ಬೆಳಗಾವಿ-ಮಾಜಿ ಶಾಸಕ ಅಭಯ ಪಾಟೀಲ ಅವರು ಏಳನೇಯ ಬಾರಿಗೆ ನಗರದ ಶಾಲಾ ವಿಧ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದ್ದರು
ನಗರದ ವ್ಯಾಕ್ಸೀನ್ ಡಿಪೋದಲ್ಲಿ ನಡೆದ ಸ್ಪರ್ಧೆಠಿಠಿಯಲ್ಲಿ ಬೆಳಗಾವಿ ನಗರದ ಕನ್ನಡ,ಮರಾಠಿ,ಇಂಗ್ಲೀಷ್ ಹಾಗು ಉರ್ದು ಮಾದ್ಯಮಗಳ ಶಾಲೆಯ ಹತ್ತು ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಪಾಲ್ಗೊಂಡಿದ್ದಾರೆ
ಮಾಜಿ ಶಾಸಕ ಅಭಯ ಪಾಟೀಲರು ಆಯೋಜಿಸುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಶಾಲಾ ವಿಧ್ಯಾರ್ಥಿಗಳಿಗೆ ಉಚಿತವಾಗಿ ಚಿತ್ರ ಕಲೆಗೆ ಬೇಕಾಗುವ ಎಲ್ಲ ಸಾಮುಗ್ರಿಗಳನ್ನು ವಿತರಿಸಲಾಗುತ್ತದೆ
ಸ್ಪರ್ಧೆಯಲ್ಲಿ ಸಾಧನೆಗೈದ ಹನ್ನೆರಡು ಜನ ವಿಧ್ಯಾರ್ಥಿಗಳಿಗೆ ಸೈಕಲ್ ಇಪ್ಪತ್ತೈದು ಜನರಿಗೆ ಗಡಿಯಾರ ಹಾಗು ನೂರಾ ಐವತ್ರು ಜನರಿಗೆ ಪ್ರೋತ್ಸಾಹ ಬಹುಮಾನ ನೀಡಲಾಗುತ್ತಿದೆ
ಅದಲ್ಲದೆ ಹನ್ನೆರಡು ಅತ್ತ್ಯುತ್ತಮ ಚಿತ್ರ ಕಲೆಗಳನ್ನು ಆಯ್ಕೆ ಮಾಡಿ ಕ್ಯಾಲೆಂಡರಗಳನ್ನು ತಯಾರಿಸಿ ಹಂಚಲಾಗುತ್ತದೆ
ಇಂದು ವ್ಯಾಕ್ಸೀನ್ ಡಿಪೋದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಶ್ವೀನಿ ಸರನೋಬತ್ತ್ ಕಲ್ಪನಾ ಕುಲಕರ್ಣಿ ಸುಜಾತಾ ಚವ್ಹಾಣ ಧನರಾಜ ಗವಳಿ ಅಶೋಕ ನಾಯಿಕ ಸಂಜಯ ಸವ್ವಾಸೇರಿ ಅವರು ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ಮಾತನಾಡಿದ ಅಭಯ ಪಾಟೀಲ ಏಳನೇಯ ವರ್ಷದ ಚಿತ್ರ ಕಲಾ ಸ್ಪರ್ಧೆಗೆ ಸಾವಿರಾರು ವಿಧ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ವರ್ಷ ಕಳೆದಂತೆ ವಿಧ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ರಿದೆ ಎಂದರು
ನಗರದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಯುವಕರಿಗೆ ಕೆಸರಿನ ಗೆದ್ದೆ ಓಟ,ಜೊತೆಗೆ ಪತಂಗ ಉತ್ಸವ ವುಮನ್ ಫೆಸ್ಟಿವಲ್ ಸೇರಿದಂತೆ ಹಲವಾರು ನಿಗದಿತ ಕಾರ್ಯಕ್ರಮಗಳನ್ನ ನಡೆಸುತ್ತ ಬಂದಿದ್ದೇನೆ ಅಧಿಕಾರ ಇರಲಿ ಬಿಡಲಿ ಈ ಕಾರ್ಯಕ್ರಮಗಳು ನಿಲ್ಲುವದಿಲ್ಲ ಎಂದು ಅಭಯ ಪಾಟೀಲ ಹೇಳಿದರು