ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕ ಸಂಜಯ ಪಾಟೀಲ್ ಮುಖ್ಯಮಂತ್ರಿಗಳ ಬಗ್ಗೆ ಅವರ ಧರ್ಮದ ಬಗ್ಗೆ ಅವರ ಮನೆತನದ ಬಗ್ಗೆ ಅಸಂವಿಧಾನಿಕ ಪದ ಪ್ರಯೋಗ ಮಾಡಿರುವದನ್ನು ವಿರೋಧಿದಸಿ ಕುರುಬ ಸಮಾಜದ ಮುಖಂಡರು ಶಾಸಕ ಸಂಜಯ್ ಪಾಟೀಲ್ ವಿರುದ್ಧ ಕಿಡಿಕಾರಿದರು
ರಾಜ್ಯ ಕುರುಬ ಸಂಘದ ಅಧ್ಯಕ್ಷ ಡಾ ಸಣ್ಣಕ್ಕಿ ನೇತ್ರತ್ವದಲ್ಲಿ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕುರುಬ ಸಮಾಜದ ಮುಖಂಡರು ಶಾಸಕ ಸಂಜಯ ಪಾಟೀಲ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು
ಈ ಸಂಧರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಾ ರಾಜೇಂದ್ರ ಸಣ್ಣಕ್ಕಿ ಶಾಸಕ ಸಂಜಯ ಪಾಟೀಲ್ ಮುಖ್ಯಮಂತ್ರಿಗಳ ವಿರುದ್ಧ ರಾಜಕೀಯವಾಗಿ ಟೀಕೆ ಮಾಡಲಿ ಅದಕ್ಕೆ ನಮ್ಮ ವಿರೋಧ ಇಲ್ಲ ಆದ್ರೆ ಮುಖ್ಯಮಂತ್ರಿಗಳ ಧರ್ಮದ ಬಗ್ಗೆ ಅವರ ಜಾತಿಯ ಬಗ್ಗೆ ವ್ಯೆಯಕ್ತಿಕ ವಿಚಾರಗಳ ಬಗ್ಗೆ ಅವರ ಮನೆತನದ ಬಗ್ಗೆ ಹಗುರವಾಗಿ ಮಾತಾಡಿದ್ರೆ ಕುರುಬ ಸಮಾಜ ಸಹಿಸೋದಿಲ್ಲ. ಕುರುಬರು ಶಾಂತಿ ಪ್ರೀಯರು ಆದರೆ ನಮ್ಮ ಸಮಾಜದ ಮುಖ್ಯಮಂತ್ರಿಗಳ ಬಗ್ಗೆ ಅಸಂವಿಧಾನಿಕ ಪದ ಬಳಿಸಿ ಅವಮಾನಿಸಿದರೆ ಹುಷಾರ್ ….ಕುಂತ್ರೆ ಕುರುಬ..ನಿಂತ್ರೆ ಕಿರುಬಾ ಅನ್ನೋದನ್ನು ಶಾಸಕ ಸಂಜಯ ಪಾಟೀಲ್ ತಿಳಿದುಕೊಳ್ಳಲಿ ಎಂದು ಡಾ ರಾಜೇಂದ್ರ ಸಣ್ಣಕ್ಕೆ ಶಾಸಕ ಸಂಜಯ ಪಾಟೀಲರಿಗೆ ಕಠೋರ ಎಚ್ಚರಿಕೆ ನೀಡಿದರು
ಮುಖ್ಯಮಂತ್ರಿಗಳ ಬಗ್ಗೆ ಹಗುರವಾಗಿ ಮಾತನಾಡಿದ ಶಾಸಕ ಸಂಜಯ್ ಪಾಟೀಲ್ ಬಹಿರಂಗ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಅವರ ವಿರುದ್ಧ ಇಡೀ ಕುರುಬ ಸಮಾಜ ಒಂದಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಡಾ ಸಣ್ಣಕ್ಕಿ ಎಚ್ಚರಿಕೆ ನೀಡಿದರು
ಶಾಸಕ ಸಂಜಯ ಪಾಟೀಲ್ ಅಹಿಂಸೆಯನ್ನು ಪ್ರತಿಪಾದಿಸುವ ಜೈನ ಧರ್ಮದಲ್ಲಿ ಜನಿಸಿ ರಾಜಕೀಯ ಲಾಭಗೋಸ್ಕರ ಸೋಲು ತಮ್ಮ ಬೆನ್ನು ಬಿದ್ದಿದೆ ಎಂದು ಹತಾಷರಾಗಿ ಯಾರನ್ನೋ ಓಲೈಸುವದಕ್ಕಾಗಿ ಮುಖ್ಯಮಂತ್ರಿಗಳ ಕುರಿತು ವ್ಯಯಕ್ತಿಕವಾಗಿ ಮಾತನಾಡಿ ಕುರುಬ ಸಮಾಜವನ್ನು ಅವಮಾನಿಸಿದ್ದು ಶಾಸಕರ ಬಗ್ಗೆ ಅಸಂವಿಧಾನಿಕ ಬಳಿಸಿ ಅವರನ್ನು ಟೀಕೆ ಮಾಡಬಹುದಿತ್ತು ಆದರೆ ಅದು ನಮ್ಮ ಸಂಸ್ಕೃತಿ ಅಲ್ಲ ಶಾಸಕ ಸಂಜಯ್ ಪಾಟೀಲ್ ಮಾಡಿರುವ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಅವರ ವಿರುದ್ದ ಕುರುಬ ಸಮಾಜ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತದೆ ಎಂದು ಸಣ್ಣಕ್ಕಿ ಎಚ್ಚರಿಕೆ ನೀಡಿದರು