ಬೆಳಗಾವಿ-
ಸಿಎಂ ಸಿದ್ದರಾಮಯ್ಯ ಗೆ ಮಾಜಿ ಸಿಎಂ ಕುಮಾರಸ್ವಾಮಿ ಬೆಳಗಾವಿಯಲ್ಲಿ ಸಖತ್ ತಿರುಗೇಟು ನೀಡಿದ್ದಾರೆ
ಸಿಎಂ ಸಿದ್ದರಾಮಯ್ಯ ಪ್ರತಿಯೊಂದು ಕಾರ್ಯಕ್ರಮದಲ್ಲಿ ಅವರಪ್ಪನ ಮೇಲೆ ಆಣೆ ಅವರು ಸರ್ಕಾರ ರಚಿಸಲ್ಲ ಅಂತ ಹೇಳ್ತಾರೆ. ನಮ್ಮಪ್ಪಂದಿರೇನು ಇವರಿಗೆ ಬಿಟ್ಟಿ ಸಿಕ್ಕಿದ್ದಾರಾ.. ಬೇಕಾದ್ರೆ ಸಿಎಂ ಅವರಪ್ಪನ ಮೇಲೆ ಆಣೆ ಹಾಕೊಳ್ಳಿ.ಎಂದು ಕುಮಾರಸ್ವಾಮಿ ಸಿಎಂ ಸಿದ್ರಾಮಯ್ಯ ನವರಿಗೆ ತಿರಗೇಟು ನೀಡಿದ್ದಾರೆ
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ
ಮುಖ್ಯಮಂತ್ರಿ ಸ್ಥಾನದ ಘನತೆ ಗೌರವ ಕಡೆಮೆ ಮಾಡಬೇಡಿ.
ಸಿದ್ರಾಮಯ್ಯನವರೇ ನಿವ್ ಯಾವ ಯಾವ ಟೈಮಲ್ಲಿ ಯಾರ್ಯಾರ ಕಾಲ್ ಹಿಡಿದ್ರಿ ಅನ್ನೊದು ನಂಗೆ ಗೊತ್ತಿದೆ.
ಜೆಡಿಎಸ್ ಪಕ್ಷದಲ್ಲಿ ಡಿಸಿಎಂ ಆಗಿ ಕೆಲಸ ಮಾಡಿದ್ದಿರಿ, ಆವಾಗ ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಅಂತ ಗೊತ್ತಿರಲಿಲ್ವಾ. ಬಹಳ ಹಗುರವಾಗಿ ಮಾತನಾಡಬೇಡಿ ಎಂದು ಸಿಎಂ ಗೆ ಹೆಚ್ಡಿಕೆ ಚಾಟಿ ಬೀಸಿದ್ದಾರೆ
ಸಿದ್ರಾಮಯ್ಯ ಯಾರು ಅನ್ನೋದು ಈ ರಾಜ್ಯದ ಜನರಿಗೆ ಗೊತ್ತಾಗಿದ್ದು ಜೆಡಿಎಸ್ ಪಕ್ಷದಿಂದ ಈಗ ಜೆಡಿಎಸ್ ಪಕ್ಷ ಅಪ್ಪ ಮಕ್ಕಳ ಪಕ್ಷ ಎಂದು ಹೇಳುತ್ತಿರುವ ಸಿದ್ರಾಮಯ್ಯ ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ ಇಲ್ಲ ಅಂದ್ರೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ
ಕರಾವಳಿಯಲ್ಲಿ ನಡೆಯುತ್ತಿರುವ ಕೋಮು ಗಲಭೆಯ ವಿಚಾರದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿವೆ ಗಲಭೆ ಗಳನ್ನು ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ದೀಪಕ ಎಂಬ ಯುವಕನನ್ನು ಕೊಲೆ ಮಾಡಿದ ಆರೋಪಿಗಳ ಬಂಧನ ವಾಗಿ ನಾಲ್ಕು ದಿನ ಕಳೆದಿವೆ ಕೊಲೆಗೆ ಕಾರಣ ಏನು ಎಂಬುದನ್ನು ಪತ್ತೆ ಮಾಡಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದು ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು
ಸರ್ಕಾರ ರಾಜ್ಯದ ಜನರಿಗೆ ಅನ್ನಭಾಗ್ಯ ನೀಡಿ ಮದ್ಯದ ದರ ಹೆಚ್ಚಿಸಿ ಬಡವರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು
ಮುಂಬರುವ ಚುನಾವಣೆಯಲ್ಲಾಗಲಿ ಅಥವಾ ಚುನಾವಣೆ ನಡೆದು ಅತಂತ್ರ ಪರಿಸ್ಥಿತಿ ನಿರ್ಮಾಣವಾದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಕೈ ಜೋಡಿಸುವ ದಿಲ್ಲ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇನೆ 113 ಸೀಟುಗಳನ್ನು ಗೆಲ್ಲಿಸುವ ಗುರಿ ಇಟ್ಟು ಪಕ್ಷದ ಸಂಘಟನೆ ಮಾಡುತ್ತಿದ್ದೇನೆ ಪ್ರಭಾವಿ ಹಾಗು ದೊಡ್ಡ ದೊಡ್ಡ ನಾಯಕರ ಮನೆ ಬಾಗಿಲು ಕಾಯದೇ ಕೆಳಹಂತದ ನಾಯಕರನ್ನು ಗುರುತಿಸಿ ಅವರಿಗೆ ಟಿಕೆಟ್ ಕೊಡುವ ನಿರ್ಧಾರ ಮಾಡಿದ್ದೇನೆ ಉತ್ತರ ಕರ್ನಾಟಕದಿಂದ ಕನಿಷ್ಠ 45 ಸೀಟು ಗೆಲ್ಲುವ ವಿಶ್ವಾಸವಿದೆ ಎಂದು ಕುಮಾರಸ್ವಾಮಿ ಹೇಳಿದರು
ಸತೀಶ ಜಾರಕಿಹೊಳಿ ರಾಯಚೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು ಆದರೆ ಪಕ್ಷ ಸೇರ್ಪಡೆಯಾಗುವ ಯಾವುದೇ ಚರ್ಚೆ ನಡೆದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಠಪಡಿಸಿದರು