ಬೆಳಗಾವಿ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಸೋಮವಾರ ಬೆಳಗಾವಿಯಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆ ಅದ್ದೂರಿಯಾಗಿ ನಡೆಯಲಿದೆ.
ಈದ್ ಮಿಲಾದ್ ಹಿನ್ನೆಲೆಯಲ್ಲಿ ಪೊಲೀಸ್ ಹೆಡ್ ಕ್ವಾರ್ಟರ್ಸ್, ಆಝಮ್ ನಗರ, ವೀರಭದ್ರ ನಗರ, ಶಾಹೂ ನಗರ, ಗಾಂಧಿ ನಗರ ಮತ್ತಿತರ ಕಡೆಗಳಲ್ಲಿ ರಸ್ತೆಯೀಡಿ ದೀಪಾಲಂಕಾರ ಮಾಡಲಾಗಿದೆ. ರಸ್ತೆಬದಿ ತಿರುವಿಗಳಲ್ಲಿ, ವೃತ್ತಗಳಲ್ಲಿ ಮೆಕ್ಕಾ ಮತ್ತು ಮದೀನಾ ಕಲಾಕೃತಿಗಳನ್ನು ರಚಿಸಲಾಗಿದೆ. ಪ್ರಾರ್ಥನಾ ಮಂದಿರಗಳು, ಮುಸ್ಲಿಂ ಬಾಂಧವರ ಅಂಗಡಿ- ಮುಂಗಟ್ಟುಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿವೆ. ಭಾನುವಾರ ಸಂಜೆಯಾಗುತ್ತಿದ್ದಂತೇ, ನಗರದ ಬಹುತೇಕ ಬೀದಿಗಳಲ್ಲಿ ಕವ್ವಾಲಿಗಳು ಅನುರಣಿಸುತ್ತಿವೆ. ಮುಸ್ಲಿಂರಷ್ಟೇ ಅಲ್ಲದೇ, ಹಿಂದೂ ಧರ್ಮೀಯರು ಈದ್ ಮಿಲಾದ್ ಸಂಭ್ರಮ ಕಣ್ತುಂಬಿಕೊಳ್ಳಲು ಆಗಮಿಸುತ್ತಿರುವುದು ವಿಶೇಷವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ