ಬೆಳಗಾವಿ- ಬರೊಬ್ಬರಿ ಒಂದು ಶತಮಾನದ ಹಿಂದೆ ಸಪ್ತ ಋಷಿಗಳು ಕಂಡ ಕನಸಿಗೆ ರೆಕ್ಕೆಗಳನ್ನು ಕಟ್ಟಿ ಸಪ್ತರ್ಷಿಗಳು ಸಂಸ್ಥಾಪಿಸಿದ ಕೆಎಲ್ಇ ಸಂಸ್ಥೆಯನ್ನು ಹಳ್ಳಿಯಿಂದ ದಿಲ್ಲಿಗೆ ದಿಲ್ಲಿಯಿಂದ ದುಬಾಯಿ ವರೆಗೆ ಬೆಳೆಸಿ ಸಂಸ್ಥೆಯ ಕದಂಬ ಬಾಹುಗಳನ್ನು ಜಾಗತಿಕ ಮಟ್ಡದಲ್ಲಿ ಪಸರಿಸಿ ಕನ್ನಡ ನಾಡಿನ, ಭಾರತದದ ಕೀರ್ತಿಯನ್ನು ಬೆಳಗಿ ಕನ್ನಡ ನೆಲದ ಹಿರಿಮೆಯನ್ನು ಹೆಚ್ಚಿಸಿ ಎಲ್ಲರ ಹೃದಯ ಸಿಂಹಾಸನದಲ್ಲಿ ಅಷ್ಠ ಋಷಿಯ ಸ್ಥಾನ ಪಡೆದು ಎಲ್ಲರ ಮೆಚ್ಚುಗೆ ಪಾತ್ರರಾದ ಸಾದಕ ಡಾ ಪ್ರಭಾಕರ ಕೋರೆ ನಿಸ್ವಾರ್ಥ ಸೇವೆಯ ಶಿಖರ
ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟಿದ ಕೆಎಲ್ಇ ಸಂಸ್ಥೆಗೆ ನವ್ಹೆಂಬರ ೧೩ ಕ್ಕೆ ಬರೊಬ್ಬರಿ ನೂರು ವರ್ಷ ಶತಮಾನೋತ್ಸವ ಸಂಬ್ರಮದಲ್ಲಿರುವ ಈ ಸಂಸ್ಥೆ ಗಂಡು ಮೆಟ್ಟಿನ ನೆಲದಲ್ಲಿ ಹುಟ್ಟಿದ್ದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಹಳ್ಳಿಯ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಲ್ಲರೂ ಆರೋಗ್ಯವಂತರಾಗಬೇಕು ಎಂಬ ಕನಸಿನೊಂದಿಗೆ ಸಪ್ತರ್ಷಿಗಳು ಆರಂಭಿಸಿದ ಈ ಸಂಸ್ಥೆ ಯಶಸ್ವಿಯಾಗಿ ಸಾಧನೆಯ ಶತಮಾನ ಪೂರೈಸಿದೆ
೧೯೮೪ ರಲ್ಲಿ ಕೆಎಲ್ಇ ಸಂಸ್ಥೆ ಕೇವಲ ೩೪ ಶಾಖೆಗಳನ್ನು ಹೊಂದಿತ್ತು ಈ ಸಮಯದಲ್ಲಿ ಸಂಸ್ಥೆಯ ಸಾರಥ್ಯ ವಹಿಸಿಕೊಂಡ ಡಾ ಪ್ರಭಾಕರ ಕೋರೆ ತಮ್ಮ ನಿಸ್ವಾರ್ಥ ಮನೋಭಾವನೆಯಿಂದ ಸಂಸ್ಥೆಯ ಬೆಳವಣಿಗೆಗೆ ಹಗಲು ರಾತ್ರಿ ಶ್ರಮಿಸಿ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯುವಲ್ಲಿ ಸಫಲರಾಗಿದ್ದಾರೆ
ಪ್ರಭಾಕರ ಕೋರೆ ಕೆಎಲ್ಇ ಸಂಸ್ಥೆಯ ಕಾರ್ಯಭಾರ ನಿಭಾಯಿಸಿ ಮೂರು ದಶಕಗಳಲ್ಲಿ ಸಂಸ್ಥೆಯ ದಿಕ್ಸೂಚಿ ಬದಲಾಯಿಸಿದ್ದಾರೆ ೩೪ ಶಾಖೆಗಳಿಗೆ ಸೀಮಿತವಾಗಿದ್ದ ಸಂಸ್ಥೆಯನ್ನು ೨೫೭ ಶಾಖೆಗಳನ್ನು ರಾಷ್ಟ್ರ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ತೆರೆದು ಸಂಸ್ಥೆಯ ಸೇವಾ ವ್ಯಾಪ್ತಿಯನ್ನು ನೀರಿಕ್ಷೆಗೆ ಮೀರಿ ಬೆಳೆಸಿದ್ದಾರೆ
ಗುಣಮಟ್ಟದ ಶಿಕ್ಷಣ ಆರೋಗ್ಯ ಸೇವೆಯ ಮೂಲಕ ಜಾಗತಿಕ ಮಟ್ಟದ ಖ್ಯಾತಿ ಗಳಿಸಿರುವ ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ
ಕೆಎಲ್ಇ ಸಂಸ್ಥೆಯ ಬಗ್ಗೆ ಸಪ್ತರ್ಷಿಗಳ ಸಾಧನೆಯ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆ ಅದರಲ್ಲಿಯೂ ಸಂಸ್ಥೆಯನ್ನು ನಿಸ್ವಾರ್ಥ ಸೇವೆಯ ಮೂಲಕ ಬೆಳೆಸಿದ ಡಾ ಪ್ರಭಾಕರ ಕೋರೆ ಅವರ ಸೇವೆಯನ್ನು ನಾವು ಎಷ್ಟು ಕೊಂಡಾಡಿದರೂ ಕಡಿಮೆ
ಕೆಎಲ್ಇ ಸಂಸ್ಥೆಯ ಶತಮಾನದ ಸಾಧನೆ ಹಾಗು ಡಾ ಪ್ರಭಾಕರ ಕೋರೆಯವರು ಸಂಸ್ಥೆಯನ್ನು ಬೆಳೆಸಿದ ಚಿತ್ರಣವನ್ನು ನಿಮಗೆಲ್ಲರಿಗೂ ಪ್ರತಿ ದಿನ ಒಂದೊಂದು ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ಪ್ರಯತ್ನ ಮಾಡುತ್ತೇನೆ
ಕೆಏಲ್ಇ ಸಂಸ್ಥೆಯ ಸಾಧನೆಯ ಶತಮಾನದ ಕಥೆ ಪ್ರತಿದಿನ ಲೇಖನಮಾಲೆಯಾಗಿ ಸಪ್ತರ್ಷಿಗಳಿಗೆ ಸಮರ್ಪಿತವಾಗಲಿದೆ