ಬೆಳಗಾವಿ- ಪಕ್ಷಾಂತರ ಮಾಡಿದ ಹದಿನೇಳು ಜನ ಶಾಸಕರನ್ನು ಅನರ್ಹರನ್ನಾಗಿ ಆದೇಶ ಮಾಡಿದ್ದ ಮಾಜಿ ಸ್ಪೀಕರ ಇಂದು ಗೋಕಾಕಿನಲ್ಲಿ ಸದ್ದು ಮಾಡಿದ್ರು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಚಾಟಿ ಬೀಸಿದರು.
ಗೋಕಾಕಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್2023 ರ ವರೆಗೆ ರಮೇಶ ಜಾರಕಿಹೊಳಿ ಅನರ್ಹ ಮಾಡಿದೆ
ನನ್ನ ತೀರ್ಪಿನಿಂದ ರಮೇಶ ಜಾರಕಿಹೊಳಿ ಸುಪ್ರೀಂ ಕೋರ್ಟ್ ಹೋದ್ರು.
ಸುಪ್ರೀಂ ಕೋರ್ಟ್ ನನ್ನ ತೀರ್ಪು ಎತ್ತಿ ಹಿಡಿದಿದೆ
ಇದು ನನಗೆ ನೆಮ್ಮದಿ ತಂದಿದೆ
ಅವಧಿ ಬಗ್ಗೆ ಗೋಕಾಕ್ ಕ್ಷೇತ್ರದ ಜನರೇ ತೀರ್ಮಾನ ಮಾಡಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದರು
ಯಾರೋ ಒಬ್ಬರು ಸಿಎಂ ಆಗಲು ಪ್ರಮಾಣ ವಚನ ಸ್ವೀಕಾರ ಮಾಡಬೇಕು.ಯಡಿಯೂರಪ್ಪ ಪ್ರಮಾಣ ಸ್ವೀಕಾರ ಸಂದರ್ಭದಲ್ಲಿ ಸಂವಿಧಾನದ ಆಶಯಕ್ಕೆ ಬದ್ದ ಎಂದು ಪ್ರಮಾಣ ಸ್ವೀಕಾರ ಮಾಡಿದ್ದಾರೆ.
ಆದರೇ ಯಡಿಯೂರಪ್ಪ ಅನರ್ಹರನ್ನು ಗೆಲ್ಲಿಸಿ ಕಳುಹಿಸಿ ಎಂದು ಮನವಿ ಮಾಡಿದ್ದಾರೆ.ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧಿ ನಂತರ ಈ ಪುಣ್ಯಾತ್ಮನ ಜನನ ಆಗಿದೆ ಎಂದು ರಮೇಶ್ ಕುಮಾರ ಲೇವಡಿ ಮಾಡಿದ್ರು
ಯಡಿಯೂರಪ್ಪ ಯಾವುದೇ ಸಂವಿಧಾನದ ಅರಿವೇ ಇಲ್ಲದೆ ಅನರ್ಹರನ್ನು ಗೆಲ್ಲಿಸಿ ಎಂದು ಹೇಳಿದ್ದಾರೆ.
ಇದು ಪ್ರಜಾಪ್ರಭುತ್ವಕ್ಕೆ ಮಾಡಿರೋ ದೊಡ್ಡ ಅಪಮಾನ ಆಗಿದೆಸಂವಿಧಾನದ ಮಾಡೋವಾಗ ದುಷ್ಟರು ಇರ್ತಾರೆ ಎಂದು ಗೊತ್ತಿರಲಿಲ್ಲ.ರಮೇಶ ಕುಮಾರ್ ಕಾಂಗ್ರೆಸ್ ಎಜೆಂಟ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರುರಮೇಶ ಜಾರಕಿಹೊಳಿ ಯಾರ ಏಜೆಂಟ್ ಆಗಿ ಮುಂಬೈಗೆ ಹೋಗಿದ್ರು ಎಂದು ರಮೇಶ್ ಕುಮಾರ್ ಪ್ರಶ್ನಿಸಿದರು.
ಅನರ್ಹತೆ ಅವಧಿ ನನ್ನ ಪ್ರಕಾರ 2023 ಎಂದು ನನ್ನ ಅಭಿಪ್ರಾಯ..ಆದರೆ ಸುಪ್ರೀಂ ಕೋರ್ಟ್ ತೀರ್ಪುನ್ನು ನಾನು ಒಪ್ಪಿಕೊಳ್ಳುತ್ತೇನೆ
ನನಗೆ ಗೊಂದಲ ಇಲ್ಲ ಸುಪ್ರೀಂ ಕೋರ್ಟ್ ಗೆ ಗೊಂದಲ ಇದೆ.ಅವರನ್ನೇ ಸುಪ್ರೀಂ ಕೋರ್ಟ್ ಗೆ ಫೋನ್ ಮಾಡಿ ಕೇಳಿಕೆ.ಪಕ್ಷಾಂತರ ಕಾಯ್ದೆಯಲ್ಲಿ ಸಾಕಷ್ಟು ಲೋಪದೋಷ ಇದೆಇದನ್ನು ಪ್ರಭಲ ಆಗಬೇಕು ಎಂದು ತೀರ್ಪಿನಲ್ಲಿ ಹೇಳಿದೆ.
ಈ ರೀತಿ ಮಾಡಿದ್ರೆ ವ್ಯಾಪಾರಿಕಣ ನಿಲ್ಲಲ್ಲಿದೆ ಎಂದರು
ಕಾಂಗ್ರೆಸ್ ಖಾಲಿ ಮಾಡೋ ಶಕ್ತಿ ಇದೆ ರಮೇಶ ಜಾರಕಿಹೊಳಿ ಹೇಳಿಕೆ ವಿಚಾರ.
ಚಮಚಾಗಳಿಗೆ ಚಮಚಾಗಿರಿ ಬಗ್ಗೆ ವ್ಯವಸ್ಥೆ ಗೊತ್ತು.
ನಾನು ಅಪ್ಪಾ ಅಮ್ಮನಿಗೆ ಹುಟ್ಟಿದವನು.
ನಮಗೆ ಚಮಚಾಗಿರಿ ಬಗ್ಗೆ ಅಷ್ಟಾಗಿ ಗೊತ್ತಿಲ್ಲ ಎಂದು ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟರು.
ಶ್ರೀಮಂತ ಪಾಟೀಲ್ ಹೃದಯ ಸಂಭಂದಿ ಕಾಯುಲೆ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲು ವಿಚಾರ.
ಹಾರ್ಟ್ ಇದರೆ ಶ್ರೀಮಂತ ಪಾಟೀಲ್ ತಾಯಿಗಂಡತನ ಮಾಡುತ್ತಿರಲಿಲ್ಲ.
ಶ್ರೀಮಂತ ಪಾಟೀಲ್ ವಿರುದ್ಧ ರಮೇಶ ಕುಮಾರ್ ವಾಗ್ದಾಳಿ ನಡೆಸಿದರು
ಒಂದುವರಿ ವರ್ಷಕ್ಕೆ ವ್ಯಾಪರಕ್ಕೆ ಶ್ರೀಮಂತ ಪಾಟೀಲ್ ನಿಂತರು.
ಈ ಚುನಾವಣೆ ಕಾಂಗ್ರೆಸ್, ಬಿಜೆಪಿ ನಡುವೆ ಅಲ್ಲ.
ಸಂವಿಧಾನದ ಪರ, ವಿರೋಧಿ ಹೋರಾಟ.
ದೇಶ ಉಳಿಯಬೇಕು ಅಂದ್ರೆ ಸಂವಿಧಾನದ ಉಳಿಯಬೇಕು.ಸುಪ್ರೀಂ ಕೋರ್ಟ್ ಬಾಕಿ ಉಳಿದಿರೋ ತೀರ್ಪನ್ನು ಜನ ಕೋಡ್ತಾರೆ.
15 ಕ್ಷೇತ್ರದಲ್ಲಿ ಸಂವಿಧಾನಕ್ಕೆ ಗೆಲುವು ಆಗಲಿದೆ
ಇವರು ಗೆದ್ದರೆ ಸಂವಿಧಾನಕ್ಕೆ ಹಿನ್ನಡೆಯಾಗಲಿದೆ.
ನಾನು ಕಾಗವಾಡಕ್ಕೆ ಹೋದಾಗ ಶ್ರೀಂಮತ ಪಾಟೀಲಗೆ ಹಾರ್ಟ್ ಅಟ್ಯಾಕ್ ಆಗಿರಬೇಕು
ನನ್ನ ಹೆಸರು ಹೇಳಿದರೆ ಹಲವರಿಗೆ ಹಾರ್ಟ್ ಅಟ್ಯಾಕ್ ಆಗುತ್ತೆ.ಈಗಲೂ ರಮೇಶ ಜಾರಕಿಹೊಳಿ ಸ್ನೇಹಿತ.
ನನ್ನ ಮಾತು ಕೇಳಿದರೆ ಮಣ್ಣು ತಿನೋದು ಬೇಡ ಅಂತ ಹೇಳುತ್ತಿದೆ.
ಮಾಜಿ ಸ್ಪೀಕರ್ ರಮೇಶ ಕುಮಾರ ಹೇಳಿದರು