಕ್ಷ್ಮಣ ಸವದಿಯವರು ವಿಧಾನ ಪರಿಷತನಲ್ಲಿ ಚರ್ಚೆ ಮಾಡಿದರು. ಶಿವಮೊಗ್ಗದಲ್ಲಿ ಆರಂಭಗೊಳ್ಳಲಿರುವ ಆಯುರ್ವೇದ ವಿಶ್ವ ವಿದ್ಯಾಲಯದ ವಿದೇಯಕದ ಮೇಲೆ ಮಾತನಾಡಿದ, ಲಕ್ಷ್ಮಣ ಸವದಿ ನಾಟಿ ಚಿಕಿತ್ಸೆ ಬಗ್ಗೆ ಸರ್ಕಾರದ ಗಮನ ಸೆಳೆದರು.

ಕೋಟಿ ಕೋಟಿ ಹಣ ಖರ್ಚು ಮಾಡಿದರು ಬದುಕುಳಿಯದ ಬ್ಲಾಕ್ ಫಂಗಸ ರೋಗಿಗಳಿಗೆ ನಾಟಿ ಚಿಕಿತ್ಸೆಯೆ ರಾಮ ಬಾಣ ಅನ್ನೋದನ್ನು ಸದನದ ಗಮನಕ್ಕೆ ತಂದರು. ಸಧ್ಯ ಆನಂದ ಕುಲಾಲಿ ತನ್ನ ಹೊಲದಲ್ಲಿ ಎಂದಿನಂತೆ ಕೆಲಸ ಮಾಡುತ್ತಿದ್ದು, ಕಳೆದು ಹೋಗಿದ್ದ ಕಣ್ಣಿನ ದೃಷ್ಟಿ ಮರಳಿದೆ. ರಂದ್ರ ಬಿದ್ದಿದ್ದ ಕೆನ್ನೆ ಮುಚ್ಚಿಕೊಂಡಿದೆ. ತಲೆಗೂದಲು ಮತ್ತೆ ಬಂದಿದೆ.

ಇಷ್ಟೇ ಅಲ್ಲಾ, ಮಾರಕ ರೋಗ ಕ್ಯಾನ್ಸರ್, ಚರ್ಮರೋಗ, ಕಿಡ್ನಿ ವೈಫಲ್ಯ, ಟ್ಯೂಮರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ಲೋಕೇಶ್ ಟೇಕಲ್ ಚಿಕಿತ್ಸೆ ನೀಡುತ್ತಿದ್ದಾರೆ.

ನಾಟಿ ವೈದ್ಯಕೀಯ ಚಿಕಿತ್ಸೆಯಲ್ಲಿ ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಎಲ್ಲ ರೋಗಕ್ಕೂ ಚಿಕಿತ್ಸೆ ನಾಟಿ ವೈದ್ಯ ಲೋಕೇಶ ಟೇಕಲ್ ಅವರ ಕಡೆಗೆ ಇದೆ.

ಲಕ್ಷಾಂತರ ಜೀವಕ್ಕೆ, ಲೋಕೇಶ ಟೇಕಲ್ ಸಂಜೀವಿನಿಯಾಗಬಲ್ಲರು ಅನ್ನೋದು ಸಾಬೀತಾಗಿದೆ.

ವಿಳಾಸ….

ರಾಜ ವೈಧ್ಯ, ಲೋಕೇಶ್ ಟೇಕಲ್
ಅಗಸ್ತ್ಯ ಆಯುರ್ವೇದ ಸಂಶೋದನಾ ಕೇಂದ್ರ
ಮುಂಡರಗಿ
ಗದಗ ಜಿಲ್ಲೆ /

ಅಗಸ್ತ್ಯ ಆಯುರ್ವೇದ ಆಸ್ಪತ್ರೆ ಹಾಗೂ ಮಹಾವಿದ್ಯಾಲಯ. ಕೊಪ್ಪಳ.
( ಕೊಪ್ಪಳ ಜಿಲ್ಲೆ )

Agastheya Ayurveda hospital koppal & mundargi

9481403892
9481403893
0853 9200555
6362588733

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *