ಪಂಡಿತ ದೀನ ದಯಾಳರ ಜಯಂತಿ..ಸರ್ಕಾರಿ ಶಾಲೆಗೆ ಬಣ್ಣದ ಕಾಂತಿ…!

ದೀನ ದಯಾಳರ ಜಯಂತಿ …ಸರ್ಕಾರಿ ಶಾಲೆಗೆ ಸಂಕ್ರಾಂತಿ….!!!

ಬೆಳಗಾವಿ- ಮಾಜಿ ಶಾಸಕ ಅಭಯ ಪಾಟೀಲ ಅವರು ಯಾವುದೇ ಒಂದು ಕಾರ್ಯ ಮಾಡಿದರೆ ಅದಕ್ಕೊಂದು ಅರ್ಥ ಇದ್ದೇ ಇರುತ್ತದೆ
ಬಿಜೆಪಿ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪಂಡಿತ ದೀನ ದಯಾಳ ಉಪಾದ್ಯಾಯ ಅವರ ಶತ ಜಯಂತಿ ಉತ್ಸವದ ಅಂಗವಾಗಿ ಮಹಾ ಜನಸಂಪರ್ಕ ಅಭಿಯಾನ ನಡೆಸಿದೆ ಮಾಜಿ ಶಾಸಕ ಅಭಯ ಪಾಟೀಲ ಅವರ ನೇತ್ರತ್ವದಲ್ಲಿ ರಾಯಬಾಗ ತಾಲ್ಲೂಕಿನಲ್ಲಿ ಬಿಜೆಪಿಯ ಮಹಾ ಜನಸಂಪರ್ಕ ಅಭಿಯಾನ ನಡೆಯುತ್ತಿದೆ ಅಭಯ ಪಾಟೀಲ ರಾಯಬಾಗದಲ್ಲಿ ಕಾಟಾಚಾರದ ಜಯಂತಿ ಮಾಡದೇ ನೆಪ ಮಾತ್ರಕ್ಕೆ ಅಭಿಯಾನ ನಡೆಸದೇ ಎಲ್ಲರಿಗೂ ಮಾದರಿಯಾದ ಅರ್ಥಪೂರ್ಣವಾದ ಸಾಮಾಜಿಕ ಕಾರ್ಯ ಮಾಡುವದರ ಮೂಲಕ ರಾಯಬಾಗ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
ಅಭಿಯಾನ ಮತ್ತು ಪಂಡಿತ ಉಪಾದ್ಯಾಯರ ಶತ ಜಯಂತಿ ಉತ್ಸವದ ಅಂಗವಾಗಿ ಅಭಿಯಾನ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರ ತಂಡ ರಾಯಬಾಗದ ಕುಂಚಕರವಾಡಿಯ ಸರ್ಕಾರಿ ಶಾಲೆಗೆ ಬಣ್ಣ ಹಚ್ಚಿ ಅಭಿಯಾನವನ್ನು ಅರ್ಥಪೂರ್ಣ ಗೊಳಿಸಿದ್ದಾರೆ
ಬೆಳಗಾವಿ ನಗರದಲ್ಲಿ ತಪ್ಪದೇ ಪ್ರತಿ ಭಾನುವಾರ ಸ್ವಚ್ಛತಾ ಅಭಿಯಾನ ಮಾಡುತ್ತಿರುವ ಮಾಜಿ ಶಾಸಕ ಅಭಯ ಪಾಟೀಲರ ಸಾಮಾಜಿಕ ಸೇವೆ ಮಾಡುವ ಸ್ಟೈಲ್ ವಿಭಿನ್ನ ಮತ್ತು ಅರ್ಥಪೂರ್ಣ ಹಾಗು ಜನಪರ ವಾಗಿರುತ್ತದೆ

ಅನ್ನೋದು ರಾಯಬಾಗದಲ್ಲಿ ನಡೆದ ಅಭಿಯಾನ ಸಾಭೀತು ಪಡಿಸಿದೆ
ಮಹಾಪರುಷರ ಜಯಂತಿ ಬಂದಾಗ ಅವರ ಭಾವ ಚಿತ್ರಕ್ಕೆ ಪುಷ್ಪಹಾರ ಹಾಕಿ ಉದಬತ್ತಿ ಬೆಳಗಿ ಪೂಜೆ ಮಾಡಿ ಜಯಂತಿ ಆಚರಿಸುವದು ರಾಜಕಾರಣಿಗಳ ಸ್ಟೈಲ್ ಆದ್ರೆ ಮಾಜಿ ಶಾಸಕ ಅಭಯ ಪಾಟೀ ಮಹಾ ಪರುಷರ ಜಯಂತಿ ನಿಮಿತ್ಯ ಸರ್ಕಾರಿ ಶಾಲೆಗೆ ಬಣ್ಣ ಹಚ್ಚಿ ಶಾಲೆಯ ಶಿಕ್ಷಕರ ಮತ್ತು ಮಕ್ಕಳ ಪಾಲಕರ ಮೆಚ್ಚುಗೆ ಗಳಿಸುವದರ ಜೊತೆಗೆ ಹೊಸ ಸಂಪ್ರದಾಯಕ್ಕೆ ಅಭಯ ಪಾಟೀಲ ನಾಂದಿ ಹಾಡಿದ್ದಾರೆ

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *