Breaking News

ಬೆಳಗಾವಿ ಪತ್ರಕರ್ತರಿಗೆ ಮಾಸ್ಕ ಹಂಚಿದ ಡಾ,ಸೋನಾಲಿ

ಬೆಳಗಾವಿ

ಕೋರೊನಾ ವೈರಸ್‌ನಿಂದಾಗಿ ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. ಅಂತಹ ಸಂದರ್ಭದಲ್ಲಿ ದೇಶ ಸೇವೆಗಾಗಿ ಕಾರ್ಯನಿರ್ವಹಿಸುತ್ತಿರುವ ಹಲವು ಕ್ಷೇತ್ರದಲ್ಲಿನ ಸಿಬ್ಬಂದಿಗಳು ತಮ್ಮ ಜೀವವನ್ನು ಲೆಕ್ಕಿಸದೇ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ನಿಯತಿ ಪೌಂಡೇಶನ ಸಂಸ್ಥಾಪಕಿ ಡಾ. ಸೋನಾಲಿ ಸರ್ನೊಬತ್ ಹೇಳಿದರು.
ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಭಾಭವನದಲ್ಲಿ ಮಂಗಳವಾರ ನಿಯತಿ ಪೌಂಡೇಶನ ಹಾಗೂ ಬೆಳಗಾವಿ ಪತ್ರಕರ್ತರ ಸಂಘ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರಿಗೆ ಮಾಸ್ಕ ವಿತರಿಸಿ ಮಾತನಾಡಿದರು. ಯಾವುದೋ ಒಂದು ದೇಶದಲ್ಲಿ ಹುಟ್ಟಿದ ಕೋರೊನಾ ವೈರಸ್ ಇಂದು ಇಡೀ ಜಗತ್ತಿನ ನಿದ್ದೆಗೆಡಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಮಾಹಾಮಾರಿ ಕೋರೊನಾ ಅಸುನಿಗೀದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಸೊಂಕಿತರಾಗಿ ನರಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವೈದ್ಯರು, ಪೊಲೀಸ್, ಸೇನೆ ಹಾಗೂ ಪತ್ರಕರ್ತರು ತಮ್ಮ ಜೀವವನ್ನು ಲೆಕ್ಕಿಸದೇ ಸದಾಕಾಲ ಕಾರ್ಯ ಮಾಡುತ್ತಿರುವುದು ನಮ್ಮ ಜವಾಬ್ದಾರಿ ಜತೆಗೆ ದೇಶ ಪ್ರೇಮವನ್ನು ಎತ್ತಿ ತೋರಿಸುತ್ತದೆ. ಪತ್ರಕರ್ತರು ಕಾರ್ಯ ಸಾರ್ವಜನಿಕ ಸಂಪರ್ಕದಲ್ಲಿರುವುದರಿಂದ ಕೋರೊನಾ ವೈರಸ್‌ನಿಂದ ರಕ್ಷಣೆ ಪಡೆದುಕೊಳ್ಳಬೇಕಿರುವುದರಿಂದ ಮಾಸ್ಕ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಳಗಾವಿ ಪತ್ರಕರ್ತ ಸಂಘದ ಕಾರ್ಯಾಧ್ಯಕ್ಷರಾದ ಕುಂತಿನಾಥ ಕಲಮನಿ ಹಾಗೂ ಮಲ್ಲಿಕಾರ್ಜುನ ಮುಗಳಿ ಮಾತನಾಡಿ, ವಿಶ್ವದಾದ್ಯಂತ ಕೋರೊನಾ ವೈರಸ್ ಹರುಡವಿಕೆಯಿಂದಾಗಿ ಸಾವು, ನೋವುಗಾಳಿವೆ. ಈ ಕೋರೊನಾ ವೈರಸ್ ನಿಯಂತ್ರಣಕ್ಕಾಗಿ ಆರೋಗ್ಯ, ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರದ ಇನ್ನೀತರ ಇಲಾಖೆಗಳ ಜತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಮಾಧ್ಯಮ ಕ್ಷೇತ್ರವನ್ನು ಅಗತ್ಯವಸ್ತುಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ, ವಿವಿಧ ಇಲಾಖೆಯ ಜತೆಗೆ ಪತ್ರಕರ್ತರು ಜನರಿಗೆ ಸುದ್ದಿ ಮುಟ್ಟಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಸುದ್ದಿ ಪಡೆದುಕೊಳ್ಳುವ ಸಂದರ್ಭದಲ್ಲಿ ವರದಿಗಾರರು ಅಥವಾ ಕ್ಯಾಮೆರಾಮೆನ್‌ಗಳು ರೋಗಿ , ರೋಗಿಗಳ ಸಂಬಂಧಿಕರೊಂದಿಗೆ ಆಕಸ್ಮಿಕ ಸಂಪರ್ಕ ಹೊಂದುವ ಸಂದರ್ಭದಲ್ಲಿ ಅಪಾಯ ಎದುರಿಸುತ್ತಿದ್ದಾರೆ. ನಿಯತಿ ಪೌಂಡೇಶನ ಸಂಸ್ಥಾಪಕಿ ಡಾ. ಸೋನಾಲಿ ಸರ್ನೊಬತ್ ಅವರು ಪತ್ರಕರ್ತರ ನೆರವಿಗೆ ಬಂದಿರುವುದು ಶ್ಲಾಘನಿಯ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಶೈಲ ಮಠದ ವಹಿಸಿದ್ದರು. ಕೋಶ್ಯಾಧ್ಯಕ್ಷ ರಾಯಣ್ಣ.ಆರ್.ಸಿ., ಕಾರ್ಯದರ್ಶಿ ಸುರೇಶ ನೇರ್ಲಿ, ಜಂಟಿ ಕಾರ್ಯದರ್ಶಿಗಳಾದ ಸುನೀಲ ಪಾಟೀಲ, ಜಗದೀಶ ವಿರಕ್ತಮಠ, ರಾಜಶೇಖರಯ್ಯ ಹಿರೇಮಠ, ಕೀರ್ತಿ ಕಾಸರಗೂಡು, ಸುನಿತಾ ದೇಸಾಯಿ, ನಾಗರಾಜ್ ಎಚ್.ವಿ., ಸುಬಾನಿ ಮುಲ್ಲಾ, ಗಜು ಮುಚ್ಚಂಡಿಕರ, ವಿಜಯ ಮೊಹಿತೆ, ವಿಶ್ವನಾಥ ದೇಸಾಯಿ, ಬೈರುಬಾ ಕಾಂಬಳೆ, ಆಶಿಶ್, ಪಾರೇಶ ಬೊಸಲೆ, ಅಶೋಕ ಮಗದುಮ್ಮ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *