ಬೆಳಗಾವಿ- ಬೆಳಗಾವಿ ನಗರದ ಶಹಾಪೂರ ಪ್ರದೇಶದಲ್ಲಿರುವ ಸರಾಫ ಗಲ್ಲಿಯ ದಾನೇಶ್ವರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ದಾಖಲಾಗಿದ್ದ ತಾಯಿ ಮತ್ತು ಮಗು ಸಾವನೊಪ್ಪಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ
ಬಸ್ತವಾಡ ಗ್ರಾಮದ ಮಾಲಾಶ್ರೀ ಶೀತಲ ಸಂಕೇಶ್ವರಿ ಎಂಬ ಇಪ್ಪತ್ತು ವರ್ಷ ವಯಸ್ಸಿನ ಮಹಿಳೆ ಡಾ ಉಮದಿ ಅವರ ದಾನೇಶ್ವರಿ ಆಸ್ಪತ್ರೆಗೆ ದಾಖಲಾಗಿದ್ದಳು ಈ ಮಹಿಳೆ ಇಂದು ಬೆಳಗಿನವರೆಗೆ ಆರೋಗ್ಯವಾಗಿದ್ದಳು ಆದರೆ ಮಧ್ಯಾಹ್ನ ಹೆರಿಗೆ ಸಮಯದಲ್ಲಿ ತಾಯಿ ಮತ್ತು ಮಗು ಇಬ್ಬರೂ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದರು ಎನ್ನುವದು ಮೃತ ಮಹಿಳೆಯ ಸಮಂಧಿಕರು ಆರೋಪಿಸಿದ್ದಾರೆ
ತಾಯಿ ಮತ್ತು ಮಗುವಿನ ಸಾವಿಗೆ ಕಾರಣವಾಗಿರುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಸ್ಪತ್ರೆಯಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ ಶಹಾಪೂರ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ