Related Articles
ಬೆಳಗಾವಿ :ಬೈಕ್ ಕಿಡಿಸುವಂತೆ ತಂದೆ ಮಗನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ತಂದೆ ಮಗನಿಗೆ ರಿವಾಲ್ವರ್ ನಿಂದ ಶೂಟ್ ಮಾಡಿದ್ದು ಮಗ ಸ್ಥಳದಲ್ಲಿಯೇ ಅಸುನೀಗಿದ್ದಾನೆ
ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ತಂದೆಯೇ ರಿವಾಲ್ವರ್‌ನಿಂದ ಗುಂಡುಹಾರಿಸಿ ಪುತ್ರನನ್ನ ಹತ್ಯೆ ಮಾಡಿದ್ದು, ತಂದೆ ಮಾಡಿದ ಫೈರಿಂಗ್‌ಗೆ ಪತ್ನಿ ಮತ್ತು ಪುತ್ರಿಯು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಿನ್ನೆ ರಾತ್ರಿ ಬೈಲಹೊಂಗಲ ಪಟ್ಟಣದ್ದ ನಯಾ ನಗರದಲ್ಲಿ ಈ ಘಟನೆ ನಡೆದಿದೆ. ಆರೋಪಿ ವಿಠ್ಠಲ ಇಂಡಿ ಹಾರಿಸಿದ ಗುಂಡಿಗೆ ಪುತ್ರ, ಯೋಧ ಈರಣ್ಣ ಇಂಡಿ 21 ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ
. ಈರಣ್ಣಗೆ ಎದೆಗೆ ಸೇರಿ ಎರಡೂ ಗುಂಡು ತಗಲಿವೆ. ವಿಠಲ ಪತ್ನಿ ಅನುಸೂಯಾಳಿಗೆ ಮೂರು ಗುಂಡು ಹಾಗೂ ಪುತ್ರಿ ಪ್ರೀತಿಗೆ ಒಂದು ಗುಂಡು ತಗಲಿದೆ. ನಿನ್ನೆಯೇ ಯೋಧ ಈರಣ್ಣ ಬೆಂಗಳೂರಿನ ಎಂಇಸಿಯಿಂದ ರಜೆಯಿಂದ ಮನೆೆಗೆ ಬಂದಿದ್ದನು. ರಾತ್ರಿ ಎಲ್ಲರೂ ಮನೆಯಲ್ಲಿದ್ದಾಗ ಮನೆ ಆಗಮಿಸಿ ಆರೋಪಿ ವಿಠಲ ಹೊಸ ವಾಹನ ಖರೀದಿಸಲು ಹಣ ನೀಡುನಂತೆ ಬೇಡಿಕೆ ಇಟ್ಟಿದ್ದಾನೆ. ಈ ವಿಚಾರವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ಆರೋಪಿ ವಿಠಲ ಯದ್ವಾತದ್ವಾ ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದಾರೆ. ಆರೋಪಿ ವಿಠಲಗೆ ಇಬ್ಬರು ಪತ್ನಿಯರಿದ್ದು, ಎರಡನೇ ಪತ್ನಿಗೆ ಪದೇ ಪದೇ ಆಸ್ತಿ ನೀಡುವಂತೆ ಮತ್ತು ಪುತ್ರನಿಗೆ ಹಣ ನೀಡುವಂತೆ ಪೀಡಿಸುತ್ತಿದ್ದನುವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊಳೆಯಿಂಗಳ ಗ್ರಾಮದ ಆರೋಪಿ ವಿಠಲ ಇಂಗಳಿಗೆ 21 ವರ್ಷದ ಹಿಂದೆ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದ ಅನುಸೂಯಾ ಜತೆಗೆ ವಿವಾಹವಾಗಿತ್ತು. ಗುಂಡು ಹಾರಿಸಿದ ಬಳಿಕ ಆರೋಪಿ ವಿಠಲ ಪಾರಿಯಾಗಿದ್ದಾನೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ