ಬೆಳಗಾವಿ:
ನಗರದ ಫೀನಿಕ್ಸ್ ಸ್ಪೋರ್ಟ್ಸ್ ಕೌನ್ಸಿಲ್ ವತಿಯಿಂದ ೧೩ ವರ್ಷದೊಳಗಿನ ಬಾಲಕರ ಅಂತರ್ ಶಾಲಾ ಪುಟ್ಬಾಲ್ ಟೂರ್ನಿ ಆ.೨೦ರಿಂದ ೨೭ರವರೆಗೆ ಫೀನಿಕ್ಸ್ ಆಂಗ್ಲ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶಾಲೆಯ ಮುಖ್ಯಶಿಕ್ಷಕಿ ನಂದಿನಿ ಸೇಡೇಕರ್ ತಿಳಿಸಿದರು.
ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಗರದ ೧೮ ಶಾಲೆಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಕಳೆದ ಏಳು ವರ್ಷಗಳಿಂದ ಟೂರ್ನಿ ಆಯೋಜಿಸಲಾಗುತ್ತಿದೆ. ವಿಜೇತ ಹಾಗೂ ರನ್ನರ್ ಅಪ್ ತಂಡಕ್ಕೆ ಟ್ರೋಫಿ ನೀಡಲಾಗುವುದು. ಬಾಲಕರಲ್ಲಿ ಕ್ರೀಡಾ ಮನೋಭಾವ ಬೆಳೆಸುವ ದೃಷ್ಟಿಯಿಂದ ಟೂರ್ನಿ ಆಯೋಜಿಸಲಾಗುತ್ತಿದೆ ಎಂದರು. ಐಎಂಎ ಉಪಾಧ್ಯಕ್ಷ ಡಾ. ಮಿಲ್ಲಿಂದ್ ಹಳಗೇಕರ ಟೂರ್ನಿಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
Check Also
ಆಪರೇಷನ್ ಸಿಂಧೂರ್ ನಲ್ಲಿ ಬೆಳಗಾವಿಯ ಸೊಸೆ…
ಬೆಳಗಾವಿ- ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮನ ಕ್ರಾಂತಿಯ ನೆಲ, ದೇಶದಲ್ಲಿ ಕ್ರಾಂತಿ ಆದಾಗ …