Breaking News

ದುಡಿಯುವ ಕೈಗಳಿಗೆ ಕೆಲಸ ಕೊಡಿಸಲು ಮುಂದಾದ ಡಾಕ್ಟರ್

ಬೆಳಗಾವಿ- ವೃತ್ತಿಯಲ್ಲಿ ವೈದ್ಯರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬೆಳಗಾವಿಯ ಡಾ ರವಿ ಪಾಟೀಲ ದುಡಿಯುವ ಕೈಗಳಿಗೆ ಕೆಲಸ ಕೊಡಿಸಲು ಮುಂದಾಗಿದ್ದಾರೆ

ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಅವರು ಕಳೆದ ಒಂದು ವರ್ಷದಿಂದ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಗಮನ ಸೆಳೆಯುತ್ತಿದ್ದು ಈಗ ಬೆಳಗಾವಿಯಲ್ಲಿ ಬೃಹತ್ತ ಉದ್ಯೋಗ ಮೇಳ ಆಯೋಜನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ

:ಜಿಲ್ಲೆಯ ಯುವಕರಲ್ಲಿ ಸಾಕಷ್ಟು ವಿದ್ಯೆ ಹಾಗೂ ಕಲೆ ಇದೆ. ಆದರೆ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿರುವುದರಿಂದ ಮಾ.25 ರಂದು ನಗರದ ಚವಾಟಗಲ್ಲಿಯ ಮಾರುತಿ ಮಂಗಲ ಕಾರ್ಯಾಲಯದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ಡಾ. ರವಿ ಪಾಟೀಲ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಮಾನವ ಸಂಪನ್ಮೂಲ ಒದಗಿಸುವುದರೊಂದಿಗೆ ಉದ್ಯೋಗ ಸೃಷ್ಠಿಸುವ ನಿಟ್ಟಿನಲ್ಲಿ ನಗರದಲ್ಲಿ ಉದ್ಯೋಗಮೇಳ ಆಯೋಜಿಸಲಾಗುತ್ತಿದೆ ಎಂದರು.

ಉದ್ಯೋಗಮೇಳದಲ್ಲಿ ಬರುವ ಕಂಪನಿಗಳು ಭಾರತದ ಶ್ರೇಣಿಕೃತ ನಗರದಲ್ಲಿ ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡಲಿವೆ. ದೇಶದ ಒಟ್ಟು 50 ಕಂಪನಿಗಳಲ್ಲಿ ಜಿಲ್ಲೆಯ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುತ್ತವೆ ಎಂಬ ಭರವಸೆ ತಮಗಿದೆ. ಸಾಕಷ್ಟು ಜನ ಯುವಕರು ಈ ಮೇಳದಲ್ಲಿ ಭಾಗವಹಿಸಿ ಲಾಭಪಡೆದುಕೊಳ್ಳಬೇಕೆಂದುರು.

ಆಧುನಿಕ ತಂತ್ರಜ್ಞಾನ ಸೇರಿದಂತೆ ಬ್ಯಾಂಕಿಂಗ್, ಟೆಕ್ನಫಲಜಿ, ಐಟಿ ಫಾರ್ಮಾ,  ಇನ್ಸೂರೆನ್ಸ್, ರಿಲಾಯನ್ಸ್, ಸೊಡೆಕ್ಸೋ, ಯುರೆಕಾ ಪ್ರೋಬ್ರ್ಸ್, ಡಿ.ಎಂ.ಸಿ ಫಿನಿಶರ್, ಕೊಲ್ಲಾಪುರ, ಮೆನನ್ ಆಂಡ್ ಮೆನನ್ ಸೇರಿದಂತೆ ಒಟ್ಟು 50 ಕಂಪನಿಗಳು ಭಾಗವಹಿಸಲಿದ್ದಾವೆ ಎಂದರು.

ಉದ್ಯೋಗ ಮೇಳದಲ್ಲಿ ಯಾವುದೇ ರೀತಿಯ ಶುಲ್ಕವಿಲ್ಲ. ವಿದ್ಯಾರ್ಹತೆಗೆ ಅನುಗುಣವಾಗಿ ಈ ಮೇಳದಲ್ಲಿ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಈಗಾಗಲೇ ಕಂಪನಿಗಳೊಂದಿಗೆ ಮಾತುಕತೆಯ ಪ್ರಕಾರ ಕೌಶಲ್ಯ ಹಾಗೂ ಕೌಶಲ್ಯ ರಹಿತ ವರ್ಗಗಳಿಗೂ ಉದ್ಯೋಗವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಬಸವರಾಜ ರೊಟ್ಟಿ ಉಪಸ್ಥಿತರಿದ್ದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *