ಮಾಜಿ ಸಚಿವ ಮಲ್ಹರಗೌಡ ಪಾಟೀಲ ಇನ್ನಿಲ್ಲ
ಬೆಳಗಾವಿ- ಮಾಜಿ ಸಚಿವ ಮಲ್ಹರಗೌಡ ಪಾಟೀಲ ಇಂದು ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ
ಇಂದು ರಾತ್ರಿ ಮಾಜಿ ಸಚಿವ ಮಲ್ಹರಗೌಡ ಪಾಟೀಲರನ್ನು ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು ತೀವ್ರ ಹೃದಯಾಘಾತದಿಂದ 9-45 ರ ಸುಮಾರಿಗೆ ಮಾಜಿ ಸಚಿವರು ನಿಧನರಾಗಿದ್ದಾರೆ
ಎಸ್ ಬಂಗಾರಪ್ಪ ಅವರ ಸಚಿವ ಸಂಪುಟದಲ್ಲಿ ನೀರಾವರಿ ಮಂತ್ರಿಯಾಗಿದ್ದ ಮಲ್ಹರಗೌಡ ಪಾಟೀಲ ಬೆಳಗಾವಿ ಜಿಲ್ಲೆಯ ಹಿರಿಯ ರಾಜಕಾರಣಿ ಆಗಿದ್ದರು
ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 12 ಘಂಟೆಗೆ ಸಂಕೇಶ್ವರದ ರುದ್ರಭೂಮಿಯಲ್ಲಿ ನಡೆಯಲಿದೆ.
.೧೯೪೦ರ ನವ್ಹೆಂಬರ ದಿ ೨೧ರಂದು ಸಂಕೇಶ್ವರದ ಖ್ಯಾತ ಖಾತೇದಾರ ಪಾಟೀಲ ಮನೆತನದಲ್ಲಿ ಜನಿಸಿದ್ದು, ಅವರು ಸಂಕೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿ,ಎ.ಪಿ.ಎಂ.ಸಿ ಅಧ್ಯಕ್ಷರಾಗಿ ರಾಜಕೀಯ ಮೆಟ್ಟಲೇರಿದ ಅವರು ೧೯೭೮ರಲ್ಲಿ ಮೊದಲ ಸಲ ಸಂಕೇಶ್ವರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಸಲ ವಿಧಾನಸಭೆಗೆ ಆಯ್ಕೆಯಾದರು..೧೯೮೩ರಲ್ಲಿ ಎರಡನೇ ಸಲ,೧೯೮೫ರಲ್ಲಿ ಮೂರನೇಯ ಸಲ,ಹಾಗೂ ೧೯೮೯ರಲ್ಲಿ೪ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ೧೯೮೯ರಲ್ಲಿ ಬಂಗಾರಪ್ಪ ಸಚಿವ ಸಂಪುಟದಲ್ಲಿ ನೀರಾವರಿ ಸಚಿವರಾಗಿದ್ದರು.ಮೌಲ್ಯಯುತ ರಾಜಕಾರಣಕ್ಕೆ ಹೆಸರಾಗಿದ್ದ ಮಲ್ಹಾರಿಗೌಡ ಪಾಟೀಲ ಅವರು ಹುಕ್ಕೇರಿ ತಾಲೂಕಿನ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಶ್ರಮಿಸಿ ಅದರ ಯಶಸ್ವಿಗಾಗಿ ಈಗ ಕಾರ್ಯರತರಾಗಿದ್ದರು.ತಮ್ಮ ಪುತ್ರ ದಿ.ಸಂಜಯ ಪಾಟೀಲ ಹೆಸರಿನಲ್ಲಿ ವೈದ್ಯಕೀಯ ಕಾಲೇಜು,ಇತರ ಶಿಕ್ಷಣ ಕೇಂದ್ರಗಳನ್ನು ಪ್ರಾರಂಭಿಸಿದ್ದ ಅವರು ಶಿಕ್ಷಣ ರಂಗಕ್ಕೂ ಸೇವೆ ಸಲ್ಲಿಸಿದ್ದರು.