ಬೆಳಗಾವಿ- ಬೆಳಗಾವಿಯ ಟಿಳಕವಾಡಿ ಪ್ರದೇಶದ ಮೂರನೇಯ ಗೇಟ್ ಬಳಿಯ ಬಾರ್ ಒಂದರಲ್ಲಿ ಎರಡು ಯುವಕರ ಗುಂಪುಗಳ ನಡುವೆ ಘರ್ಷಣೆಯಾಗಿ ಮೂವರು ಜನ ಯುವಕರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ
ಭಾನುವಾರ ಮದ್ಯಾಹ್ನ ಬಾರ್ ನಲ್ಲಿ ಯುವಕರ ನಡುವೆ ಯಾವುದೋ ಒಂದು ವಿಷಯಕ್ಕೆ ಸಮಂಧಿಸಿದಂತೆ ವಾಗ್ವಾದ ನಡೆದಿದೆ ನಂತರ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಘರ್ಷಣೆಯಾಗಿದೆ ಒಂದು ಯುವಕರ ಗುಂಪು ಇನ್ನೊಂದು ಗುಂಪಿನ ಮೇಲೆ ಹಲ್ಲೆ ಮಾಡಿದೆ
ಬಾರ್ ನಲ್ಲಿ ಆರಂಭವಾದ ಜಗಳ ನಂತರ ಬೀದಿಗೆ ಬಂದು ಎರಡು ಗುಂಪುಗಳು ನಡು ರಸ್ತೆಯಲ್ಲಿ ಹೊಡೆದಾಟ ನಡೆಸಿದ್ದರಿಂದ ಸುಮಾರು ಒಂದು ಘಂಟೆಕಾಲ ಈ ಪ್ರದೇಶದಲ್ಲಿ ತ್ವೇಶಮಯ ವಾತಾವರಣ ನಿರ್ಮಾಣವಾಗಿತ್ತು ಇಲ್ಲಿಯ ವ್ಯಾಪಾರಿಗಳು ಆತಂಕಕ್ಕೊಳಗಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದರು
ಈ ಘರ್ಷಣೆಯಲ್ಲಿ ಅವಿನಾಶ ಕಿತ್ತೂರ,ಪ್ರಮೋದ ಸುತಾರ ಮತ್ತು ವಿನೋದ ಎಂಬಾತರು ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಉದ್ಯಮಬಾಗ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ
ಒಂದುವರೆ ಘಂಟೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳು ಮೂರು ಘಂಟೆಗೆ ಡಿಸ್ಚಾರ್ಜ ಆಗಿದ್ದಾರೆ ಫೈಟ್ ಮುಗಿದ ಬಳಿಕ ಸುಸ್ತಾಗಿ ಗಾಯಾಳುಗಳು ಬಾರ್ ಎದುರು ಮಲಗಿರುವ ದೃಶ್ಗಳನ್ನು ಚಿತ್ರದಲ್ಲಿ ಕಾಣಬಹುದು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ