ಆಧಾರ ರಹಿತ ಆರೋಪ ಅಭಯು ಪಾಟೀಲ ಕಿಡಿ
ಬೆಳಗಾವಿ- ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲವರು ತಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡಿ ಒಂದೇ ಕೇಸನ್ನು ವಿವಿಧ ತನಿಖಾ ಸಂಸ್ಥೆಗಳಲ್ಲಿ ದಾಖಲು ಮಾಡಿ ಸಾರ್ವಜನಿಕರಿಗೆ ದಿಶಾಬೂಲು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಅಭಯ ಪಾಟೀಲ ಆಕ್ರೋಶ ವ್ಯೆಕ್ತಪಡಿಸಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಚುನಾವಣೆ ಸಮೀಸುತ್ತಿದ್ದಂತೆ ನನ್ನ ಮೇಲೆ ಇಲ್ಲ ಸಲ್ಲದ ಆರೋಪ.ಮಾಡಲಾಗುತ್ತಿದೆ ನನ್ನ ವಿರುದ್ಧ ಎಸಿಬಿ ತನಿಖೆಗೆ ಮಾಡಿದ್ದ ಆದೇಶವನ್ನ ಹೈಕೋರ್ಟ್ ರದ್ದು ಮಾಡಿದೆ ಬೆಳಗಾವಿ ೪ನೇ ಜಿಲ್ಲಾ ನ್ಯಾಯಾಲಯದ ಆದೇಶವನ್ನ ರದ್ದು ಪಡಿಸಿದ ಧಾರವಾಡ ಹೈಕೋರ್ಟದಿಂದ ಆದೇಶ.ಬಂದಿದೆ ಆದಾಗ್ಯು ಕೆಲವರು ಒಂದೇ ಕೇಸನ್ನು ಮತ್ತೆ ಮತ್ತೆ ದಾಖಲು ಮಾಡಿ ತಮ್ಮ ತ್ಯೆಜೋವಧೆಗೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಭಯ ಪಾಟೀಲ ಆರೋಪಿಸಿದ್ದಾರೆ
ಅಕ್ರಮ ಆಸ್ತಿ ಸಂಪಾದನೆ ಎಂದು ಕೆಲವರೂ ಕೇಸ ದಾಖಲಿಸಿದ್ದರು.
2012ರಲ್ಲಿ ಲೋಕಾಯುಕ್ತಗೆ ಸುಜೀತ ಮುಳುಗುಂದ, ಅನಂತರ ಇದೇ ವಿಚಾರವನ್ನ ಕಿರಣ ಗಾವಡೆ ಎನ್ನುವವರು ಕೇಸ್ ದಾಖಲಿಸಿದ್ರು..
ಈಗ ಅದೇ ಸುಜೀತ ಮುಳಗುಂದ ಎಸಿಬಿಗೆ ದೂರು ನೀಡಿದ್ರು ಹೀಗೆ ಒಂದೇ ಕೇಸನ್ನು ಹಲವಾರು ಬಾರಿ ದಾಖಲು ಮಾಡುತ್ತಿದ್ದು ಈ ರೀತಿ ಸುಳ್ಳು ಆರೋಪ ಮಾಡಿದರೆ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವದು ಎಂದು ಅಭಯ ಪಾಟೀಲ ಎಚ್ಚರಿಕೆ ನೀಡಿದ್ದಾರೆ
ನನ್ನ ಮೇಲೆ ಯಾವುದೇ ಆಧಾರ ರಹಿತ ಆರೋಪ ಮಾಡಿದ್ರು ವಿರೋಧಿಗಳಿಗೆ ಸೂಕ್ತ ಉತ್ತರ ನೀಡುವೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರವಿದೇ ಹೊರತು ಕಾಂಗ್ರೆಸ್ ಅಲ್ಲ. ರಾಜ್ಯ ಸರ್ಕಾರ ತನಿಖಾ ಸಂಸ್ಥೆಗಳನ್ನ ದುರುಪಯೋಗ ಮಾಡಿಕೊಳ್ಳತ್ತಿದೇ ಎಂದ ಅಭಯ ಪಾಟೀಲ ಆರೋಪ ಮಾಡಿದರು